For Quick Alerts
ALLOW NOTIFICATIONS  
For Daily Alerts
 

WI vs BAN ODI: ಗುಜರಾತ್‌ ಟೈಟಾನ್ಸ್‌ ಪ್ಲೇಯರ್‌ ಅಬ್ಬರ: ಆರ್‌ಸಿಬಿ ಆಟಗಾರನ ಬಿಗುವಿನ ದಾಳಿ

ಸೌದಿಯಲ್ಲಿ ನಡೆದ ಐಪಿಎಲ್‌ ಮೆಗಾ ಹರಾಜಿನಲ್ಲಿ ಸ್ಟಾರ್‌ ಆಟಗಾರರನ್ನು ತಮ್ಮ ತಂಡಕ್ಕೆ ಹಲವು ತಂಡಗಳು ಸೇರಿಸಿಕೊಂಡಿವೆ. ಈ ಹರಾಜಿನಲ್ಲಿ ವಿಂಡೀಸ್‌ ಪ್ಲೇಯರ್‌ನನ್ನು ಕೊಂಡ ಗುಜರಾತ್‌ ಟೈಟಾನ್ಸ್‌ ಮುಖ ಮಂದಹಾಸದಿಂದ ಕೂಡಿದೆ. ಇದಕ್ಕೆ ಕಾರಣ ತಾವು ಖರೀದಿಸಿದ ಆಟಗಾರ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೀಡುತ್ತಿರುವ ಪ್ರದರ್ಶನ. ಬಾಂಗ್ಲಾದೇಶ ಹಾಗೂ ವೆಸ್ಟ್‌ಇಂಡೀಸ್ ತಂಡಗಳು ನಡುವೆ ಮೊದಲ ಏಕದಿನ ಪಂದ್ಯ ಭಾನುವಾರ ನಡೆಯಿತು. ಈ ಪಂದ್ಯದಲ್ಲಿ ಗುಜರಾತ್‌ ಪ್ಲೇಯರ್ ಆರ್ಭಟಕ್ಕೆ ಎದುರಾಳಿಗಳು ಸ್ಟನ್ ಆಗಿದ್ದಾರೆ.

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 294 ರನ್‌ ಸಿಡಿಸಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಆತಿಥೇಯ ವೆಸ್ಟ್‌ ಇಂಡೀಸ್‌ 47.4 ಓವರ್‌ಗಳಲ್ಲಿ 5 ವಿಕೆಟ್‌ಗೆ 295 ರನ್‌ ಸಿಡಿಸಿ ಜಯ ಸಾಧಿಸಿತು.

Sherfane Rutherford s Explosive Century Shines in WI vs BAN ODI Gujarat Titans Star Impresses

ಮೊದಲು ಬ್ಯಾಟ್ ಮಾಡಿದ ಬಾಂಗ್ಲಾ ಪರ ತಂಜೀದ್ ಹಸನ್ (60), ಮೆಹದಿ ಹಸನ್‌ ಮಿರ್ಜಾ (74), ಮಹಮದುಲ್ಲಾ (50) ಇವರು ಬಾರಿಸಿದ ಅರ್ಧಶತಕ ನೆರವಿನಿಂದ ಬಾಂಗ್ಲಾ ಮೊದಲ ಏಕದಿನ ಪಂದ್ಯದಲ್ಲಿ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತು. ಈ ಪಂದ್ಯದಲ್ಲಿ ಆರ್‌ಸಿಬಿ ಪ್ಲೇಯರ್‌ ರೋಮಿಯೊ ಶೆಫರ್ಡ್‌ ಸಹ ಮೂರು ವಿಕೆಟ್‌ ಪಡೆದು ಮಿಂಚಿದರು.

ಗುಜರಾತ್‌ ಪ್ಲೇಯರ್‌ ಸ್ಪೋಟಕ ಶತಕ

ಗುರಿಯನ್ನು ಬೆನ್ನಟ್ಟಿದ ವಿಂಡೀಸ್ ತಂಡದ ಆರಂಭ ಕಳಪೆ ಆಗಿತ್ತು. ಆರಂಭಿಕರು ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ನಾಲ್ಕನೇ ವಿಕೆಟ್‌ಗೆ ಶಾಯ್‌ ಹೋಪ್‌ ಹಾಗೂ ಶೆರ್ಫೇನ್ ರುದರ್ಫೋರ್ಡ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ನೆರವಾದರು. ಈ ಜೋಡಿ 99 ರನ್‌ಗಳನ್ನು ಸೇರಿಸಿತು. ಶಾಯ್ ಹೋಪ್‌ 3 ಬೌಂಡರಿ, 4 ಸಿಕ್ಸರ್‌ ಸಹಾಯದಿಂದ 86 ರನ್‌ ಸಿಡಿಸಿ ಔಟ್‌ ಆದರು.

Sherfane Rutherford s Explosive Century Shines in WI vs BAN ODI Gujarat Titans Star Impresses

ಹರಾಜಿನಲ್ಲಿ ಗುಜರಾತ್‌ ಟೈಟನ್ಸ್‌ ಖರೀದಿಸಿದರನ್ನು 2.60 ಕೋಟಿಗೆ ಶೆರ್ಫೇನ್ ರುದರ್ಫೋರ್ಡ್ ಖರೀದಿಸಿತ್ತು. ಈ ಸ್ಟಾರ್ ಪ್ಲೇಯರ್‌ ವಿಂಡೀಸ್‌ ಪರ ಅಮೋಘ ಇನಿಂಗ್ಸ್‌ ಕಟ್ಟಿದರು. ಇವರು ಕೇವಲ 80 ಎಸೆತಗಳಲ್ಲಿ 7 ಬೌಂಡರಿ, 8 ಸಿಕ್ಸರ್‌ ಸಹಾಯದಿಂದ 113 ರನ್‌ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಸ್ಫೋಟಕ ಶೈಲಿಯಲ್ಲಿ ಆಡುತ್ತಿದ್ದ ರುದರ್‌ಫೋರ್ಡ್ ಕೇವಲ 77 ಎಸೆತಗಳಲ್ಲಿ ಶತಕ ಪೂರೈಸಿದರು. ಜಸ್ಟಿನ್ ಗ್ರೀವ್ಸ್ ಅಜೇಯ 41 ರನ್‌ ಸಿಡಿಸಿ ತಂಡದ ಗೆಲುವಿನಲ್ಲಿ ಮಿಂಚಿದರು. ಶೆರ್ಫೇನ್ ರುದರ್ಫೋರ್ಡ್ ಅಮೋಘ ಆಟದ ಫಲವಾಗಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಂದಿತು.

ಗುಜರಾತ್‌ ಸೇರಿದ ವಿಂಡೀಸ್‌ ಪ್ಲೇಯರ್‌

ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್‌ ಶೆರ್ಫೇನ್ ರುದರ್ಫೋರ್ಡ್ ಅವರ ಮೇಲೆ ವಿಶ್ವಾಸವಿಟ್ಟು ಇವರಿಗೆ ತಂಡದಲ್ಲಿ ಸ್ಥಾನ ನೀಡಿತ್ತು. ಇವರನ್ನು ಪಡೆಯಲು ಗುಜರಾತ್ ಟೈಟಾನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳ ನಡುವೆ ಜಿದ್ದಾಜಿದ್ದು ನಡೆಯಿತು. ಈ ವೇಳೆ ಇವರಿಗೆ 2.60 ಕೋಟಿ ನೀಡಿದ ಗುಜರಾತ್‌ ನೀಡಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

Story first published: Monday, December 9, 2024, 10:22 [IST]
Other articles published on Dec 9, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+