
ನವದೆಹಲಿ, ಮೇ 23: ಕೊರೊನಾವೈರಸ್ ಲಾಕ್‌ಡೌನ್ ಸಮಯದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚೇ ಸಕ್ರಿಯವಾಗಿರುವ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್, ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ವಿಭಿನ್ನ ಫೋಟೋ ಹಂಚಿಕೊಂಡಿದ್ದಾರೆ.
ಶಿಖರ್ ಧವನ್, ತನ್ನ ಬಾಲ್ಯದ ಫೋಟೋ ಮತ್ತು ಪುತ್ರ ಝೊರಾವರ್ ಫೋಟೋವನ್ನು ಒಂದರಪಕ್ಕದಲ್ಲೊಂದನ್ನು ಇರಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಧವನ್ ಈ ಫೋಟೋ ಶೇರ್ ಮಾಡಲು ಕಾರಣವಿದೆ, ಬಾಲ್ಯದಲ್ಲಿದ್ದಾಗ ಶಿಖರ್ ಥೇಟ್ ಪುತ್ರ ಝೊರಾವರ್ ಅವರನ್ನೇ ಹೋಲುತ್ತಿದ್ದರು.
ಈ ಅಪರೂಪದ ಚಿತ್ರ ಜೊತೆ ಧವನ್ ಚಂದದ ಸಾಲೊಂದನ್ನು ಬರೆದುಕೊಂಡಿದ್ದಾರೆ. 'ಸೇಬಿನ ಮರ ತನ್ನಿಂದ ಬಹುದೂರದಲ್ಲಿ ಸೇಬಿನ ಹಣ್ಣುಗಳನ್ನು ಉದುರಿಸಲಾರದು' ಎಂದು ಚಿತ್ರದ ಜೊತೆ ಸಾಲಿದೆ. ಅಂದರೆ ಅಪ್ಪನಿಗಿಂತ ಮಗ ಹೆಚ್ಚು ಭಿನ್ನ ಇರಲಾರದು ಎಂಬರ್ಥದಲ್ಲಿ ಧವನ್ ಹೀಗೆ ಬರೆದುಕೊಂಡಿದ್ದಾರೆ.
ಕೊರೊನಾವೈರಸ್‌ನಿಂದ ಐಪಿಎಲ್ 13ನೇ ಆವೃತ್ತಿ ಮುಂದೂಡಲ್ಪಡದಿದ್ದರೆ, ಧವನ್ ಡೆಲ್ಲಿ ಕ್ಯಾಪಿಟಲ್ಸ್ ಪರ ಕಣಕ್ಕಿಳಿಯುವುದರಲ್ಲಿದ್ದರು. 2016ರ ಐಪಿಎಲ್ ಚಾಂಪಿಯನ್ ತಂಡ ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ಬಹಳಷ್ಟು ಕಾಲ ಇದ್ದ ಧವನ್ ಮತ್ತೀಗ ಡೆಲ್ಲಿಗೆ ಮರಳಿದ್ದಾರೆ.