For Quick Alerts
ALLOW NOTIFICATIONS  
For Daily Alerts
 

ಮೂರು ಓವರ್ ಗೆ ಧವನ್ ಬೌಲಿಂಗ್ ಮಾನ ಹರಾಜು!

By Mahesh

ದುಬೈ, ಡಿ. 09: ಟೀಂ ಇಂಡಿಯಾದ 'ಗಬ್ಬರ್ ಸಿಂಗ್' ಶಿಖರ್ ಧವನ್ ಅವರ ಟೈಂ ಯಾಕೋ ಸರಿಯಿಲ್ಲ. ಹುಟ್ಟುಹಬ್ಬದ ದಿನವೇ ಕಿರಿಕ್, ಬ್ಯಾಟಿಂಗ್ ವೈಫಲ್ಯದ ನಡುವೆ ಈಗ ಐಸಿಸಿಯಿಂದ 'ನಿಮ್ಮ ಬೌಲಿಂಗ್ ಶೈಲಿ ಸರಿಯಿಲ್ಲ' ಎಂಬ ನೋಟಿಸ್ ಸಿಕ್ಕಿದೆ.

30 ವರ್ಷ ವಯಸ್ಸಿನ ಎಡಗೈ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಯಾವ ಕೆಟ್ಟ ಕಾಲದಲ್ಲಿ ಚೆಂಡು ಕೈಗೆತ್ತಿಕೊಂಡು ಬೌಲ್ ಮಾಡಲು ಆರಂಭಿಸಿದರೋ ಗೊತ್ತಿಲ್ಲ. ಈಗ ಧವನ್ ಅವರ ಬೌಲಿಂಗ್ ಶೈಲಿ ಅನುಮಾನಸ್ಪದವಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ವರದಿ ಮಾಡಿದೆ.

ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಧವನ್ ಅವರಿಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತ್ತು. ಪಾರ್ಟ್ ಟೈಮ್ ಆಫ್ ಸ್ಪಿನ್ನರ್ ಧವನ್ ಅವರು 3 ಓವರ್ ಗಳನ್ನು ಎಸೆದು 9 ರನ್ ನೀಡಿದ್ದರು. 1 ಮೇಡನ್ ಸಹ ಇತ್ತು.

Shikhar Dhawan reported for a suspect bowling action

ನಾಲ್ಕನೇ ಟೆಸ್ಟ್ ಪಂದ್ಯವನ್ನು 337 ರನ್ ಗಳಿಂದ ಗೆದ್ದ ಭಾರತ ಫ್ರೀಡಂ ಟ್ರೋಫಿಯನ್ನು 3-0 ಅಂತರದಿಂದ ಗೆದ್ದುಕೊಂಡಿತು.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬ್ರೂಸ್ ಆಕ್ಸನ್ಫೋರ್ಡ್, ಶ್ರೀಲಂಕಾದ ಕುಮಾರ್ ಧರ್ಮಸೇನಾ, ಆನ್ ಫೀಲ್ಡ್ ಅಂಪೈರ್ ಗಳಾಗಿದ್ದರು. ಜೆಫ್ ಕ್ರೊವ್ ಮ್ಯಾಚ್ ರೆಫ್ರಿ, ಭಾರತದ ಸಿಕೆ ನಂದನ್ ಮೂರನೇ ಅಂಪೈರ್ ಹಾಗೂ ಅನಿಲ್ ಚೌಧರಿ ನಾಲ್ಕನೇ ಅಂಪೈರ್ ಆಗಿದ್ದರು. ಇವರೆಲ್ಲರಿಂದ ಹೇಳಿಕೆ ಪಡೆದು ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಗೆ ವರದಿ ಕಳಿಸಲಾಗಿದೆ.

ಈಗ ಧವನ್ ಅವರು 14ದಿನಗಳ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ಈ ಪರೀಕ್ಷೆಯ ವರದಿ ಬರುವ ತನಕ ಬೌಲಿಂಗ್ ಮಾಡಬಹುದಾಗಿದೆ. ತಮಾಷೆ ವಿಷಯವೆಂದರೆ ಧವನ್ ಅವರು 19 ಟೆಸ್ಟ್ ಪಂದ್ಯದಲ್ಲಿ ಇಲ್ಲಿ ತನಕ 54 ಎಸೆತಗಳನ್ನು ಮಾತ್ರ ಹಾಕಿದ್ದಾರೆ. ಒಂದು ವಿಕೆಟ್ ಕೂಡಾ ಗಳಿಸಿಲ್ಲ. ಏಕದಿನ ಕ್ರಿಕೆಟ್ ಹಾಗೂ ಟಿ20 ಪಂದ್ಯಗಳಲ್ಲಿ ಬೌಲ್ ಮಾಡಿಲ್ಲ. (ಒನ್ ಇಂಡಿಯಾ ಸುದ್ದಿ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+