For Quick Alerts
ALLOW NOTIFICATIONS  
For Daily Alerts
 

Shikhar Dhawan: ಶಿಖರ್‌ ಧವನ್‌ಗೆ ಸಿಕ್ಕ ಹೊಸ ಜೀವನ ಸಂಗಾತಿ? ಇಲ್ಲಿದೆ ವೈರಲ್‌ ವಿಡಿಯೋ

ಟೀಮ್ ಇಂಡಿಯಾದ ಸ್ಟಾರ್‌ ಬ್ಯಾಟರ್‌ ಶಿಖರ್‌ ಧವನ್‌ ಇತ್ತೀಚಿಗೆ ಕ್ರಿಕೆಟ್‌ನಿಂದ ನಿವೃತ್ತಿ ಪಡೆದು ಸುದ್ದಿಯಾಗಿದ್ದರು. ಈಗ ಮುಂಬೈನಲ್ಲಿ ಟೀಮ್ ಇಂಡಿಯಾದ ಮಾಜಿ ಬ್ಯಾಟರ್‌ ಶಿಖರ್‌ ಧವನ್‌ ಏರ್‌ ಪೋರ್ಟ್‌ನಲ್ಲಿ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಶಿಖರ್‌ ಧವನ್‌ ಮತ್ತೊಂದು ಮದುವೆ ಆಗುವ ಬಗ್ಗೆ ಹಲವು ಊಹಾಪೋಹಗಳು ಎದ್ದಿದ್ದವು. ಅದಕ್ಕೆ ಈಗ ರೆಕ್ಕೆ ಪುಕ್ಕಗಳು ಬಂದಂತಾಗಿವೆ. ಶಿಖರ್ ಧವನ್ ಅವರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗಬ್ಬರ್ ಸುಂದರ ಯುವತಿಯೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಯುವತಿ ಯಾರು ಎಂಬ ಪ್ರಶ್ನೆಗಳು ಈಗ ಎದ್ದಿವೆ.

Shikhar Dhawan Spotted with Mystery Girl at Mumbai Airport Is Love in the Air Again

ವೈರಲ್‌ ವಿಡಿಯೋ

ಟೀಮ್ ಇಂಡಿಯಾದ ಮಾಜಿ ಆರಂಭಿಕನ ಆಟಗಾರನ ಜೊತೆ ಕಾಣಿಸಿಕೊಂಡ ಯುವತಿ ಯಾರು ಎಂಬ ಬಗ್ಗೆ ಇನ್ನು ಮಾಹಿತಿ ಬಂದಿಲ್ಲ. ಆದರೆ ಸಾಮಾಜಿಕ ತಾಣದಲ್ಲಿ ಅಭಿಮಾನಿಗಳು ಶಿಖರ್‌ ಧವನ್‌ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂದು ಕಾಲು ಏಳೆದಿದ್ದಾರೆ. ಈ ವೀಡಿಯೊದಲ್ಲಿ, ಧವನ್ ನೀಲಿ ಟಿ-ಶರ್ಟ್ ಮತ್ತು ಕಪ್ಪು ಕಾರ್ಗೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಮಯದಲ್ಲಿ, ಧವನ್ ಜೊತೆ ಯುವತಿ ಸಹ ಕಾಣಿಸಿಕೊಂಡಿದ್ದಾರೆ. ಆದರೆ ಕ್ಯಾಮೆರಾ ಕಣ್ಣುಗಳು ಅವರ ಮೇಲೆ ಬೀಳುತ್ತಿದ್ದಂತೆ ಯುವತಿ ದೂರ ಸರಿದರು.

ಶಿಖರ್ ಧವನ್ 2012 ರಲ್ಲಿ ಆಯೇಶಾ ಮುರ್ಖಾಜಿ ಅವರನ್ನು ವಿವಾಹವಾಗಿದ್ದರು. ಆಯೇಷಾ ಶಿಖರ್‌ಗಿಂತ ವಯಸ್ಸಿನಲ್ಲಿ ಹಿರಿಯರು. ಇವರಿಬ್ಬರ ದಾಂಪತ್ಯ ಬಹುದಿನಗಳ ಕಾಲ ಸುಖದಿಂದಲೇ ಇತ್ತು. ಶಿಖರ್ ಮತ್ತು ಆಯೇಷಾ ದಂಪತಿಗೆ ಜೋರಾವರ್ ಎಂಬ ಮಗನಿದ್ದಾನೆ. ಶಿಖರ್ ಧವನ್ ಮತ್ತು ಅವರ ಪತ್ನಿ ಆಯೇಶಾ ಮುಖರ್ಜಿ ಕೆಲವು ವರ್ಷಗಳ ಹಿಂದೆ ಬಿರುಕು ಬಿಟ್ಟಿತ್ತು. ಅಲ್ಲದೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಚ್ಛೇದನ ಪಡೆದರು. ಆ ಬಳಿಕ ಶಿಖರ್‌ ಧವನ್‌ ಮತ್ತೊಂದು ಮದುವೆ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಈ ಸಂಬಂಧ ಇನ್ನು ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ.

ಹೇಗಿದೆ ಗಬ್ಬರ್ ಸಾಧನೆ

ಟೀಮ್ ಇಂಡಿಯಾದ ಸೂಪರ್‌ ಸ್ಟಾರ್ ಬ್ಯಾಟರ್‌ ಶಿಖರ್‌ ಧವನ್ ಈ ವರ್ಷ ಎಲ್ಲ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಧವನ್ ಭಾರತದ ಪರ 35 ಟೆಸ್ಟ್ ಪಂದ್ಯಗಳಲ್ಲಿ 40.61 ಸರಾಸರಿಯಲ್ಲಿ 2315 ರನ್ ಸಿಡಿಸಿದ್ದು, ಇದರಲ್ಲಿ 7 ಶತಕಗಳ ಸೇರಿವೆ. ಅಲ್ಲದೆ 167 ಏಕದಿನ ಪಂದ್ಯಗಳಲ್ಲಿ 44.11 ರ ಸರಾಸರಿಯೊಂದಿಗೆ 6793 ರನ್ ಸಿಡಿಸಿದ್ದಾರೆ. ಇನ್ನು 68 ಟಿ-20 ಪಂದ್ಯಗಳಲ್ಲಿ 1759 ರನ್ ಗಳಿಸಿದ್ದಾರೆ.

ಧವನ್ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 269 ಪಂದ್ಯಗಳನ್ನು ಆಡಿದ್ದು, 10867 ರನ್ ಬಾರಿಸಿದ್ದಾರೆ. 2015ರ ಏಕದಿನ ವಿಶ್ವಕಪ್‌ನಲ್ಲಿ ಧವನ್ ಭಾರತದ ಪರ ಗರಿಷ್ಠ ರನ್‌ ಬಾರಿಸಿದ ಆಟಗಾರ. ಗಬ್ಬರ್ 8 ಪಂದ್ಯಗಳಲ್ಲಿ 51.50 ಸರಾಸರಿಯಲ್ಲಿ 412 ರನ್ ಕಲೆ ಹಾಕಿ ಮಿಂಚಿದ್ದಾರೆ.

Story first published: Monday, November 4, 2024, 18:48 [IST]
Other articles published on Nov 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+