Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಎಂಜಿ ರಿಲಯನ್ಸ್ ಒಪ್ಪಂದಕ್ಕೆ ಭಾರತದ ಓಪನರ್ ಶಿಖರ್ ಧವನ್ ಸಹಿ

Shikhar Dhawan signs deal with IMG Reliance

ಮುಂಬೈ, ಜುಲೈ 22: ಟೀಮ್ ಇಂಡಿಯಾದ ಅನುಭವಿ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇವೆಂಟ್ ಮ್ಯಾನೇಜ್ಮೆಂಟ್ ಸಂಸ್ಥೆ ಐಎಂಜಿ ರಿಲಯನ್ಸ್‌ನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಐಎಂಜಿ ರಿಲಯನ್ಸ್‌ ಆಟಗಾರರ ನಿರ್ವಹಣೆ ಪಟ್ಟಿಯಲ್ಲಿ ಧವನ್ ಜೊತೆಗೆ ರೋಹಿತ್ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ಮತ್ತು ಶ್ರೇಯಸ್ ಐಯ್ಯರ್ ಹೆಸರುಗಳು ಸೇರಿವೆ.

'ಐಎಂಜಿ ರಿಲಯನ್ಸ್ ಭಾರತದಲ್ಲಿ ಸಾಕಷ್ಟು ಕ್ರಿಯಾತ್ಮಕ ಮತ್ತು ವಿಭಿನ್ನವಾಗಿದೆ ಎಂದು ನಾನಂದುಕೊಳ್ಳುತ್ತೇನೆ. ಬೇರೆ ಬೇರೆ ವೇದಿಕೆಗಳಲ್ಲಿ ಕಂಪನಿ ಸಾಕಷ್ಟು ಪರಿಣಿತಿ ಹೊಂದಿರುವುದರಿಂದ ಈ ಕಂಪನಿ ಜೊತೆಗೆ ಪಾರ್ಟ್ನರ್‌ ಆಗಲು ನಾನು ಉತ್ಸುಕನಾಗಿದ್ದೇನೆ,' ಎಂದು ಧವನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

'ನನ್ನ ಕ್ರಿಕೆಟ್‌ನತ್ತ ಗಮನ ಹರಿಸಿ ದೇಶಕ್ಕೆ ಪ್ರಶಸ್ತಿಗಳನ್ನು ತರಲು ಪ್ರಯತ್ನಿಸುತ್ತೇನೆ. ಐಎಂಜಿ ರಿಲಯನ್ಸ್‌ ತಂಡ ನನ್ನ ಪ್ರತಿಭೆಯನ್ನು ಗರಿಷ್ಠಗೊಳಿಸಲು ನನಗೆ ನೆರವಾಗುತ್ತದೆ ಎಂದು ನನಗೆ ಗೊತ್ತಿದೆ,' ಎಂದು ಧವನ್ ಪ್ರತಿಕ್ರಿಯಿಸಿದ್ದಾರೆ.

34ರ ಹರೆಯದ ಧವನ್ ಟೀಮ್ ಇಂಡಿಯಾ ಪರ 34 ಟೆಸ್ಟ್ ಪಂದ್ಯ, 136 ಏಕದಿನ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್‌ನಲ್ಲಿ 2315 ರನ್, ಏಕದಿನದಲ್ಲಿ 5688 ರನ್ ಗಳಿಸಿದ್ದಾರೆ. ಸದ್ಯಕ್ಕೆ ವಿರಾಟ್ ಕೊಹ್ಲಿ ಪಡೆಗೆ ಯಾವುದೇ ಸರಣಿಯಿಲ್ಲ. ವರ್ಷದ ಅಂತ್ಯಕ್ಕೆ ಅಂದರೆ ಅಕ್ಟೋಬರ್‌ನಿಂದ ಆಸ್ಟ್ರೇಲಿಯಾ ಪ್ರವಾಸ ಸರಣಿ ಆರಂಭಗೊಳ್ಳಲಿದೆ.

Story first published: Thursday, July 23, 2020, 9:47 [IST]
Other articles published on Jul 23, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+