ಒಂದು ವಾರ ಮನೆಯೊಳಗೇ ಕಾಲ ಕಳೆದ ಶಿಖರ್ ಧವನ್ ಪಾಡು ಹೀಗಿದೆ: ವಿಡಿಯೋ

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಎಲ್ಲಾ ಆಟಗಾರರೂ ಮನೆಯೊಳಗೇ ಬಂಧಿಯಾಗಿದ್ದಾರೆ. ಬಿಡುವಿಲ್ಲದ ಕ್ರಿಕೆಟ್‌ನಿಂದ ಬಳಲಿರುವ ಆಟಗಾರರಿಗೆ ಇದು ವಿಶ್ರಾಂತಿಯ ಸಂದರ್ಭವೂ ಹೌದು. ಹೀಗಾಗಿ ಕುಟುಂಬಸ್ಥರ ಜೊತೆಗೆ ಮಾನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಈ ಮಧ್ಯೆ ಟೀಮ್ ಇಂಡಿಯಾದ ಓಪನರ್ ಶಿಖರ್ ಧವನ್ ಕಳೆದ ಒಂದು ವಾರದಲ್ಲಿ ತನ್ನ ಪರಿಸ್ಥಿತಿ ಏನಾಗಿದೆ ಎಂದು ತಮಾಷೆಯ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
'ಒಂದು ವಾರ ಮನೆಯಲ್ಲಿ ಕಳೆದ ಬಳಿಕ ಪರಿಸ್ಥಿತಿ' ಎಂದು ಬರೆದುಕೊಂಡು ವಿಡಿಯೋವನ್ನು ಶಿಖರ್ ಧವನ್ ಹಂಚಿಕೊಂಡಿದ್ದಾರೆ. ಇದರಲ್ಲಿ ಮನೆಯಲ್ಲಿ ತನ್ನ ಪತ್ನಿ ತನ್ನನ್ನು ಎಷ್ಟು ಕೆಲಸವನ್ನು ಮಾಡಿಸುತ್ತಿದ್ದಾರೆ ಎಂದು ತಮಾಷೆಯಾಗಿ ಚಿತ್ರಿಸಿದ್ದಾರೆ.
ಒಂದೆಡೆ ಶಿಖರ್ ಧವನ್ ಪತ್ನಿ ಆಯೆಷಾ ಧವನ್ ಮೇಕಪ್‌ನಲ್ಲಿ ಬ್ಯುಸಿಯಾಗಿದ್ದರೆ ಮತ್ತೊಂದೆಡೆ ಶಿಖರ್ ಧವನ್ ಮನೆಕೆಲಸದಲ್ಲಿ ನಿರತರಾಗಿಗಿರುವಂತೆ ತಮಾಷೆಯಾಗಿ ನಾಟಕವಾಡಿದ್ದಾರೆ ಧವನ್. ಮೇಕಪ್ ಮಾಡಿಕೊಂಡೇ ಧವನ್‌ಗೆ ಆಯೆಷಾ ಆರ್ಡರ್ ಮಾಡುವ ದೃಶ್ಯವೂ ಇದರಲ್ಲಿದೆ.
Life after one week at home.
— Shikhar Dhawan (@SDhawan25) March 24, 2020
Reality hits hard 🤪 #AeshaDhawan @BoatNirvana #boAtheadStayINsane 🤙🏻 pic.twitter.com/ZTM2IhGV3c
ಒಮ್ಮೆ ಬಟ್ಟೆ ತೊಳೆಯುತ್ತಿದ್ದರೆ ಮತ್ತೊಮ್ಮೆ ಕಮೋಡ್ ಸ್ವಚ್ಛಗೊಳಿಸುತ್ತಿದ್ದಾರೆ ಶಿಖರ್ ಧವನ್. ಫೋನ್‌ನಲ್ಲಿ ಮಾತನಾಡುತ್ತಾ ಆಯೇಷಾ ಕೋಲು ಹಿಡಿದು ಧವನ್‌ಗೆ ಆರ್ಡರ್ ಮಾಡುವ ದೃಶ್ಯ ಅಭಿಮಾನಿಗಳಿಗೆ ಮನರಂಜಿಸಿದೆ. ಈ ಮಧ್ಯೆ ಕಷ್ಟ ತಡೆಯಲಾರದ ಧವನ್ ಪತ್ನಿಗೆ ಕೈ ಮುಗಿದು ಬೇಡಿಕೊಳ್ಳುವ ದೃಶ್ಯವಂತೂ ಮಜಾ ನೀಡುತ್ತದೆ.
ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಅಭಿಮಾನಿಗಳಿಗೆ ಸಾಕಷ್ಟು ಮುದ ನೀಡುತ್ತಿದೆ. ಟ್ವಿಟ್ಟರ್‌ನಲ್ಲಿ ಈ ವಿಡಿಯೋಗೆ ಅಭಿಮಾನಿಗಳಿ ಫಿದಾ ಆಗಿದ್ದು ನಾನಾ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications