For Quick Alerts
ALLOW NOTIFICATIONS  
For Daily Alerts
 

Shikhar Dhawan: ಮೈದಾನದಲ್ಲಿ ರನ್ ಹೊಳೆ ಹರಿಸಲು ಶಿಖರ್ ಧವನ್ ಸಜ್ಜು

ಭಾರತದ ಮಾಜಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಮತ್ತೆ ಕ್ರಿಕೆಟ್ ಮೈದಾನಕ್ಕೆ ಮರಳುತ್ತಿದ್ದಾರೆ. ಈ ವರ್ಷ ಅಂತಾರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್‌ಗೆ ಧವನ್ ವಿದಾಯ ಹೇಳಿದ್ದರು. ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಧವನ್ ಆಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಇದೀಗ ಮೈದಾನದಲ್ಲಿ ರನ್ ಹೊಳೆ ಹರಿಸಲು ಶಿಖರ್ ಧವನ್ ಸಜ್ಜಾಗಿದ್ದಾರೆ. ನೇಪಾಳ ಪ್ರೀಮಿಯರ್ ಲೀಗ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಲಿದ್ದಾರೆ.

ಶಿಖರ್ ಧವನ್ ನೇಪಾಳ ಪ್ರೀಮಿಯರ್ ಲೀಗ್‌ನ ಆರಂಭಿಕ ಋತುವಿನಲ್ಲಿ ಕರ್ನಾಲಿ ಯಾಕ್ಸ್ ತಂಡಕ್ಕಾಗಿ ಆಡಲಿದ್ದಾರೆ. ಕರ್ನಾಲಿ ಯಾಕ್ಸ್ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಶಿಖರ್ ಧವನ್ ಆಡುವ ಬಗ್ಗೆ ವೀಡಿಯೊ ಮೂಲಕ ಮಾಹಿತಿ ಹಂಚಿಕೊಂಡಿದೆ.

Shikhar Dhawan ready to play Nepal Premier League 2024

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) 2025 ರ ಮೆಗಾ ಹರಾಜಿಗೆ ಮುಂಚಿತವಾಗಿ ಅವರನ್ನು ತಂಡದಿಂದ ಬಿಡುಗಡೆ ಮಾಡಿದೆ. ಇದಾದ ಕೆಲವು ದಿನಗಳ ನಂತರ ಕರ್ನಾಲಿ ಯಕ್ಸ್‌ಗೆ ಸೇರಲು ಧವನ್ ನಿರ್ಧಾರ ಮಾಡಿದ್ದಾರೆ. ಐಪಿಎಲ್ 2024ರಲ್ಲಿ ಶಿಖರ್ ಧವನ್ 5 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ನಾಯಕತ್ವವನ್ನು ವಹಿಸಿಕೊಂಡಿದ್ದರು. ಆದರೆ, ಅವರು ಗಾಯಗೊಂಡ ಕಾರಣ ಟೂರ್ನಿಯಿಂದ ಹೊರಗುಳಿದಿದ್ದರು. ಆಡಿದ ಐದು ಪಂದ್ಯಗಳಲ್ಲಿ ಅವರು 125.62 ಸ್ಟ್ರೈಕ್ ರೇಟ್‌ನಲ್ಲಿ 152 ರನ್ ಗಳಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಕರ್ನಾಲಿ ಯಾಕ್ಸ್ ಫ್ರಾಂಚೈಸಿ ಹಂಚಿಕೊಂಡಿರುವ ವಿಡಿಯೋದಲ್ಲಿ ಶಿಖರ್ ಧವನ್ ಜೊತೆಗಿನ ಒಪ್ಪಂದವನ್ನು ಪ್ರಕಟಿಸಿದೆ. 'ಕರ್ನಾಲಿ ಯಾಕ್ಸ್ ನೇಪಾಳ ಪ್ರೀಮಿಯರ್ ಲೀಗ್‌ಗೆ 'ಗಬ್ಬರ್' ಶಿಖರ್ ಧವನ್‌ನ ಪ್ರಚಂಡ ಶಕ್ತಿಯನ್ನು ತರುತ್ತಿದೆ ಎಂದು ಬರೆದುಕೊಂಡಿದೆ. ಈ ವಿಡಿಯೋದಲ್ಲಿ ಧವನ್ ಕೂಡ 'ಹಲೋ ನೇಪಾಳ್, ನಾನು ನೇಪಾಳ ಪ್ರೀಮಿಯರ್ ಲೀಗ್ ಆಡಲು ಕರ್ನಾಲಿ ಯಾಕ್ಸ್‌ನಿಂದ ಬರುತ್ತಿದ್ದೇನೆ' ಎಂದು ಹೇಳಿದ್ದಾರೆ.

ವೃತ್ತಿಜೀವನ

ಶಿಖರ್ ಧವನ್ ಭಾರತ ಪರ ಕ್ರಿಕೆಟ್‌ನ ಎಲ್ಲಾ ಮೂರು ಮಾದರಿಗಳಲ್ಲಿ ಮಿಂಚಿದ್ದಾರೆ. ಅವರು ಕಳೆದ 2 ವರ್ಷಗಳಿಂದ ಭಾರತ ತಂಡದಿಂದ ಹೊರಗುಳಿದಿದ್ದರು. 2022ರಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿ ಅವರು ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರೆ, 2018 ರಿಂದ ಟೆಸ್ಟ್ ಸ್ವರೂಪದಿಂದ ಹೊರಗುಳಿದಿದ್ದರು.

ಧವನ್ ಆಡಿರುವ 167 ಏಕದಿನ ಪಂದ್ಯಗಳಲ್ಲಿ 17 ಶತಕಗಳು ಮತ್ತು 39 ಅರ್ಧ ಶತಕಗಳೊಂದಿಗೆ 6793 ರನ್ ಗಳಿಸಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿಯೂ ಧವನ್ 34 ಪಂದ್ಯಗಳಲ್ಲಿ 2315 ರನ್ ಕಲೆ ಹಾಕಿದ್ದಾರೆ. ಅವರ ಟೆಸ್ಟ್‌ನಲ್ಲಿ ಏಳು ಶತಕಗಳು ಮತ್ತು ಐದು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಇನ್ನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಧವನ್ 68 ಪಂದ್ಯಗಳನ್ನು ಆಡಿದ್ದು, 1759 ರನ್ ಗಳಿಸಿದ್ದಾರೆ. ಇದರಲ್ಲಿ 11 ಅರ್ಧ ಶತಕಗಳು ಸೇರಿವೆ.

Story first published: Saturday, November 16, 2024, 10:57 [IST]
Other articles published on Nov 16, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+