ಮೇ 25 ಶನಿವಾರ, ಭಾರತ ಕ್ರಿಕೆಟ್ ತಂಡದಿಂದ ದೀರ್ಘಕಾಲದಿಂದ ಎಡಗೈ ಆರಂಭಿಕ ಬ್ಯಾಟರ್ ಶಿಖರ್ ಧವನ್ ಹೊರಗುಳಿದಿದ್ದಾರೆ. ಹೀಗಿರುವ ಸ್ಪರ್ಧೆಯಲ್ಲಿ ಧವನ್ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳುವುದು ಕಷ್ಟಕರವಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಧವನ್ ತಮಗೆ ಸಂಬಂಧಿಸಿದ ಕೆಲವೊಂದು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಸುದ್ದಿಯಾಗಿದ್ದಾರೆ. 2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಪಂಜಾಬ್ ಕಿಂಗ್ಸ್‌ಗೆ ಶಿಖರ್ ಧವನ್ ನಾಯಕತ್ವ ವಹಿಸಿದ್ದರು.

ಆದರೆ ಆರಂಭಿಕ ಪಂದ್ಯಗಳನ್ನು ಮಾತ್ರ ಆಡಿದ ಧವನ್ ಗಾಯದ ಕಾರಣ ಮಧ್ಯದಲ್ಲಿಯೇ ಟೂರ್ನಿ ತೊರೆಯಬೇಕಾಯಿತು. ಪಂಜಾಬ್ ಕಿಂಗ್ಸ್ ತಂಡ 14 ಪಂದ್ಯಗಳಲ್ಲಿ ಕೇವಲ 5 ರಲ್ಲಿ ಗೆದ್ದು ಪಾಯಿಂಟ್ ಪಟ್ಟಿಯಲ್ಲಿ 9 ನೇ ಸ್ಥಾನದಲ್ಲಿದೆ. ಈ ಋತುವಿನಲ್ಲಿ 5 ಪಂದ್ಯಗಳಿಂದ ಧವನ್ 125.61 ಸ್ಟ್ರೈಕ್ ರೇಟ್‌ನಲ್ಲಿ 152 ರನ್ ಗಳಿಸಿದ್ದರು.
ಇದೀಗ ಟೂರ್ನಿಯಿಂದ ಹೊರಗುಳಿದಿದ್ದ ಶಿಖರ್ ಧವನ್ ಮತ್ತು ಟೀಮ್ ಇಂಡಿಯಾ ಮಾಜಿ ನಾಯಕಿ ಮಿಥಾಲಿ ರಾಜ್ ಅವರು ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಜಿಯೋ ಸಿನಿಮಾದ ವಿಶೇಷ ಕಾರ್ಯಕ್ರಮವೊಂದರಲ್ಲಿ ಶಿಖರ್ ಧವನ್ ಮಾತನಾಡಿದ್ದಾರೆ.
ನಾನು ಮಿಥಾಲಿ ರಾಜ್ ಅವರನ್ನು ಮದುವೆಯಾಗಲಿದ್ದೇನೆ ಎಂದು ಕೇಳಿದ್ದೆ. ಆದರೆ ಇದೆಲ್ಲವೂ ಕೇವಲ ಒಂದು ರೂಮರ್ಸ್ ಎಂದು ಧವನ್ ಹೇಳಿದ್ದಾರೆ. ಈ ಕಾರ್ಯಕ್ರಮದ ವೇಳೆ ಶಿಖರ್ ಧವನ್ ಜೊತೆಗೆ ಮಿಥಾಲಿ ರಾಜ್ ಕೂಡ ಭಾಗವಹಿಸಿದ್ದರು. ಧವನ್ ಅವರ ಈ ಹೇಳಿಕೆ ಕೇಳಿದ ಕೂಡಲೇ ಇಬ್ಬರೂ ಜೋರಾಗಿ ನಕ್ಕು ಸುಮ್ಮನಾಗಿದ್ದಾರೆ.

ಈ ಹಿಂದೆಯೇ ಶಿಖರ್ ಧವನ್ ಮತ್ತು ಮಿಥಾಲಿ ರಾಜ್ ಅವರ ಮದುವೆಯ ಬಗ್ಗೆ ವದಂತಿಗಳು ಹರಡಿದ್ದವು. ಇಬ್ಬರೂ ಕ್ರಿಕೆಟಿಗರು ಮದುವೆಯಾಗಲಿದ್ದಾರೆ ಎಂದು ಅನೇಕ ಅಭಿಮಾನಿಗಳು ಹೇಳುತ್ತಿದ್ದರು. ಇದೀಗ ಇಬ್ಬರೂ ಮದುವೆಯ ಸುದ್ದಿ ಕೇವಲ ವದಂತಿ ಎಂದು ಧವನ್ ಈ ಕಾರ್ಯಕ್ರಮದ ಮೂಲಕ ಸ್ಪಷ್ಟಪಡಿಸಿದ್ದಾರೆ.
ಮಿಥಾಲಿ ರಾಜ್ ಅವರು ಟೀಮ್ ಇಂಡಿಯಾ ಮಹಿಳಾ ತಂಡದ ಮಾಜಿ ನಾಯಕಿಯಾಗಿದ್ದು, ಈಗಾಗಲೇ ನಿವೃತ್ತಿ ಹೊಂದಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಮಿಥಾಲಿ ರಾಜ್ ಪಾತ್ರರಾಗಿದ್ದಾರೆ.
2022ರಲ್ಲಿ ಮಿಥಾಲಿ ರಾಜ್ ಅವರು ಕೊನೆಯ ಬಾರಿಗೆ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಆಡಿದ್ದರು. ಪ್ರಸ್ತುತ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ಫ್ರಾಂಚೈಸಿಯ ಮಾರ್ಗದರ್ಶಕರಾಗಿದ್ದಾರೆ.