Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಊರ್ವಶಿ ಬಗ್ಗೆ ರಿಷಭ್ ಪಂತ್ ತಲೆಕೆಡಿಸಿಕೊಂಡಿಲ್ಲ, ಆಕೆಯೇ ಚುಡಾಯಿಸಲೆಂದು ಬಯಸುತ್ತಾಳೆ : ಶುಭಮನ್ ಗಿಲ್

Rishabh pant

ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಹಾಗೂ ಬಾಲಿವುಡ್ ನಟಿ ರಿಷಭ್ ಪಂತ್ ನಡುವಿನ ಗಾಸಿಪ್ ಇತ್ತೀಚೆಗೆ ಜೋರಾಗಿಯೇ ಕೇಳಿಬಂದಿತ್ತು. ರಿಷಭ್ ಪಂತ್‌ ಎಲ್ಲಿಗೆ ತೆರಳಿದ್ರು ಅಭಿಮಾನಿಗಳು ಸಾಕಷ್ಟು ಕಾಲೆಳೆಯುತ್ತಾರೆ. ಅದ್ರಲ್ಲೂ ಕ್ರಿಕೆಟ್ ಮೈದಾನದಲ್ಲಿ ಬೌಂಡರಿ ಲೈನ್‌ ಬಳಿ ಕಂಡ ಪಂತ್‌ರನ್ನು ಕಂಡ್ರೆ ಸಾಕು ಊರ್ವಶಿ..ಊರ್ವಶಿ.. ಎಂದು ಅಭಿಮಾನಿಗಳು ಕಿರುಚಿರುವ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿವೆ.

ರಿಷಭ್ ಪಂತ್ ಹಾಗೂ ಊರ್ವಶಿ ಸಂಬಂಧದ ಕುರಿತಾಗಿ ಟೀಂ ಇಂಡಿಯಾ ಯುವ ಓಪನರ್ ಶುಭಮನ್ ಗಿಲ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸೋನಮ್ ಭಾಜ್ವಾ ಪ್ರಸ್ತುತಪಡಿಸುವ ಚಾಟ್ ಶೋ 'ದಿಲ್ ದಿಯಾನ್ ಗಲ್ಲಾನ್' ಶೋನಲ್ಲಿ ರಿಷಭ್ ಪಂತ್‌ಗೆ ತಂಡದ ಆಟಗಾರರು ಚುಡಾಯಿಸುತ್ತಾರೆಯೇ? ಅಥವಾ ಹೊರಗಡೆ ಅಭಿಮಾನಿಗಳು ಮಾತ್ರ ಊರ್ವಶಿ ಹೆಸರಿನಲ್ಲಿ ಚುಡಾಯಿಸುತ್ತಿದ್ದಾರೋ? ಎಂಬ ಪ್ರಶ್ನೆಯನ್ನ ಕೇಳಲಾಯಿತು.

ಇದಕ್ಕೆ ಉತ್ತರಿಸಿರುವ ಶುಭಮನ್ ಗಿಲ್ '' ರಿಷಭ್ ಪಂತ್ ಕಡೆಯಿಂದ ಆ ರೀತಿಯಾಗಿ ಏನು ಇಲ್ಲ. ಆಕೆಯ ಚಟುವಟಿಕೆಗಳಿಂದ ಆತನ ಗಮನ ಬೇರೆಡೆ ಹರಿದಿಲ್ಲ. ನಿಜ ಹೇಳಬೇಕೆಂದ್ರೆ ಆಕೆಯೇ ತನ್ನನ್ನು ಯಾರಾದರೂ ಚುಡಾಯಿಸಲೆಂದು ಬಯಸುತ್ತಾಳೆ'' ಎಂದು ಶೋವೊಂದರಲ್ಲಿ ಶುಭಮನ್ ಹೇಳಿರುವ ಮಾತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮಾಧ್ಯಮ ವರದಿಯ ಪ್ರಕಾರ ರಿಷಭ್ ಪಂತ್ ಮತ್ತು ಊರ್ವಶಿ ರೌಟೇಲಾ ಈ ಹಿಂದೆ ಡೇಟಿಂಗ್ ನಡೆಸಿದ್ದರು ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಬಾಲಿವುಡ್ ಹಂಗಾಮಾ ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಊರ್ವಶಿ ರೌಟೇಲಾ ಅವರು ಒಮ್ಮೆ ದೆಹಲಿಯಲ್ಲಿ ಕಾರ್ಯಕ್ರಮವೊಂದಕ್ಕೆ ಬಂದಾಗ 10 ಗಂಟೆಗಳಿಗೂ ಹೆಚ್ಚು ಕಾಲ ಶೂಟಿಂಗ್ ನಡೆದಿತ್ತು. ಆದರೆ 'ಆರ್‌ಪಿ' ಅಕ್ಷರದಿಂದ ಹೆಸರು ಪ್ರಾರಂಭವಾಗುವ ಸೆಲೆಬ್ರಿಟಿ ಗಂಟೆಗಟ್ಟಲೆ ಹೋಟೆಲ್‌ನಲ್ಲಿ ನನಗಾಗಿ ಕಾಯುತ್ತಿದ್ದರು. ನನ್ನೊಂದಿಗೆ ಮಾತನಾಡಲು ಹರಸಾಹಸ ಪಟ್ಟಿದ್ದಾರೆ ಎಂಬ ಹೇಳಿಕೆ ನೀಡಿದ್ದರು. ಈ ಕುರಿತಾಗಿ ರಿಷಭ್ ಪಂತ್ ಖಾರವಾಗಿಯೇ ಉತ್ತರ ನೀಡಿದ್ರು.

ಆಸ್ಟ್ರೇಲಿಯಾದಲ್ಲಿ ಕಳೆದ ಭಾನುವಾರಷ್ಟೇ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ರಿಷಭ್ ಪಂತ್ ಜಿಂಬಾಬ್ವೆ ವಿರುದ್ಧದ ಪಂದ್ಯ ಹಾಗೂ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆದರು. ಆದ್ರೆ ರಿಷಭ್ ಮಿಂಚುವಲ್ಲಿ ವಿಫಲವಾಗಿದ್ದಲ್ಲದೆ ಭಾರತ 10 ವಿಕೆಟ್‌ಗಳಿಂದ ಸೋಲನ್ನ ಅನುಭವಿಸಿತು.

Story first published: Saturday, November 19, 2022, 22:03 [IST]
Other articles published on Nov 19, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+