For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆರಂಭಿಕನಾಗಿ 10,000 ರನ್ ಪೂರ್ಣಗೊಳಿಸಿದ ಧವನ್

Shikhar Dhawan has reached 10,000 runs in international cricket as an opener

ಕೊಲಂಬೋ, ಜುಲೈ 19: ಶ್ರೀಲಂಕಾ ಪ್ರವಾಸ ಕೈಗೊಂಡಿರುವ ಭಾರತೀಯ ಸೀಮಿತ ಓವರ್‌ಗಳ ತಂಡದ ನಾಯಕ ಶಿಖರ್ ಧವನ್ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸಾಕಷ್ಟು ಸ್ಮರಣೀಯ ಕ್ಷಣಗಳನ್ನು ಕಂಡಿದ್ದಾರೆ. ಮೊದಲ ಬಾರಿಗೆ ನಾಯಕನಾಗಿ ಭಾರತೀಯ ತಂಡವನ್ನು ಮುನ್ನಡೆಸಿರುವ ಧವನ್ ಶ್ರೀಲಂಕಾ ವಿರುದ್ಧ 1,000 ರನ್‌ಗಳನ್ನು ಪೂರೈಸಿದ್ದರು. ಅದಾದ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದಾರೆ ಧವನ್.

ಹೌದು, ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳನ್ನು ಆರಂಭಿಕನಾಗಿ ಗಳಿಸಿದ್ದಾರೆ. ಇನ್ನು ಏಕದಿನ ಕ್ರಿಕೆಟ್‌ ಮಾದರಿಯಲ್ಲಿ ಧವನ್ 6000 ರನ್‌ಗಳನ್ನು ಧವನ್ ಈ ಪಂದ್ಯದಲ್ಲಿ ಗಳಿಸಿದ್ದು ಈ ಸಾಧನೆ ಮಾಡಿದ 10ನೇ ಭಾರತೀಯ ಬ್ಯಾಟ್ಸ್‌ಮನ್ ಎನಿಸಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಧವನ್ ನಾಯಕನ ಆಟವನ್ನು ಪ್ರದರ್ಶಿಸಿದರು. ಶರಂಬಿಕನಾಗಿ ಕಣಕ್ಕಿಳಿದ ಧವನ್ ಅಜೇಯ 86 ರನ್‌ಗಳಿಸಿ ಮಿಂಚಿದ್ದರು. ಯುವ ಆಟಗಾರ ಇಶಾನ್ ಕಿಶನ್ ಹಾಗೂ ಪೃಥ್ವಿ ಶಾ ಕೂಡ ಅದ್ಭುತ ಆಟವನ್ನು ಪ್ರದರ್ಶಿಸಿದ್ದು ಶ್ರೀಲಂಕಾ ವಿರುದ್ಧ ಭಾರತ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10,000 ರನ್‌ಗಳಿಸಿದ ಭಾರತೀಯರ ಪೈಕಿ ಶಿಖರ್ ಧವನ್ ಈ ಸಾಧನೆ ಮಾಡಿದ ಭಾರತದ 5ನೇ ಆರಂಭಿಕ ಆಟಗಾರ ಎನಿಸಿದ್ದಾರೆ. ವೀರೇಂದ್ರ ಸೆಹ್ವಾಗ್, ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್ ಹಾಗೂ ರೋಹಿತ್ ಶರ್ಮಾ ಈ ಸಾಧನೆ ಮಾಡಿದ ಇತರ ಭಾರತೀಯ ಆರಂಭಿಕ ಆಟಗಾರರಾಗಿದ್ದಾರೆ.

ಇನ್ನು ಏಕದಿನ ಮಾದರಿಯಲ್ಲಿ 6000ಕ್ಕೂ ಅಧಿಕ ರನ್‌ಗಳಿಸಿದ ಭಾರತೀಯ ಆಟಗಾರರ ಜೊತೆಗೆ ಧವನ್ ಕೂಡ ಸೇರ್ಪಡೆಯಾಗಿದ್ದಾರೆ. ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಎಂಎಸ್ ಧೋನಿ, ಮೊಹಮ್ಮದ್ ಅಜರುದ್ಧೀನ್, ರೋಹಿತ್ ಶರ್ಮಾ, ಯುವರಾಜ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್ ಈ ಸಾಧನೆ ಮಾಡಿದ ಇತರ 9 ಆಟಗಾರರು.

Story first published: Monday, July 19, 2021, 11:52 [IST]
Other articles published on Jul 19, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+