ಭಾರತ vs ಆಸ್ಟ್ರೇಲಿಯಾ: ಮತ್ತೆ ಗಾಯಗೊಂಡ ಶಿಖರ್ ಧವನ್

ಟೀಮ್ ಇಂಡಿಯಾ ಆರಮಭಿಕ ಆಟಗಾರ ಶಿಖರ್ ಧವನ್ ಮತ್ತೆ ಗಾಯಗೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ನಿರ್ಣಾಯಕ ಪಂದ್ಯ ನಡೆಯುತ್ತಿದ್ದು ಫೀಲ್ಡಿಂಗ್ ವೇಳೆ ಶಿಖರ್ ಧವನ್ ಗಾಯಗೊಂಡು ಪಂದ್ಯದಿಂದ ಹೊರಗುಳಿದಿದ್ದಾರೆ.
ಆಸ್ಟ್ರೇಲಿಯಾ ಆರಂಭಿಕ ಆಟಗಾರ ಆರೋನ್ ಫಿಂಚ್ ಬ್ಯಾಟಿಂಗ್ ಸಂದರ್ಭದಲ್ಲಿ ಬಾರಿಸಿದ ಚೆಂಡನ್ನು ತಡೆಯಲು ಧವನ್ ಡೈವ್ ಹೊಡೆದರು. ಈ ಸಂದರ್ಭದಲ್ಲಿ ಧವನ್ ಭುಜಕ್ಕೆ ಗಾಯವಾಗಿದೆ. ತಕ್ಷಣವೇ ಗ್ರೌಂಡ್‌ನಿಂದ ಧವನ್ ಹೊರನಡೆದಿದ್ದಾರೆ.
ಈ ಬಗ್ಗೆ ಬಿಸಿಸಿಐ ಅಧೀಕೃತ ಟ್ವೀಟರ್ ಖಾತೆಯಲ್ಲಿ ಮಾಹಿತಿಯನ್ನು ನೀಡಿದೆ. ಎಕ್ಸ್ ರೇ ಪರೀಕ್ಷೆಗಾಗಿ ಶಿಖರ್ ಧವನ್ ತೆರಳಿದ್ದಾರೆ. ಎಕ್ಸರೇ ಮಾಹಿತಿ ದೊರೆತ ಬಳಿಕ ಅವಲ ಲಭ್ಯತೆಯ ಬಗ್ಗೆ ಸ್ಪಷ್ಟಪಡಿಸಲಾಗುತ್ತದೆ ಎಂದು ಟ್ವೀಟ್ ಮಾಡಿದೆ.
ಎರಡನೇ ಪಂದ್ಯದ ಸಂದರ್ಭದಲ್ಲೂ ಶಿಖರ್ ಧವನ್ ಗಾಯಗೊಂಡಿದ್ದರು. ಪಕ್ಕೆಲುಬಿನ ಗಾಯದಿಂದಾಗಿ ಚಿಕಿತ್ಸೆಗೆ ಒಳಗಾಗಿದ್ದರು. ಇಂದು ಬೆಳಿಗ್ಗೆಯಷ್ಟೇ ಶಿಖರ್ ಧವನ್ ಆಡುವಬ ಬಳಗದಲ್ಲಿ ಇರಲಿದ್ದಾರೆ ಎಂಬುದನ್ನು ಖಚಿತಪಡಿಸಲಾಗಿತ್ತು. ಇದೀಗ ಮತ್ತೆ ಧವನ್ ಭುಜದ ಗಾಯಕ್ಕೊಳಗಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications