ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಎರಡನೇ ಇನಿಂಗ್ಸ್ ಆರಂಭಿಸಿದ್ದಾರೆ. ಇವರು ಎರಡನೇ ಮದುವೆ ಆಗಿದ್ದಾರೆ. ಧವನ್ ತಮ್ಮ 40ನೇ ವಯಸ್ಸಿನಲ್ಲಿ ಐರ್ಲೆಂಡ್ ಮೂಲದ ಗೆಳತಿ ಸೋಫಿ ಶೈನ್ ಅವರನ್ನು ವಿವಾಹವಾಗಿದ್ದಾರೆ. ಧವನ್ ಒಂದು ವರ್ಷದ ಹಿಂದೆ ಮೊದಲ ಪತ್ನಿ ಆಯೇಷಾ ಮುಖರ್ಜಿಗೆ ವಿಚ್ಛೇದನ ನೀಡಿದ್ದರು. ಶಿಖರ್ ಧವನ್ ಅವರು ಐರ್ಲೆಂಡ್ ಮೂಲದ ಸೋಫಿ ಶೈನ್ ಅವರೊಂದಿಗೆ ಸಂಬಂಧ ಹೊಂದಿದರ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಇವರು ತಮ್ಮ ಗೆಳತಿಯೊಂದಿಗೆ ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.
ಶಿಖರ್ ಧವನ್ ಮೊದಲ ಪತ್ನಿ ಆಯೇಷಾ ಮುಖರ್ಜಿ ಅವರೊಂದಿಗೆ 11 ವರ್ಷಗಳ ಕಾಲ ದಾಂಪತ್ಯ ಜೀವನವನ್ನು ನಡೆಸಿದ್ದಾರೆ. ಇವರು ಅಧಿಕೃತವಾಗಿ 2023ರಲ್ಲಿ ವಿಚ್ಚೇದನ ಪಡೆದರು. ಶಿಖರ್ ಧವನ್ ಅವರ ಪತ್ನಿ ವಿಚ್ಚೇದನ ಪಡೆದ ಬಳಿಕ ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿದ್ದಾರೆ. ಆಯೇಷಾ ಮುಖರ್ಜಿ ಅವರೊಂದಿಗೆ ವಿಚ್ಚೇದನ ಪಡೆದ ಬಳಿಕ ಶಿಖರ್ ಧವನ್, ತಮ್ಮ ಮಗನೊಂದಿಗೆ ಮಾತನಾಡಲು ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಈಗ ಇವರು ಎರಡನೇ ಮದುವೆ ಆಗಿದ್ದಾರೆ. ಧವನ್ ಸೋಫಿ ಶೈನ್ ಅವರನ್ನು ಪ್ರೀತಿಸುತ್ತಿದ್ದರು ಮತ್ತು ಹಲವಾರು ವರ್ಷಗಳ ಕಾಲ ಸಂಬಂಧದಲ್ಲಿದ್ದರು.

ಸೋಫಿ ಶೈನ್ 1990 ರಲ್ಲಿ ಐರ್ಲೆಂಡ್‌ನಲ್ಲಿ ಜನಿಸಿದರು. ಇವರು ಸದ್ಯ ಕಾರ್ಪೊರೇಟ್ ಜಗತ್ತಿನಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.
ಸೋಫಿ ಶೈನ್ ಐರ್ಲೆಂಡ್‌ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅಲ್ಲದೆ ಲಿಮೆರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಕ್ಯಾಸಲ್‌ರಾಯ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದ್ದಾರೆ.
ಸೋಫಿ ಯುಎಇಯ ಅಬುಧಾಬಿಯಲ್ಲಿರುವ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ವೈಸ್ ಪ್ರೆಸಿಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ. ಇವರ ನಿವ್ವಳ ಮೌಲ್ಯ ₹10 ಮಿಲಿಯನ್ ಮತ್ತು ₹20 ಮಿಲಿಯನ್ ಇರಬಹುದು ಎಂದು ಅಂದಾಜಿಸಲಾಗಿದೆ.
ವರದಿಗಳ ಪ್ರಕಾರ, ಶಿಖರ್ ಧವನ್ ಮತ್ತು ಸೋಫಿ ಶೈನ್ ದುಬೈನ ರೆಸ್ಟೋರೆಂಟ್‌ನಲ್ಲಿ ಮೊದಲು ಭೇಟಿಯಾದರು. ಇವರು ಇನ್‌ಸ್ಟಾಗ್ರಾಮ್‌ನಲ್ಲಿ 370,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಸದ್ಯ 40 ವರ್ಷದವರಾಗಿದ್ದಾರೆ. ಇವರಿಗೆ ಪ್ರೀತಿಯಿಂದ ಅಭಿಮಾನಿಗಳು ಗಬ್ಬರ ಎಂದು ಕರೆಯುತ್ತಾರೆ. ಇವರು ಭಾರತದ ಪರ 34 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 2315 ರನ್ ಸಿಡಿಸಿದ್ದಾರೆ. ಅಲ್ಲದೆ 7 ಶತಕ ಹಾಗೂ 5 ಅರ್ಧಶತಕ ಬಾರಿಸಿದ್ದಾರೆ. ಇನ್ನು ಇವರು 167 ಏಕದಿನ ಪಂದ್ಯಗಳನ್ನು ಆಡಿದ್ದು, 6793 ರನ್ ಕಲೆ ಹಾಕಿದ್ದಾರೆ. ಈ ವೇಳೆ 17 ಶತಕ, 39 ಅರ್ಧಶತಕ ಬಾರಿಸಿದ್ದಾರೆ.