For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲ್ಯಾಂಡ್‌ ವಿರುದ್ಧದ ಟಿ20 ಸರಣಿಯಿಂದ ಪ್ರಮುಖ ಆಟಗಾರ ಔಟ್

Shikhar Dhawan Ruled Out Of The T20I And ODI Series

ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ಆಘಾತ ಉಂಟಾಗಿದೆ. ಟೀಮ್ ಇಂಡಿಯಾದ ಪ್ರಮುಖ ಆಟಗಾರ ಟಿ20 ಸರಣಿಯಿಂದ ಔಟ್‌ ಆಗಿದ್ದಾರೆ. ಅನುಭವಿ ಆಟಗಾರನ ಅಲಭ್ಯತೆ ಕೀವಿಸ್‌ನಲ್ಲಿ ಟೀಮ್ ಇಂಡಿಯಾಗೆ ಕಾಡಲಿದೆ.

ಟೀಮ್ ಇಂಡಿಯಾದ ಎಡಗೈ ಆರಂಭಿಕ ಆಟಗಾರ ಶಿಖರ್ ಧವನ್ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಿಂದ ಹೊರ ಬಿದ್ದಿರುವ ಆಟಗಾರ. ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಶಿಖರ್ ಧವನ್ ಫೀಲ್ಡಿಂಗ್ ವೇಳೆ ಭುಜದ ಗಾಯಕ್ಕೊಳಗಾಗಿದ್ದರು. ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಧವನ್ ಅವರನ್ನು ಟಿ20 ಸ್ಕ್ವಾಡ್‌ನಿಂದ ಕೈಬಿಡಲಾಗಿದೆ.

ಇಂದು ನ್ಯೂಜಿಲ್ಯಾಂಡ್‌ಗೆ ಟೀಮ್ ಇಂಡಿಯಾ ಪ್ರಯಾಣವನ್ನು ಬೆಳೆಸುತ್ತಿದ್ದು ಕೊನೆ ಕ್ಷಣದಲ್ಲಿ ಧವನ್ ಅವರನ್ನು ಕೈಬಿಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಧವನ್ ಸ್ಥಾನಕ್ಕೆ ಬದಲಿ ಆಯ್ಕೆ ಇಲ್ಲ

ಧವನ್ ಸ್ಥಾನಕ್ಕೆ ಬದಲಿ ಆಯ್ಕೆ ಇಲ್ಲ

ಧವನ್ ಅವರ ವೈದ್ಯಕೀಯ ವರದಿಗಾಗಿ ಇಂದು ಮುಂಜಾನೆಯವರೆಗೂ ಕಾದು ಬಳಿಕ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಆದರೆ ಧವನ್ ಬದಲಿಗೆ ಯಾರನ್ನು ಆಯ್ಕೆ ಮಾಡದೆ ನ್ಯೂಜಿಲ್ಯಾಂಡ್‌ಗೆ ತಂಡವನ್ನು ಕಳುಹಿಸುವ ತೀರ್ಮಾನಕ್ಕೆ ಬಂದಿದೆ.

ಪದೇ ಪದೆ ಗಾಯಗೊಳ್ಳುತ್ತಿರುವ ಧವನ್

ಪದೇ ಪದೆ ಗಾಯಗೊಳ್ಳುತ್ತಿರುವ ಧವನ್

ಟೀಮ್ ಇಂಡಿಯಾ ಆರಂಭಿಕ ಆಟಗಾರ ಶಿಖರ್ ದವನ್ ಪದೇ ಪದೆ ಗಾಯಗೊಳ್ಳುತ್ತಿದ್ದಾರೆ. ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸಂದರ್ಭದಲ್ಲಿ ಗಾಯಗೊಂಡಿದ್ದ ಧವನ್ ವೆಸ್ಟ್‌ ಂಡೀಸ್ ವಿರುದ್ಧದ ಸರಣಿಯಿಂದ ಔಟ್‌ ಆಗಿದ್ದರು. ಬಳಿಕ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ತಂಡವನ್ನು ಸೇರಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಪಂದ್ಯದಲ್ಲೂ ಗಾಯಗೊಂಡಿದ್ದರು. ಬಳಿಕ ಚೇತರಿಸಿಕೊಂಡು ಮೂರನೇ ಪಂದ್ಯಕ್ಕಿಳಿದ ಧವನ್ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದಾರೆ.

ಕೀವಿಸ್ ಸರಣಿಗೂ ಮುನ್ನ ಟೀಮ್ ಇಂಡಿಯಾದ ದೌರ್ಬಲ್ಯ ಬಹಿರಂಗ ಪಡಿಸಿದ ವಿರಾಟ್ ಕೊಹ್ಲಿ!

ಓಪನರ್ ಆಗಿ ರಾಹುಲ್

ಓಪನರ್ ಆಗಿ ರಾಹುಲ್

ಶಿಖರ್ ಧವನ್ ಔಟ್‌ ಆದ ಹಿನ್ನೆಲೆಯಲ್ಲಿ ಆರಂಭಿಕನ ಸ್ಥಾನ ಮತ್ತೆ ಕೆಎಲ್ ರಾಹುಲ್ ಪಾಲಾಗುವುದು ಬಹುತೇಕ ಖಚಿತ. ಈಗಾಗಲೇ ಕೆಎಲ್ ರಾಹುಲ್ ಹೆಗಲಿಗೆ ವಿಕೆಟ್‌ ಕೀಪಿಂಗ್ ಜವಾಬ್ದಾರಿಯನ್ನೂ ಹೊರಿಸಲಾಗಿದೆ.

ಟೀಮ್ ಇಂಡಿಯಾ 'ಎ' ತಂಡದಿಂದ ಮೀಸಲು ಆಟಗಾರ?

ಟೀಮ್ ಇಂಡಿಯಾ 'ಎ' ತಂಡದಿಂದ ಮೀಸಲು ಆಟಗಾರ?

ಶಿಖರ್ ಧವನ್ ಅನುಪಸ್ಥಿತಿಯ ಹಿನ್ನೆಲೆಯಲ್ಲಿ ನ್ಯೂಜಿಲ್ಯಾಂಡ್‌ಗೆ ತೆರಳುವ ತಂಡದಲ್ಲಿ ಯಾವುದೇ ಆಟಗಾರನನ್ನೂ ಹೆಸರಿಸಿಲ್ಲ. ಆದರೆ ಈಗಾಗಲೇ ಭಾರತ 'ಎ' ತಂಡ ನ್ಯೂಜಿಲ್ಯಾಂಡ್‌ನಲ್ಲಿ ಸರಣಿಯಲ್ಲಿ ಪಾಲ್ಗೊಂಡಿರುವ ಕಾರಣದಿಂದಾಗಿ ಮಯಾಂಕ್ ಅಗರ್ವಾಲ್, ಸೂರ್ಯಕುಮಾರ್ ಯಾದವ್ ಅಥವಾ ಪೃಥ್ವಿ ಶಾ ಅವರನ್ನು ಸೇರ್ಪಡೆಗೊಳಿಸುವ ಸಾಧ್ಯತೆಯಿದೆ.

Story first published: Tuesday, January 21, 2020, 16:23 [IST]
Other articles published on Jan 21, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+