For Quick Alerts
ALLOW NOTIFICATIONS  
For Daily Alerts
 

Shikhar Dhawan: ಬಿಗ್ ಮ್ಯಾಚ್ ಪ್ಲೇಯರ್‌ ಗಬ್ಬರ್‌ ವೃತ್ತಿ ಜೀವನದ 5 ಬೆಸ್ಟ್‌ ಇನಿಂಗ್ಸ್‌

ಟೀಮ್ ಇಂಡಿಯಾದ ಸ್ಟಾರ್‌ ಓಪನರ್‌ಗಳಲ್ಲಿ ಶಿಖರ್‌ ಧವನ್‌ಗೆ ಸ್ಥಾನವಿದೆ. ಲೆಫ್ಟ್‌ ಹ್ಯಾಂಡ್‌ ಬ್ಯಾಟರ್‌ ಗಬ್ಬರ್‌, ತಮ್ಮ ಧಮಾಕೆದಾರ್‌ ಸ್ಟೈಲ್‌ನಿಂದಲೇ ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಅಂಗಳಕ್ಕೆ ಒಮ್ಮೆ ಎಂಟ್ರಿ ನೀಡಿದರೆ, ಸಲೀಸಾಗಿ ರನ್‌ಗಳನ್ನು ಕಲೆ ಹಾಕುತ್ತಾ ಸಾಗುತ್ತಿದ್ದ ಸೂಪರ್‌ ಸ್ಟಾರ್‌ ಶನಿವಾರ ಬೆಳಗ್ಗೆ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಶಿಖರ್‌ ಧವನ್ ಟೀಮ್‌ ಇಂಡಿಯಾದ ಪರ ಅದೆಷ್ಟೋ ಬಿಗ್‌ ಇನಿಂಗ್ಸ್‌ಗಳನ್ನು ಆಡಿದ್ದಾರೆ. ಅಲ್ಲದೆ ಐಸಿಸಿ ಟೂರ್ನಿಗಳಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ನಡೆಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. ಇವರು ಐಸಿಸಿ ಈವೆಂಟ್‌ಗಳಲ್ಲಿ ಆಡುವ ಧಾಟಿಯನ್ನು ಕಂಡೆ ಇವರಿಗೆ ಬಿಗ್‌ ಮ್ಯಾಚ್‌ ಪ್ಲೇಯರ್‌ ಎಂದು ಕರೆಯಲಾಗುತ್ತದೆ. ಶಿಖರ್‌ ಧವನ್‌, ಅದೆಷ್ಟೋ ಬಾರಿ ಟೀಮ್ ಇಂಡಿಯಾ ಪರ ಕ್ಲಾಸಿಕ್‌ ಇನಿಂಗ್ಸ್ ಆಡಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲಿ ಅಭಿಮಾನಿಗಳಿಗೆ ನೆನಪಾಗುವ ಐದು ಪಂದ್ಯಗಳ ಪಟ್ಟಿ ಇಲ್ಲಿದೆ.

Shikhar Dhawan s Top 5 Masterclass Innings as India s Opening Batsman

ಆಸ್ಟ್ರೇಲಿಯಾ ವಿರುದ್ಧ 187

ಶಿಖರ್‌ ಧವನ್‌ ಸೀಮಿತ ಓವರ್‌ಗಳ ಪಂದ್ಯದಲ್ಲಿ ಸದ್ದು ಮಾಡಿದ ಬಳಿಕ ಅವರಿಗೆ 2013ರಲ್ಲಿ ಟೆಸ್ಟ್‌ ಕ್ರಿಕೆಟ್‌ ಆಡುವ ಅವಕಾಶ ಲಭಿಸಿತು. ಸಿಕ್ಕ ಮೊದಲ ಅವಕಾಶವೇ ಆಸ್ಟ್ರೇಲಿಯಾ ವಿರುದ್ಧವಾಗಿತ್ತು. ಈ ಅವಕಾಶದಲ್ಲಿ ಗಬ್ಬರ್‌ ತಮ್ಮಲಿರುವ ಬ್ಯಾಟಿಂಗ್‌ ಕ್ಷಮತೆಯನ್ನು ಸಾರಿ ಹೇಳಿದ್ದರು. ಈ ಪಂದ್ಯದಲ್ಲಿ ಶಿಖರ್‌ 174 ಎಸೆತಗಳಲ್ಲಿ 187 ರನ್‌ ಸಿಡಿಸಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 408 ರನ್‌ ಕಲೆ ಹಾಕಿತ್ತು. ಈ ಪಂದ್ಯದಲ್ಲಿ ಭಾರತ ಇನಿಂಗ್ಸ್‌ ಮುನ್ನಡೆ ಸಾಧಿಸಿತ್ತು. ಇದರ ಸಂಪೂರ್ಣ ಕೀರ್ತಿ ಭಾರತದ ಶಿಖರ್‌ ಧವನ್ ಹಾಗೂ ಮುರುಳಿ ವಿಜಯ್ ಅವರಿಗೆ ಸಲ್ಲುತ್ತದೆ.

Shikhar Dhawan s Top 5 Masterclass Innings as India s Opening Batsman

ದಕ್ಷಿಣ ಆಫ್ರಿಕಾ ಎ ವಿರುದ್ಧ ಅಮೋಘ ಬ್ಯಾಟಿಂಗ್

ಶಿಖರ್ ಧವನ್‌ ಅವರ ಬ್ಯಾಟಿಂಗ್ ಕ್ಷಮತೆ ಗೊತ್ತಾಗಿದ್ದೇ ಈ ಪಂದ್ಯದಲ್ಲಿ ಅಂದರೂ ತಪ್ಪಾಗಲಾರದು. 2013 ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಬೆಳೆಸಿದ್ದ ಭಾರತ ಎ ತಂಡದ ಭಾಗವಾಗಿದ್ದ ಶಿಖರ್‌, ವಿಶ್ವ ಕ್ರಿಕೆಟ್‌ ನಿಬ್ಬೆರಗಾಗುವಂತಹ ಇನಿಂಗ್ಸ್ ಕಟ್ಟಿದರು. ಉಭಯ ದೇಶಗಳ ನಡುವೆ ನಡೆದ ಆರನೇ ಪಂದ್ಯದಲ್ಲಿ ಶಿಖರ್‌ ಅಮೋಘ ಬ್ಯಾಟಿಂಗ್ ನಡೆಸಿದರು. ಮೊದಲೇರಡು ಪಂದ್ಯಗಳಲ್ಲಿ ನಿರಾಸೆ ಹೊಂದಿದ್ದರಿಂದ ಇವರಿಗೆ ಮಧ್ಯದಲ್ಲಿ ರೆಸ್ಟ್ ನೀಡಲಾಗಿತ್ತು.

ಶಿಖರ್‌ ಧವನ್‌ ಅವರಿಗೆ ಭಾರತ ಎ ಮ್ಯಾನೇಜ್ಮೆಂಟ್ ಮತ್ತೊಮ್ಮೆ ಅವಕಾಶ ನೀಡಿತು. ಈ ವೇಳೆ ಶಿಖರ್‌ ಅಬ್ಬರಿಸಿದರು. ಶಿಖರ್‌ ದಕ್ಷಿಣ ಆಫ್ರಿಕಾ ಎ ವಿರುದ್ಧ 150 ಎಸೆತಗಳನ್ನು ಎದುರಿಸಿ, 30 ಬೌಂಡರಿ, 7 ಸಿಕ್ಸರ್ ಸಹಾಯದಿಂದ 248 ರನ್‌ ಸಿಡಿಸಿದರು. ಅಲ್ಲದೆ ಲೀಸ್ಟ್‌ ಎನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ಮೊದಲಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದು, ಇವರು ಶ್ರೀಲಂಕಾ ವಿರುದ್ಧ 264 ರನ್‌ ಬಾರಿಸಿ ಅಬ್ಬರಿಸಿದ್ದರು.

Shikhar Dhawan s Top 5 Masterclass Innings as India s Opening Batsman

2015ರ ವಿಶ್ವಕಪ್‌ನಲ್ಲಿ ಅಬ್ಬರ

ಶಿಖರ್‌ ಧವನ್‌ 2015 ಏಕದಿನ ವಿಶ್ವಕಪ್‌ನಲ್ಲಿ ಅಬ್ಬರ ನಡೆಸಿದ್ದರು. ಈ ವೇಳೆ ಭಾರತ ಲೀಗ್‌ ಹಂತದ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧದ ಲೀಗ್‌ ಹಂತದ ಪಂದ್ಯದಲ್ಲಿ ಶಿಖರ್‌ ಆರ್ಭಟಿಸಿದ್ದರು. ಶಿಖರ್‌ ಅವರ 137 ರನ್‌ಗಳ ಅಮೋಘ ಆಟದ ನೆರವಿನಿಂದ ಭಾರತ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ 307 ರನ್‌ ಕಲೆ ಹಾಕಿತು. ಅಲ್ಲದೆ ಈ ಪಂದ್ಯವನ್ನು 130 ರನ್‌ಗಳಿಂದ ಗೆದ್ದು ಕೊಂಡಿತು.

ದ್ವೀಪರಾಷ್ಟ್ರದಲ್ಲಿ ಗಬ್ಬರ್‌ ಹವಾ

ಭಾರತ, ಶ್ರೀಲಂಕಾ ಪ್ರವಾಸವನ್ನು ಬೆಳೆಸಿತ್ತು. ಈ ವೇಳೆ ಟೆಸ್ಟ್ ಸರಣಿಯನ್ನು ಆಡಲಾಯಿತು. ಗಾಲೆಯಲ್ಲಿ ನಡೆದ ಪಂದ್ಯದಲ್ಲಿ ಶಿಖರ್‌ ತಮ್ಮ ಟೆಸ್ಟ್‌ ಕ್ರಿಕೆಟ್ ಇತಿಹಾಸದ ಅತಿ ಹೆಚ್ಚು ರನ್‌ ಬಾರಿಸಿದರು. ಶಿಖರ್‌ 168 ಎಸೆತಗಳಲ್ಲಿ 190 ರನ್ ಬಾರಿಸಿದರು.

ಚುಟುಕು ಕ್ರಿಕೆಟ್‌ನಲ್ಲಿ ಆರ್ಭಟ

ಏಕದಿನ ಹಾಗೂ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಶಿಖರ್‌ ಧವನ್‌ ಅವರು ಭಾರತದ ಪರ ಟಿ20 ಪಂದ್ಯಗಳಲ್ಲೂ ಮಿಂಚು ಹರಿಸಿದ್ದಾರೆ. ಅಲ್ಲದೆ ಹಲವು ಪಂದ್ಯಗಳಲ್ಲಿ ಭಾರತಕ್ಕೆ ಗೆಲುವಿನ ಮಾಲೆ ತೊಡಿಸಿದ್ದಾರೆ. ಶಿಖರ್ ಧವನ್‌ 2018ರಲ್ಲಿ ವೆಸ್ಟ್‌ ಇಂಡೀಸ್ ವಿರುದ್ಧ 62 ಎಸೆತಗಳಲ್ಲಿ 92 ರನ್ ಬಾರಿಸಿದ್ದರು. ಈ ಇನಿಂಗ್ಸ್‌ನಲ್ಲಿ ಶಿಖರ್‌ 10 ಬೌಂಡರಿ, 2 ಸಿಕ್ಸರ್ ಬಾರಿಸಿದ್ದರು. ಈ ಪಂದ್ಯದಲ್ಲೂ ಭಾರತ ಜಯ ಸಾಧಿಸಿತ್ತು.

Story first published: Saturday, August 24, 2024, 12:48 [IST]
Other articles published on Aug 24, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+