ಶಿಖರ್ ಧವನ್ ಪ್ರಶ್ನೆಗೆ ಹಲ್ಲು ಕಿಸಿದ ವಿರಾಟ್ ಕೊಹ್ಲಿ: ಗಮ್ಮತ್ತಿನ ವಿಡಿಯೋ!

ನವದೆಹಲಿ, ಸೆಪ್ಟೆಂಬರ್ 13: 'ಗಬ್ಬರ್' ಖ್ಯಾತಿಯ ಶಿಖರ್ ಧವನ್ ಸೊಗಸಾಗಿ ಕೊಳಲು ನುಡಿಸಬಲ್ಲರು ಅನ್ನೋ ವಿಚಾರ ನಿಮಗೆ ಗೊತ್ತಿರಬಹುದು. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪದೇ ಪದೇ ಕೇಳುವ ಹಾಡುಗಳು ಯಾವುವು ಗೊತ್ತಿದೆಯಾ? ಕೊಹ್ಲಿಯ ಕೇಳುವ ನೆಚ್ಚಿನ ಹಾಡುಗಳು ಯಾವುವೆಂದು ಧವನ್ ಹೇಳಿಕೊಂಡಿದ್ದಾರೆ.
ಡ್ರೆಸ್ಸಿಂಗ್ ರೂಮ್‌ನಲ್ಲಿದ್ದಾಗ ಕೊಹ್ಲಿ ಪಂಜಾಬಿ ಗೀತೆಗಳನ್ನು ಹೆಚ್ಚಾಗಿ ಕೇಳುತ್ತಿರುತ್ತಾರೆ ಎಂಬ ಗುಟ್ಟನ್ನು ಧವನ್ ಬಿಚ್ಚಿಟ್ಟಿದ್ದಾರೆ. ಬಿಸಿಸಿಐ ಮಾಡಿರುವ ಟ್ವೀಟೊಂದರಲ್ಲಿ ಮಾತನಾಡಿರುವ ಧವನ್, 'ಗುರುದಾಸ್ ಮಾನ್ ಗೀತೆಗಳನ್ನು ಹೆಚ್ಚಾಗಿ ಕೇಳಲು ಕೊಹ್ಲಿ ಇಷ್ಟಪಡುತ್ತಾರೆ. ಅರಿಜಿತ್ ಸಿಂಗ್ ಅವರ ರೋಮ್ಯಾಂಟಿಕ್ ಸಾಂಗ್‌ಗಳನ್ನೂ ಕೇಳುತ್ತಿರುತ್ತಾರೆ,' ಎಂದು ಹೇಳಿದ್ದಾರೆ.
ನವದೆಹಲಿಯಲ್ಲಿರುವ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ (ಹಿಂದಿನ ಫಿರೋಜ್ ಷಾ ಕೋಟ್ಲಾ ಸ್ಟೇಡಿಯಂ) ಪೆವಿಲಿಯನ್ ಸ್ಟ್ಯಾಂಡ್ ಒಂದಕ್ಕೆ ಗುರುವಾರ (ಸೆಪ್ಟೆಂಬರ್ 12) 'ವಿರಾಟ್ ಕೊಹ್ಲಿ ಪೆವಿಲಿಯನ್' ಎಂದು ನಾಮಕರಣ ಮಾಡಲಾಯ್ತು. ಈ ಸಂಬಂಧ ನಡೆದಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾಗ ಧವನ್, ಕೊಹ್ಲಿಯ ನೆಚ್ಚಿನ ಸಾಂಗ್‌ಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ನಿರೂಪಕ ಧವನ್ ಅವರಲ್ಲಿ ಕೊಹ್ಲಿಯ ಇಷ್ಟದ ಹಾಡಿನ ಬಗ್ಗೆ ಕೇಳಿದಾಗ ಧವನ್ ಮೊದಲು ಪ್ರಶ್ನಿಸಿದ್ದು, 'ಮದುವೆಗೆ ಮೊದಲೋ ಇಲ್ಲ ಮದುವೆಯ ನಂತರವೋ?' ಎಂದು. ಆಗ ಪತ್ನಿ ಅನುಷ್ಕಾ ಜೊತೆ ಕೂತಿದ್ದ ಕೊಹ್ಲಿಯೂ ಒಂದು ಬಾರಿ ಹಲ್ಲುಬಿಟ್ಟರು. ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾ ಆಟಗಾರರು, ಕೋಚ್ ರವಿ ಶಾಸ್ತ್ರಿ, ಗೃಹಮಂತ್ರಿ ಅಮಿತ್ ಶಾ ಮೊದಲಾದವರು ಉಪಸ್ಥಿತರಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications