Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಆಸ್ಟ್ರೇಲಿಯಾ: ದೀರ್ಘ ಕಾಲದ ಬಳಿಕ ಅಬ್ಬರಿಸಿದ ಶಿಖರ್ ಧವನ್

Shikhar Dhawan Returns To Form, Hits 16th ODI Century To Lift India In Mohali

ಮೊಹಾಲಿ, ಮಾರ್ಚ್ 10: ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ತಾನು ಪಾರ್ಮ್‌ಗೆ ಮರಳಿರುವುದಕ್ಕೆ ಸಾಕ್ಷಿ ಹೇಳಿದ್ದಾರೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಇಂದರ್‌ಜಿತ್ ಸಿಂಗ್ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 10) ನಡೆದ ಭಾರತ-ಆಸ್ಟ್ರೇಲಿಯಾ 4ನೇ ಏಕದಿನ ಪಂದ್ಯದಲ್ಲಿ ಧವನ್ ಶತಕದ ಮೂಲಕ ಅಬ್ಬರಿಸಿದರು.

ಪಂದ್ಯದ Live Score ಕೆಳಗಿದೆ. ಸ್ಕೋರ್‌ಕಾರ್ಡ್‌ಗೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

1
42289

ಇತ್ತಂಡಗಳ ನಡುವಿನ 4ನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದ ಭಾರತ ಪರ ಆರಂಭಿಕರರಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ಉತ್ತಮ ಜೊತೆಯಾಟ ನೀಡಿದರು. ಧವನ್ 143, ರೋಹಿತ್ 95 ರನ್ ಬಾರಿಸಿ ತಂಡದ ಮೊತ್ತ ಹೆಚ್ಚುವಂತೆ ನೋಡಿಕೊಂಡರು.

ಪಂದ್ಯದಲ್ಲಿ 115 ಎಸೆತಗಳಿಗೆ 143 ರನ್ ಬಾರಿಸುವ ಮೂಲಕ ಧವನ್ 16ನೇ ಏಕದಿನ ಅಂತಾರಾಷ್ಟ್ರೀಯ ಶತಕ ಪೂರೈಸಿಕೊಂಡರು. ಅಷ್ಟೇ ಅಲ್ಲ ಈ ಶತಕ ತುಂಬಾ ವಿಶೇಷವಾದುದು. ಯಾಕೆಂದರೆ ಧವನ್ ಶತಕ ಬಾರಿಸಿದ್ದು ಸುಮಾರು 17 ಪಂದ್ಯಗಳ ಬಳಿಕ. ಬರೋಬ್ಬರಿ 6 ತಿಂಗಳ ನಂತರ!

ಅಲ್ಲದೆ ಆಸ್ಟ್ರೇಲಿಯಾ ವಿರುದ್ಧ ಶಿಖರ್ ಬಾರಿಸಿದ ಮೂರನೇ ಶತಕವಿದು. 23 ಸೆಪ್ಟೆಂಬರ್ 2018ರಲ್ಲಿ ಏಷ್ಯಕಪ್ ಸೂಪರ್ ಫೋರ್ ಪಂದ್ಯದಲ್ಲಿ ಪಾಕಿಸ್ಥಾನ ವಿರುದ್ಧ ಕಡೆಯ ಸಾರಿ ಧವನ್ ಏಕದಿನ ಶತಕ ಬಾರಿಸಿದ್ದರು. 33ರ ಹರೆಯದ ಧವನ್ ಪ್ರದರ್ಶನ ಮುಂಬರಲಿರುವ ವಿಶ್ವಕಪ್ ನಿಟ್ಟಿನಲ್ಲಿ ಟೀಮ್ ಇಂಡಿಯಾಕ್ಕೆ ಬಲ ತುಂಬಿದೆ.

Story first published: Monday, March 11, 2019, 2:14 [IST]
Other articles published on Mar 11, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+