Sherfane Rutherford: ಟೈಟನ್ಸ್ ಗೆಲುವಿನಲ್ಲಿ ಮಿಂಚಿದ ವಿಂಡೀಸ್ ಪ್ಲೇಯರ್
26 ವರ್ಷದ ವೆಸ್ಟ್ ಇಂಡೀಸ್ ಬ್ಯಾಟರ್ ಶೆರ್ಫೇನ್ ರುದರ್ಫೋರ್ಡ್ ಅವರಿಗೆ ಸಾಲು ಸಾಲು ಗುಜರಾತ್ ಟೈಟನ್ಸ್ ಅವಕಾಶಗಳನ್ನು ನೀಡುತ್ತಿರುವ ಬಗ್ಗೆ ಪ್ರಶ್ನೆಗಳು ಇದ್ದವು. ಆದರೆ ತಮ್ಮ ಮೇಲಿನ ಟೀಕೆಗಳಿಗೆ ಮೈದಾನದಲ್ಲೇ ಉತ್ತರ ನೀಡುವ ಕಾರ್ಯವನ್ನು ಶೆರ್ಫೇನ್ ರುದರ್ಫೋರ್ಡ್ ಮುಂದುವರೆಸಿದ್ದಾರೆ. ವಿಂಡೀಸ್ ಪ್ಲೇಯರ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಗುಜರಾತ್ ಅಮೋಘ ಜಯ ಸಾಧಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು. ಆರಂಭಿಕ ಕೆಲವು ಪಂದ್ಯಗಳಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದ ಶೆರ್ಫೇನ್ ರುದರ್ಫೋರ್ಡ್ ಈಗ ತಮ್ಮ ಜವಾಬ್ದಾರಿ ಅರಿತು ಬ್ಯಾಟ್ ಮಾಡುತ್ತಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ್ದ 204 ರನ್‌ಗಳ ಗುರಿಯನ್ನು ಗುಜರಾತ್ ಟೈಟನ್ಸ್ ಇನ್ನು ನಾಲ್ಕು ಎಸೆತ ಬಾಕಿ ಇರುವಂತೆ ಮುಟ್ಟಿ ಬೀಗಿದೆ ಎಂದರೆ ಅದರಲ್ಲಿ ಜೋಸ್ ಬಟ್ಲರ್ ಹಾಗೂ ಶೆರ್ಫೇನ್ ರುದರ್ಫೋರ್ಡ್ ಅವರ ಕೊಡುಗೆ ಅಪಾರ. ಆರಂಭದಲ್ಲಿ ಎರಡು ವಿಕೆಟ್‌ಗಳು ಬೇಗನೇ ಬಿದ್ದಾಗ ಈ ಜೋಡಿ ಜವಾಬ್ದಾರಿಯನ್ನು ಹೊತ್ತುಕೊಂಡು ಬ್ಯಾಟ್ ಮಾಡಿತು. ಈ ಜೋಡಿ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿ ತಂಡಕ್ಕೆ ಆಧಾರವಾಯಿತು. ಗೆಲುವಿನಲ್ಲಿ ಬಟ್ಲರ್ ಆಟ ಎಷ್ಟು ಇಂಪಾರ್ಟೆಂಟ್ ಅಷ್ಟೇ ಶೆರ್ಫೇನ್ ರುದರ್ಫೋರ್ಡ್ ಬ್ಯಾಟಿಂಗ್ ಸಹ ಉಪಯುಕ್ತವಾಗಿತ್ತು.

ರುದರ್ಫೋರ್ಡ್ ಕಮಾಲ್
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಶೆರ್ಫೇನ್ ರುದರ್ಫೋರ್ಡ್ ಗುಜರಾತ್ ಟೈಟನ್ಸ್ ಸೋಲಿಗೆ ಕಾರಣ ಎಂದು ಎಲ್ಲರೂ ಬೊಟ್ಟು ಮಾಡಿ ತೋರಿಸಿದರು. ಈ ಪಂದ್ಯದಲ್ಲಿ ಹಾಫ್ ಸೈಡ್ ಯಾರ್ಕರ್‌ಗಳನ್ನು ಪ್ರಯೋಗಿಸಿದ ವಿಜಯ್ ಕುಮಾರ್ ವೈಶಾಖ್ ಶೆರ್ಫೇನ್ ರುದರ್ಫೋರ್ಡ್ ಅವರನ್ನು ಕಾಡಿದರು. ಆದರೆ ಈ ತಮ್ಮ ವೀಕ್ನೆಸ್‌ನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು. ಈ ಲೀಗ್‌ನಲ್ಲಿ ಟೈಟಾನ್ಸ್ ಪರ ಶೆರ್ಫೇನ್ ರುದರ್ಫೋರ್ಡ್ ಆಡಿದ 7 ಪಂದ್ಯಗಳಲ್ಲಿ 40ರ ಸರಾಸರಿಯಲ್ಲಿ 201 ರನ್ ಕಲೆ ಹಾಕಿದ್ದಾರೆ. ಈ ವೇಳೆ 15 ಬೌಂಡರಿ, 13 ಸಿಕ್ಸರ್ ಸಿಡಿಸಿದ್ದಾರೆ.
7.3 ಓವರ್‌ನಲ್ಲಿ ಶೆರ್ಫೇನ್ ರುದರ್ಫೋರ್ಡ್ ಬ್ಯಾಟ್ ಮಾಡಲು ಬಂದ ಇವರು ತಮ್ಮ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಶೆರ್ಫೇನ್ ರುದರ್ಫೋರ್ಡ್ 34 ಎಸೆತಗಳಲ್ಲಿ 1 ಬೌಂಡರಿ, 3 ಸಿಕ್ಸರ್ ನೆರವಿನಿಂದ 43 ರನ್ ಸಿಡಿಸಿ ತಂಡಕ್ಕೆ ನೆರವಾದರು. ಟೈಟನ್ಸ್ ಈ ಗೆಲುವಿನಲ್ಲಿ ಶೆರ್ಫೇನ್ ರುದರ್ಫೋರ್ಡ್ ಪಾತ್ರ ಸಹ ದೊಡ್ಡದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications