ಜನ್ಮದಿನದಂದೇ ಕೆಎಲ್ ರಾಹುಲ್ ಮೇಲೆ ಪ್ರತಾಪ ತೋರಿದ ಧವನ್
ನವದೆಹಲಿ,ಡಿಸೆಂಬರ್, 05: ಆರಂಭಿಕ ಆಟಗಾರ ಶಿಖರ್ ಧವನ್ ತಮ್ಮ ಹುಟ್ಟು ಹಬ್ಬದ ದಿನದಂದೇ ತಂಡದ ಆಟಗಾರ ಕರ್ನಾಟಕದ ಕೆ ಎಲ್ ರಾಹುಲ್ ಮೇಲೆ ಗರಂ ಆಗಿದ್ದಾರೆ, ಶಿಖರ್ ಧವನ್ ಕೋಪಕ್ಕೆ ದೆಹಲಿ ಟೆಸ್ಟ್ ಸಾಕ್ಷಿಯಾಗಿದೆ. ಅಷ್ಟಕ್ಕೂ ರಾಹುಲ್ ಮಾಡಿದ್ದಾದರೂ ಏನು? ಮುಂದೆ ಓದಿ..
ಫಿರೋಜ್ ಷಾ ಕೋಟ್ಲಾದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಧವನ್ ಭಾರತದ ಪರ ಬ್ಯಾಟಿಂಗ್ ನಡೆಸುತ್ತಿದ್ದರು. ಧವನ್ ಮತ್ತು ಚೇತೇಶ್ವರ ಪೂಜಾರಾ ಕ್ರೀಸ್ ನಲ್ಲಿದ್ದರು. ಪಂದ್ಯದ 24ನೇ ಓವರ್ ಅಂತ್ಯಗೊಂಡಾಗ ಧವನ್ ಡ್ರೆಸ್ಸಿಂಗ್ ರೂಂ ಕಡೆ ಕೈ ಮಾಡಿದ್ದಾರೆ. ಆದರೆ ಇದಕ್ಕೆ ಹೆಚ್ಚುವರಿ ಆಟಗಾರರಾದ ಕೆ ಎಲ್ ರಾಹುಲ್ ಮತ್ತು ಗುರುಕೀರತ್ ಸಿಂಗ್ ಗಮನ ನೀಡಿಲ್ಲ.[ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ ಭಾರಿ ಮುನ್ನಡೆ]
|

ಇದರಿಂದ ಕೋಪಗೊಂಡ ಧವನ್ ರಾಹುಲ್ ಕುರಿತಾಗಿ ಜೋರಾಗಿ ಮಾತನಾಡಿದ್ದಾರೆ. ಅಲ್ಲದೇ ಮೈದಾನಕ್ಕೆ ರಾಹುಲ್ ತಡವಾಗಿ ತೆರಳಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟೀಮ್ ನಿರ್ದೇಶಕ ರವಿಶಾಸ್ತ್ರೀ ಸಹ ಇದನ್ನು ಗಮನಿಸಿದ್ದು ಆಟಗಾರರಲ್ಲಿ ಸಮನ್ವಯ ತರಲು ಮುಂದಾಗಿದ್ದಾರೆ. ಲಂಚ್ ಬ್ರೇಕ್ ವೇಳೆಗೆ ಇದೆಲ್ಲ ಸರಿಯಾಗಿದೆ ಎಂದು ಹೇಳಲಾಗಿದೆ.[ಎರಡು ವರ್ಷ ಬಳಿಕ ಮತ್ತೆ ಕೊಹ್ಲಿ- ಗಂಭೀರ್ ಕಿತ್ತಾಟ!]
ಟೆಸ್ಟ್ ಸರಣಿಯನ್ನು ಈಗಾಗಲೇ ಭಾರತ ವಶಪಡಿಸಿಕೊಂಡಿದೆ. ದೆಹಲಿ ಟೆಸ್ಟ್ ನಲ್ಲೂ ಸಹ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಮುನ್ನಡೆ ಕಾಯ್ದುಕೊಂಡಿದೆ. ರವೀಂದ್ರ ಜಡೇಜಾ ಕೋಟ್ಲಾದಲ್ಲೂ ತಮ್ಮ ಸ್ಪಿನ್ ಮ್ಯಾಜಿಕ್ ತೋರಿಸಿದ್ದು ಆಫ್ರಿಕಾವನ್ನು ಮೊದಲ ಇನಿಂಗ್ಸ್ ನಲ್ಲಿ 121 ರನ್ ಗೆ ಕಟ್ಟಿಹಾಕಿದ್ದಾರೆ. ಸದ್ಯ ಭಾರತ ಮುನ್ನಡೆಯಲ್ಲಿ ಸಾಗುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications