ಭಾರತ vs ಇಂಗ್ಲೆಂಡ್ ಏಕದಿನ: ರೋಹಿತ್-ಧವನ್ ಜೋಡಿ ಇನ್ನಿಂಗ್ಸ್ ಆರಂಭಿಸುವುದನ್ನು ಖಚಿತ ಪಡಿಸಿದ ಕೊಹ್ಲಿ

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ ಆಡುವ ಬಳಗದ ಬಗ್ಗೆ ಸಾಕಷ್ಟು ಕುತೂಹಲಗಳು ಇವೆ. ಯಾವ ಆಟಗಾರ ಆಡುವ ಬಳಗದಲ್ಲಿ ಅವಕಾಶವನ್ನು ಪಡೆಯಬಹುದು ಎಂಬುದು ಅಭಿಮಾನಿಗಳ ಕಾತುರಕ್ಕೆ ಕಾರಣವಾಗಿದೆ. ಈ ಮಧ್ಯೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆರಂಭಿಕ ಜೋಡಿಯ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಜೋಡಿಯೇ ಆರಂಭಿಕರಾಗಿ ಕಣಕ್ಕಿಳಿಲಿದ್ದಾರೆ ಎಂದು ವಿರಾಟ್ ಕೊಹ್ಲಿ ಖಚಿತಪಡಿಸಿದ್ದಾರೆ. "ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಅವರೇ ಖಂಡಿತವಾಗಿಯೂ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಏಕದಿನ ಪಂದ್ಯಕ್ಕೆ ಬಂದಾಗ ಅದರಲ್ಲಿ ಯಾವುದೇ ಅನುಮಾನಗಳು ಇಲ್ಲ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಕಳೆದ ಕೆಲ ವರ್ಷಗಳಿಂದ ಅದ್ಭುತವಾದ ಆರಂಭವನ್ನು ಏಕದಿನ ಪಂದ್ಯಗಳಲ್ಲಿ ಭಾರತ ತಂಡಕ್ಕೆ ನೀಡುತ್ತಿದ್ದಾರೆ. ಹಾಗಾಗಿ ಆ ಜೋಡಿಯೇ ಮುಂದಿನ ಸರಣಿಯಲ್ಲಿಯೂ ಆರಂಭಿಕರಾಗಿ ಕಣಕ್ಕಿಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ" ಎಂದು ವಿರಾಟ್ ಕೊಹ್ಲಿ ಪ್ರತಿಕ್ರಿಯಿಸಿದ್ದಾರೆ.
ಈ ಸರಣಿ ಶಿಖರ್ ಧವನ್ ಪಾಲಿಗೆ ಬಹಳಷ್ಟು ಮಹತ್ವ ಪಡೆದುಕೊಳ್ಳುವುದರಲ್ಲಿ ಅನುಮಾನವಿಲ್ಲ. ಇತ್ತೀಚೆಗೆ ಶಿಖರ್ ಹೇಳಿಕೊಳ್ಳುವಂತಾ ಪ್ರದರ್ಶನವನ್ನು ನೀಡುವಲ್ಲಿ ವಿಫಲರಾಗಿದ್ದಾರೆ. ಕಲೆದ ಟಿ20 ಸರಣಿಯಲ್ಲಿಯೂ ಕೇವಲ ಒಂದು ಅವಕಾಶವನ್ನು ಪಡೆದುಕೊಂಡು ವಿಫಲರಾದ ಹಿನ್ನೆಲೆಯಲ್ಲಿ ಬೆಂಚ್ ಕಾಯುವಂತಾ ಸಂದರ್ಭ ಉಂಟಾಗಿತ್ತು. ಈಗ ಏಕದಿನ ಮಾದರಿಯಲ್ಲಿ ಯಾವ ರೀತಿಯ ಪ್ರದರ್ಶಮ ಬರಬಹುದು ಎಂಬುದು ಕುತೂಹಲ ಮೂಡಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications