Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಪೀಕ್‌ಔಟ್ ಚಾಲೆಂಜ್‌ನಲ್ಲಿ ಶ್ರೇಯಸ್, ಧವನ್‌: ನೋಡಲೇಬೇಕಾದ ವಿಡಿಯೋ

Shikhar Dhawan, Shreyas Iyer take part in hilarious Speak Out challenge

ಗಯಾನಾ, ಆಗಸ್ಟ್ 8: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಗುರುವಾರ (ಆಗಸ್ಟ್ 8) ನಡೆಯಲಿರುವ ಪ್ರವಾಸಿ ಭಾರತ vs ವೆಸ್ಟ್ ಇಂಡೀಸ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಬ್ಯಾಟ್ಸ್ಮನ್‌ಗಳಾದ ಶಿಖರ್ ಧವನ್ ಮತ್ತು ಶ್ರೇಯಸ್ ಐಯ್ಯರ್ ತಮಾಷೆಯ ವಿಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

'ಸ್ಪೀಕ್ ಔಟ್' ಅನ್ನೋ ಈ ತಮಾಷೆಯ ಈ ಚಾಲೆಂಜ್‌ನಲ್ಲಿ ತುಟಿಗಳು ಒಂದಕ್ಕೊಂದು ತಾಗದಂತೆ ಬಾಯಿಗೆ ಸಾಧನವೊಂದನ್ನು ಅಳವಡಿಸಿಕೊಂಡು ಮಾತನಾಡಬೇಕು. ತುಟಿಗಳಿಗೆ ತಾಗಿಸದೆ ಪದಗಳನ್ನು ಉಚ್ಛರಿಸಲು ಕಷ್ಟವಾದ್ದರಿಂದ ನಮ್ಮ ಮುಂದಿರುವವರಿಗೆ ನಾವು ಮಾತನಾಡುವ ಪರಿ ತಮಾಷೆಯಾಗಿ ಕಾಣಿಸುತ್ತೆ.

ಆಗಸ್ಟ್ 8ರಂದು ಬೆಳಗ್ಗೆ ಬಿಸಿಸಿಐ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್‌ ಮಾಡಿ, 'ನೋಡಲೇಬೇಕಾದ ವಿಡಿಯೋ-ಸ್ಪೀಕ್‌ಔಟ್ ಚಾಲೆಂಜ್‌ನಲ್ಲಿ ಶಿಖರ್ ಧವನ್ ಮತ್ತು ಶ್ರೇಯಸ್ ಐಯ್ಯರ್' ಅಂತ ಸಾಲೊಂದನ್ನೂ ಸೇರಿಸಿಕೊಂಡಿದೆ. ಶ್ರೇಯಸ್, ಧವನ್ ಇಬ್ಬರೂ ವಿಡಿಯೋದಲ್ಲಿ ಮಾತನಾಡಲು ಯತ್ನಿಸಿದ್ದಾರೆ.

ಮೂರು ಪಂದ್ಯಗಳ ಟಿ20 ಸರಣಿಯ ಮೂರೂ ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ, ಏಕದಿನ ಸರಣಿಯಲ್ಲೂ ಮೇಲುಗೈ ಸಾಧಿಸುವ ನಿರೀಕ್ಷೆಯಿದೆ. ಮೊದಲ ಏಕದಿನ ಪಂದ್ಯ ಭಾರತೀಯ ಕಾಲಮಾನ 7 pmಗೆ ಆರಂಭಗೊಳ್ಳಲಿದೆ. ಭಾರತ ಆರಂಭಿರಾದ ರೋಹಿತ್ ಶರ್ಮಾ-ಶಿಖರ್ ಧವನ್ ಉತ್ತಮ ಜೊತೆಯಾಟ ನೀಡುವುದನ್ನು ನಿರೀಕ್ಷಿಸಲಾಗಿದೆ.

Story first published: Thursday, August 8, 2019, 16:46 [IST]
Other articles published on Aug 8, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+