Shikhar Dhawan: ಮತ್ತೆ ಪ್ರೀತಿಯಲ್ಲಿ ಬಿದ್ದ ಶಿಖರ್: ವಿಡಿಯೋ ವೈರಲ್
ಟೀಮ್ ಇಂಡಿಯಾದ ಸ್ಟಾರ್ ಆರಂಭಿಕ ಆಟಗಾರ ಶಿಖರ್ ಧವನ್, ತಮ್ಮ ಮೊದಲ ಪತ್ನಿಯಿಂದ ವಿಚ್ಛೇಧನ ಪಡೆದ ಬಳಿಕ ಒಂಟಿಯಾಗಿದ್ದಾರೆ. ಈಗ ಒಂಟಿಯಾಗಿರುವುದು ಅವರಿಗೆ ಬೋರೋ ಬೋರೋ ಅನಿಸುತ್ತಿದೆ. ಅದಕ್ಕೆ ಶಿಖರ್ ತಮ ಬಾಳಲ್ಲಿ ಸಂಗಾತಿಯ ಹುಡುಕಾಟದಲ್ಲಿದ್ದಾರೆ. ಈ ಬಗ್ಗೆ ದುಬೈನಲ್ಲಿ ನಡೆದಿದ್ದ ಚಾಂಪಿಯನ್ಸ್ ಟ್ರೋಫಿ ಪಂದ್ಯದ ವೇಳೆ ಗುಸುಗುಸು ಮಾತುಗಳು ಆರಂಭವಾಗಿದ್ದವು. ಆದರೆ ಅದಕ್ಕೆ ಪುಷ್ಠಿ ಸಿಕ್ಕಿರಲಿಲ್ಲ. ಆದರೆ ಈಗ ಧವನ್ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ಚಾಂಪಿಯನ್ಸ್ ಟ್ರೋಫಿಯ ವೇಳೆ ಗಬ್ಬರ್ ಅವರ ಆ ಒಂದು ವಿಡಿಯೋ ಸಖರ್ ವೈರಲ್ ಆಗಿತ್ತು. ಆ ವಿಡಿಯೋದಲ್ಲಿ ಶಿಖರ್ ಅವರ ಪಕ್ಕದಲ್ಲಿ ಒಬ್ಬ ಮಹಿಳೆ ಕುಳಿತುಕೊಂಡಿದ್ದಳು. ಆಗ ಬಳಕೆದಾರರು ಅವಳ ಹಿನ್ನೆಲೆ ತಿಳಿದುಕೊಳ್ಳಲು ಆರಂಭಿಸಿದರು. ಆಗಲೇ ಅವರಿಗೆ ತಿಳಿದಿದ್ದು, ಆ ಮಹಿಳಾ ಐರ್ಲೆಂಡ್ ಮೂಲದವರು ಎಂದು ತಿಳಿದು ಬಂದಿತ್ತು. ಇವರ ಹೆಸರು ಸೋಫಿ ಶೈನ್ ಎಂದು ತಿಳಿದಿತ್ತು. ಈಗ ಈ ಬಗ್ಗೆ ದೊಡ್ಡ ಅಪ್‌ಡೇಟ್ ಸಿಕ್ಕಿದ್ದು ಶಿಖರ್ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆ ನೀಡಿದ್ದಾರೆ.

ಶಿಖರ್ ಧವನ್ ಅವರ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಶಿಖರ್‌ಗೆ ನಿರೂಪಕಿ ಯೊಬ್ಬರು, ನಿಮ್ಮ ಗೆಳತಿ ಹಾಗೂ ಅವರ ಹೆಸರಿನ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಆರಂಭದಲ್ಲಿ ಶಿಖರ್ ಇಂತಹ ಪ್ರಶ್ನೆಗಳನ್ನು ಈ ವೇದಿಕೆಗಳಲ್ಲಿ ಕೇಳಿದ್ರೆ ಹೇಗೆ ಎಂದು ನಕ್ಕು ಸುಮ್ಮನಾಗುತ್ತಾರೆ. ಆದರೆ ಇದೇ ಪ್ರಶ್ನೆಗೆ ಮುಂದುವರೆಸುತ್ತಾ ಧವನ್ "ನಾನು ಯಾರ ಹೆಸರನ್ನು ಸಹ ತೆಗೆದುಕೊಳ್ಳಲು ಬಯಸುವುದಿಲ್ಲ. ಈ ರೂಮ್‌ನಲ್ಲಿರುವ ಸುಂದರ ಹುಡುಗಿ ನನ್ನ ಗೆಳತಿ ಎಂದು ತಿಳಿಸಿದ್ದಾರೆ.
ಶಿಖರ್ ಮನದಾಳ
ಆರಂಭದಲ್ಲಿ ಶಿಖರ್ ಕ್ರಿಕೆಟಿಂಗ್ ಭಾಷೇಯಲ್ಲಿ ಉತ್ತರಿಸಿದ್ದು, ನಾನು ನೀವು ಎಸೆಯುವ ಬೌನ್ಸರ್ ಹಾಗೂ ಗೂಗ್ಲಿಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇವುಗಳ ವಿರುದ್ಧ ಚೆನ್ನಾಗಿ ಆಡುವುದು ಸಹ ನಾನು ಅರಿತಿದ್ದೇನೆ ಎಂದು ಹೇಳುವ ಶಿಖರ್, ಜಾಣನಿಗೆ ಸನ್ನೆ ಹೆಚ್ಚು ಎಂದು ತಿಳಿಸಿದ್ದಾರೆ. ಚಾಂಪಿಯನ್ಸ್ ಟ್ರೋಫಿಯ ವೇಳೆ ಶಿಖರ್ ಧವನ್ ಅವರೊಂದಿಗೆ ಕಾಣಿಸಿಕೊಂಡಿದ್ದ ಸುಂದರ ಯುವತಿ ಈಗ ಈ ರೂಮ್‌ನಲ್ಲೂ ಕಾಣಿಸಿಕೊಂಡಿದ್ದಾರೆ.
ಎಎನ್‌ಐ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿರುವ ಧವನ್, "ನಾನು ನನ್ನ ಮಗನ ಜೊತೆ ಮಾತನಾಡಿ ವರ್ಷಗಳೇ ಕಳೆದಿವೆ. ಇದು ಕಷ್ಟಕರ. ಆದರೆ ಈ ನೋವುಗಳಿಂದ ನೀವು ಬದುಕಲು ಕಲಿಯುತ್ತೀರಿ. ನಾನು ಆತನನ್ನು ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಇದೇ ವೇಳೆ ತಿಳಿಸಿದ್ದಾರೆ. ಶಿಖರ್ ಧವನ್ ಅಕ್ಟೋಬರ್ 2023 ರಲ್ಲಿ ಆಯೇಷಾ ಮುಖರ್ಜಿ ಅವರಿಂದ ವಿಚ್ಛೇದನ ಪಡೆದರು ಮತ್ತು ಅವರ ಮಗನ ಪಾಲನೆಯನ್ನು ಅವರ ಪತ್ನಿ ನೋಡಿಕೊಳ್ಳುತ್ತಿದ್ದಾರೆ. ಈಗ ಅವರ ಮಗನನ್ನು ಸಂಪರ್ಕಿಸಲು ಅವರು ತೊಂದರೆ ಅನುಭವಿಸುತ್ತಿದ್ದಾರೆ.
ಶಿಖರ್ ಧವನ್ ಕಳೆದ ವರ್ಷ ಅಗಸ್ಟ್ 24 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications