ಶ್ರೀಲಂಕಾ ಪ್ರವಾಸ ಸರಣಿಗೆ ಭಾರತಕ್ಕೆ ಶಿಖರ್ ಧವನ್ ನಾಯಕ?!

ನವದೆಹಲಿ: ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಅವರು ಭಾರತದ ಶ್ರೀಲಂಕಾ ಪ್ರವಾಸದ ವೇಳೆ ನಿಯಮಿತ ಓವರ್‌ಗಳ ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ. ಅದೇ ಕಾಲಕ್ಕೆ ಕೆಲ ಪ್ರಮುಖ ಆಟಗಾರರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯುಸಿ ಆಗಿರುವುದರಿಂದ ಧವನ್ ಹೆಗಲಿಗೆ ಭಾರತದ ನಾಯಕತ್ವದ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಶಿಖರ್ ಧವನ್ ಅನುಭವಿ ಆಟಗಾರ. ಧವನ್ ಜೊತೆಗೆ ವೇಗಿ ಭುವನೇಶ್ವರ್ ಕುಮಾರ್, ಪೃಥ್ವಿ ಶಾ, ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್ ಕೂಡ ನಿಯಮಿತ ಓವರ್‌ಗಳ ತಂಡದಲ್ಲಿರಲಿದ್ದಾರೆ. ಭಾರತ-ಶ್ರೀಲಂಕಾ ಸರಣಿಯು 3 ಏಕದಿನ ಪಂದ್ಯಗಳು ಮತ್ತು 3 ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಜುಲೈ 13ರಿಂದ ಸರಣಿ ಆರಂಭಗೊಳ್ಳಲಿದೆ.

ಯಾಕೆ ಧವನ್ ನಾಯಕ?
ಜುಲೈ 13ರಿಂದ ಭಾರತ-ಶ್ರೀಲಂಕಾ ಮಧ್ಯೆ ನಿಯಮಿತ ಓವರ್‌ಗಳ ಸರಣಿ ಯೋಜಿಸಲಾಗಿದೆ. ಆದರೆ ದಿನಾಂಕದ ಬಗ್ಗೆ ಅಧಿಕೃತ ಪ್ರಕಟಣೆಯಾಗಿಲ್ಲ. ಜುಲೈ 13ರಿಂದ ಭಾರತ-ಶ್ರೀಲಂಕಾ ಸರಣಿ ಆರಂಭಗೊಂಡರೆ, ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗಾಗಿ ಯುನೈಟೆಡ್ ಕಿಂಗ್ಡಮ್‌ಗೆ ಹೋಗಿರುವ ಭಾರತ ತಂಡ ಜೂನ್ 18-22ರ ವರೆಗೆ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೆಣಸಾಡಿದರೆ, ಆಗಸ್ಟ್ 4ರಿಂದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಹೀಗಾಗಿ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇಲ್ಲದಿರುವುದರಿಂದ ಧವನ್ ತಂಡದ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದೆ.

ಇಂಗ್ಲೆಂಡ್‌ಗೆ ಹೋಗಲಿರುವ ಭಾರತ ತಂಡ
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪನಾಯಕ), ರೋಹಿತ್ ಶರ್ಮಾ, ಶುಬ್ಮನ್ ಗಿಲ್, ಮಾಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ರಿಷಭ್ ಪಂತ್ (ವಿಕೆಟ್ ಕೀಪರ್), ಆರ್. ಅಶ್ವಿನ್, ರವೀಂದ್ರ ಜಡೇಜಾ , ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಶಾರ್ದುಲ್ ಠಾಕೂರ್, ಉಮೇಶ್ ಯಾದವ್, ಕೆ.ಎಲ್ ರಾಹುಲ್(ಫಿಟ್‌ನೆಸ್ ಪರೀಕ್ಷೆಗೆ ಒಳಪಡಬೇಕಿದೆ) ಮತ್ತು ವೃದ್ಧಿಮಾನ್ ಸಾಹಾ (ಫಿಟ್‌ನೆಸ್ ಪರೀಕ್ಷೆಗೆ ಒಳಪಡಬೇಕಿದೆ)
ಮೀಸಲು ಆಟಗಾರರು: ಅಭಿಮನ್ಯು ಈಶ್ವರನ್, ಪ್ರಸಿದ್ಧ್ ಕೃಷ್ಣ, ಆವೇಶ್ ಖಾನ್, ಅರ್ಜಾನ್ ನಾಗ್ವಾಸ್ವಲ್ಲಾ.

ಶ್ರೀಲಂಕಾ ಸರಣಿಗೆ ಸಂಭಾವ್ಯ ಭಾರತ ತಂಡ
ಶಿಖರ್ ಧವನ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಾಲ್, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಪೃಥ್ವಿ ಶಾ, ದೀಪಕ್ ಚಾಹರ್, ರಾಹುಲ್ ಚಾಹರ್, ಜಯದೇವ್ ಉನಾದ್ಕತ್, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ ಹಾಗೂ ರಾಹುಲ್ ತೆವಾಟಿಯಾ, ಇಶಾನ್ ಕಿಶನ್ ಸೇರಿದಂತೆ ಮತ್ತಷ್ಟು ಆಟಗಾರರು ಆಯ್ಕೆಯಾಗುವ ಸಾಧ್ಯತೆಯಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications