ಬೆಂಗಳೂರು, ನವೆಂಬರ್ 21: ಪ್ರವಾಸಿ ಶ್ರೀಲಂಕಾ ವಿರುದ್ಧದ ಮೂರು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯಕ್ಕೆ ಭುವನೇಶ್ವರ್ ಕುಮಾರ್ ಹಾಗೂ ಬ್ಯಾಟ್ಸ್ ಮನ್ ಶಿಖರ್ ಧವನ್ ಅಲಭ್ಯರಾಗಿರುವ ಸುದ್ದಿ ತಿಳಿದಿರಬಹುದು.
ಎಡಗೈ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಮೂರನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗಿದ್ದಾರೆ. ಆದರೆ, ಭುವನೇಶ್ವರ್ ಕುಮಾರ್ ಅವರು ಪೂರ್ತಿ ಸರಣಿಯಿಂದ ಹೊರಗುಳಿದಿದ್ದಾರೆ. ಮದುವೆ ಸಿದ್ಧತೆಯಲ್ಲಿರುವ 27 ವರ್ಷ ವಯಸ್ಸಿನ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಶಿಖರ್ ಧವನ್ ಅವರು ಕಿಚಾಯಿಸಿದ್ದಾರೆ.
ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಹಾಕಿರುವ ಧವನ್, ನೋಡಿ ಮತ್ತೊಬ್ಬ ಹೆಂಡತಿ ಗುಲಾಮನಾಗಲು ಸಿದ್ಧನಾಗಿದ್ದಾನೆ ಎಂದು ತಮಾಷೆ ಮಾಡಿದ್ದಾರೆ. ನಂತರ ಶುಭ ಹಾರೈಸಿದ್ದಾರೆ.
ಮದುವೆಯಾದವರು ಮೊದಲಿಗೆ ನೀಡುವ ಸಂದೇಶ ಹೀಗೆ ಇರುತ್ತೆ ಎಂದು ಭುವನೇಶ್ವರ್ ಕುಮಾರ್ ಕೂಡಾ ಪ್ರತಿಕ್ರಿಯಿಸಿದ್ದಾರೆ. ನವೆಂಬರ್ 23ರಂದು ಮೀರತ್ ನಲ್ಲಿ ನೂಪುರ್ ನಾಗರ್ ಅವರನ್ನು ಭುವನೇಶ್ವರ್ ಕುಮಾರ್ ಅವರು ವರಿಸುತ್ತಿದ್ದಾರೆ.

Lo ji ban gya ek aur joru ka ghulam @imbhuvi ..🤣😌Wish you a very happy married life bro..🤗👍🏼

A post shared by Shikhar Dhawan (@shikhardofficial) on <time style=" font-family:Arial,sans-serif; font-size:14px; line-height:17px;" datetime="2017-11-20T13:45:03+00:00">Nov 20, 2017 at 5:45am PST</time>

ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಟೆಸ್ಟ್ ಪಂದ್ಯವು ನಾಗ್ಪುರ್ ನಲ್ಲಿ ನವೆಂಬರ್ 24ರಂದು ಆರಂಭವಾಗಲಿದೆ. ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಕಂಡಿದೆ.
myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ.
Allow Notifications
You have already subscribed
Story first published: Wednesday, January 3, 2018, 10:05 [IST]
Other articles published on
Jan 3, 2018