ಆರ್‌ಸಿಬಿಯ ರೊಮಾರಿಯೊ ಶೆಫರ್ಡ್ ಅಬ್ಬರದ ಆಟ ವ್ಯರ್ಥ: ಕಿವೀಸ್‌ಗೆ ಜಯ
ವೆಸ್ಟ್ ಇಂಡೀಸ್ ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಈ ವೇಳೆ ನ್ಯೂಜಿಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ 5 ಪಂದ್ಯಗಳ ಟಿ20ಯ ಸರಣಿಯ ಮೂರನೇ ಪಂದ್ಯ ನೆಲ್ಸನ್‌ನಲ್ಲಿ ನಡೆಯಿತು. ಈ ವೇಳೆ ಆರ್‌ಸಿಬಿಯ ಸ್ಟಾರ್ ಆಟಗಾರ ರೊಮಾರಿಯೊ ಶೆಫರ್ಡ್ ಅಮೋಘ ಪ್ರದರ್ಶನ ನೀಡಿದರೂ, ಅವರ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಲು ಸಾಧ್ಯವಾಗಲಿಲ್ಲ. ನ್ಯೂಜಿಲೆಂಡ್ ಈ ಪಂದ್ಯದಲ್ಲಿ 9 ರನ್‌ಗಳಿಂದ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಪಂದ್ಯದ ಕೊನೆಯ ಓವರ್‌ನಲ್ಲಿ ವಿಂಡೀಸ್ ತಂಡಕ್ಕೆ ಗೆಲ್ಲಲು 12 ರನ್ ಅವಶ್ಯಕತೆ ಇತ್ತು. ರೊಮಾರಿಯೊ ಶೆಫರ್ಡ್ ಸಹ ಕ್ರೀಸ್‌ನಲ್ಲಿದ್ದರು. ಕಿವೀಸ್ ಪರ ಕೈಲ್ ಜೇಮಿಸನ್ ಬೌಲ್ ಮಾಡಲು ಬಂದರು. ಈ ವೇಳೆ ಜೈಮಿಸನ್ ಬಿಗುವಿನ ದಾಳಿ ನಡೆಸಿದರು. ಈ ಓವರ್‌ನ ಕೊನೆಯ ಎಸೆತದಲ್ಲಿ ರೊಮಾರಿಯೊ ಶೆಫರ್ಡ್ ಲಾಂಗ್ ಆಫ್ ಮೇಲೆ ಸಿಕ್ಸರ್ ಬಾರಿಸಲು ಪ್ಲ್ಯಾನ್ ಮಾಡಿಕೊಂಡಿದ್ದರು. ಇದೇ ಕ್ಷೇತ್ರದಲ್ಲಿ ನಿಂತಿದ್ದ ಮಿಚೆಲ್ ಕ್ಯಾಚ್ ಪಡೆದರು. ಬಳಿಕ ಸಂಭ್ರಮ ಮುಗಿಲು ಮುಟ್ಟಿತ್ತು.

178 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ತಂಡದ ಆರಂಭ ಕಳಪೆಯಾಗಿತ್ತು. ತಂಡದ ಮೊತ್ತ 15 ಆಗಿದ್ದಾಗ ಇಬ್ಬರು ಆಟಗಾರರು ಪೆವಿಲಿಯನ್ ಸೇರಿದ್ದರು. ಅಲಿಕ್ ಅಥನಾಜೆ 31, ಅಕೀಮ್ ಆಗಸ್ಟೆ 24 ರನ್ ಬಾರಿಸಿದರು. ಆದರೆ ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಕೆಳ ಕ್ರಮಾಂಕದಲ್ಲಿ ರೊಮಾರಿಯೊ ಶೆಫರ್ಡ್ ತಮ್ಮ ನೈಜ್ಯ ಆಟವನ್ನು ಆಡಿದರು. ಇವರು 34 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 49 ರನ್ ಬಾರಿಸಿ ಔಟ್ ಆದರು. ಶಮರ್ ಸ್ಪ್ರಿಂಗರ್ 39 ರನ್ ಬಾರಿಸಿದರು. ವಿಂಡೀಸ್ 19.5 ಓವರ್‌ಗಳಲ್ಲಿ 168 ರನ್‌ಗಳಿಗೆ ಆಲೌಟ್ ಆಯಿತು.
ಕಾನ್ವೆ ಅರ್ಧಶತಕ
ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆವನ್ ಕಾನ್ವೆ 34 ಎಸೆತಗಳಲ್ಲಿ 56 ರನ್ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಈ ವೇಳೆ 6 ಬೌಂಡರಿ, 2 ಸಿಕ್ಸರ್ ಸಿಡಿಸಿದರು. ಟಿಮ್ ರಾಬಿನ್ಸನ್ 23, ರಚಿನ್ ರವೀಂದ್ರ 26, ಡೇರಿಲ್ ಮಿಚೆಲ್ 41 ರನ್ ಬಾರಿಸಿದರು. ಉಳಿದ ಬ್ಯಾಟರ್‌ಗಳು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲು ವಿಫಲರಾದರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 177 ರನ್ ಸಿಡಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications