ಐಪಿಎಲ್ ಹರಾಜಿನ ಬಳಿಕ ಡ್ಯಾನ್ಸ್ ಮಾಡಿದ ಶಿಮ್ರನ್ ಹೆಟ್ಮಾಯೆರ್: ವೀಡಿಯೋ

ಕೋಲ್ಕತ್ತಾ, ಡಿಸೆಂಬರ್ 20: ಮೂಲಬೆಲೆ 50 ಲಕ್ಷ ರೂ. ಇದ್ದ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಶಿಮ್ರನ್ ಹೆಟ್ಮಾಯೆರ್ ಐಪಿಎಲ್ ಹರಾಜಿನಲ್ಲಿ ಭರ್ಜರಿ 7.75 ಕೋ.ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಪಾಲಾಗಿ ಚಿತ್ತ ತನ್ನತ್ತ ಹರಿಸಿಕೊಂಡಿದ್ದರು. ಹರಾಜಿನ ವೇಳೆ ಹೆಟ್ಮಾಯೆರ್‌ಗಾಗಿ ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮಧ್ಯೆ ಜಿದ್ದಾಜಿದ್ದಿ ನಡೆದಿತ್ತು.
ಭಾರತಕ್ಕೆ ಪ್ರವಾಸ ಬಂದಿರುವ ವೆಸ್ಟ್ ಇಂಡೀಸ್, ಆತಿಥೇಯ ಭಾರತದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಸುಲಭ ಗೆಲುವನ್ನಾಚರಿಸಿತ್ತು. ಈ ಪಂದ್ಯದ ಗೆಲುವಿನ ರುವಾರಿ ಹೆಟ್ಮಾಯೆರ್ ಆಗಿದ್ದರು. ಅಂದಿನ ಪಂದ್ಯದಲ್ಲಿ ಶಿಮ್ರನ್ ಬ್ಯಾಟ್‌ನಿಂದ 139 ರನ್ (106 ಎಸೆತ) ಸಿಡಿದಿತ್ತು. ಇದರಲ್ಲಿ 11 ಬೌಂಡರಿ-7 ಸಿಕ್ಸರ್‌ಗಳು ಸೇರಿದ್ದವು. ಹರಾಜಿನ ವೇಳೆ ಹೆಟ್ಮಾಯೆರ್ ಆಕರ್ಷಿಸಿದ್ದು ಇದೇ ಕಾರಣಕ್ಕಾಗಿ.
ಆಟಗಾರರ ಹರಾಜಿನಲ್ಲಿ ಹೆಟ್ಮಾಯೆರ್ ಡೆಲ್ಲಿ ಪಾಲಾಗುತ್ತಲೇ ಡೆಲ್ಲಿ ಫ್ರಾಂಚೈಸಿಯ ಅಧಿಕೃತ ಟ್ವಿಟರ್ ಖಾತೆ ಒಂದು ಟ್ವೀಟ್ ಮಾಡಿತ್ತು. ಈ ಟ್ವೀಟ್‌ನಲ್ಲಿ 'ಡಿಸಿಗೆ ಶಿಮ್ರನ್‌ಗೆ ಸ್ವಾಗತ. ಅಭಿಮಾನಿಗಳಿಗಾಗಿ ಒಂದು ಸಂದೇಶ ಹಂಚಿಕೊಳ್ಳಿ ಎಂದು ಕೇಳಿಕೊಂಡಿದ್ದೆವು. ಅದಕ್ಕೆ ಹೆಟ್ಮಾಯೆರ್ ಅವರಿಂದ ಬಂದ ಪ್ರತಿಕ್ರಿಯೆ,' ಎಂದು ಬರೆದು, ಒಂದು ವೀಡಿಯೋ ಕೂಡ ಶೇರ್ ಮಾಡಲಾಗಿತ್ತು.
22ರ ಹರೆಯದ ಹೆಟ್ಮಾಯೆರ್ ಕಳೆದ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಿಂದ 5 ಕೋಟಿ ರೂ.ಗೆ ಖರೀದಿಸಲ್ಪಟ್ಟಿದ್ದರು. ಆದರೆ ಸಿಕ್ಕ ಅವಕಾಶವನ್ನು ಶಿಮ್ರನ್ ಅಲ್ಲಿ ಸರಿಯಾಗಿ ಬಳಸಿಕೊಂಡಿರಲಿಲ್ಲ. 5 ಪಂದ್ಯಗಳಲ್ಲಿ ಕೇವಲ 90 ರನ್ ಗಳಿಸಿದ್ದರಿಂದ ಆರ್‌ಸಿಬಿ ಈ ಬಾರಿ ತಂಡದಿಂದ ಅವರನ್ನು ಕೈ ಬಿಟ್ಟಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications