ರಾಜಸ್ಥಾನ ರಾಯಲ್ಸ್ ಶಿಬಿರ ತೊರೆದು ದಿಢೀರ್ ತವರಿಗೆ ಪ್ರಯಾಣಿಸಿದ ಶಿಮ್ರಾನ್ ಹೆಟ್ಮೆಯರ್; ಕಾರಣ?
ರಾಜಸ್ಥಾನ ರಾಯಲ್ಸ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮೆಯರ್ ಅವರು ರಾಜಸ್ಥಾನ ರಾಯಲ್ಸ್ ಶಿಬಿರವನ್ನು ತೊರೆದು ದಿಢೀರ್ ಆಗಿ ತವರು ಗಯಾನಾಗೆ ಪ್ರಯಾಣಿಸಿದ್ದಾರೆ. ಆದರೆ ಅದಕ್ಕೆ ಕಾರಣವೂ ಇದೆ ಎಂದು ರಾಜಸ್ಥಾನ್ ರಾಯಲ್ಸ್ ಹೇಳಿದೆ.
ವೆಸ್ಟ್ ಇಂಡೀಸ್‌ನ ಬ್ಯಾಟರ್ ಶಿಮ್ರಾನ್ ಹೆಟ್ಮೆಯರ್ ತನ್ನ ಮೊದಲ ಮಗುವಿನ ಜನನಕ್ಕಾಗಿ ತವರು ಗಯಾನಾಗೆ ಹೋಗಲಿದ್ದು, ಆದ್ದರಿಂದ ಮುಂಬೈನಲ್ಲಿರುವ ತಂಡದ ಶಿಬಿರವನ್ನು ತೊರೆದಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ಭಾನುವಾರ ಮಾಹಿತಿ ನೀಡಿದೆ.

ಎಡಗೈ ಬ್ಯಾಟ್ಸ್‌ಮನ್ ಶೀಘ್ರದಲ್ಲೇ ಮರಳಲಿದ್ದಾರೆ ಎಂದು ಫ್ರಾಂಚೈಸಿ ಹೇಳಿದೆ. ಶಿಮ್ರಾನ್ ಹೆಟ್ಮೆಯರ್ ಈ ಋತುವಿನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ತಂಡದ ಬ್ಯಾಟಿಂಗ್ ಆರ್ಡರ್‌ನಲ್ಲಿ ಹೆಚ್ಚು ಅಗತ್ಯವಿರುವ ಶಕ್ತಿ ಒದಗಿಸಿದ್ದಾರೆ.
ರಾಜಸ್ಥಾನ ಟ್ವಿಟರ್‌ನಲ್ಲಿ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ಶಿಮ್ರಾನ್ ಹೆಟ್ಮೆಯರ್ ತನ್ನ ಸಹ ಆಟಗಾರರನ್ನು ತಬ್ಬಿಕೊಳ್ಳುವುದನ್ನು ಕಾಣಬಹುದು.

"ಶಿಮ್ರಾನ್ ಹೆಟ್ಮೆಯರ್ ಅವರು ತಮ್ಮ ಮೊದಲ ಮಗುವಿನ ಜನನ ಸನ್ನಿಹಿತವಾದ ಕಾರಣ, ಭಾನುವಾರ ಮುಂಜಾನೆ ಗಯಾನಾಗೆ ಹಿಂತಿರುಗಿದ್ದಾರೆ, ಆದರೆ ಅವರು ಶೀಘ್ರದಲ್ಲೇ ಹಿಂತಿರುಗುತ್ತಾರೆ," ಎಂದು ಶೀರ್ಷಿಕೆಯಾಗಿ ರಾಜಸ್ಥಾನ್ ರಾಯಲ್ಸ್ ಬರೆದಿದೆ.
ಶಿಮ್ರಾನ್ ಹೆಟ್ಮೆಯರ್ ವಿಡಿಯೋದಲ್ಲಿ, "ಹೆಟ್ಟಿ ಇಲ್ಲಿ! ಮಕ್ಕಳು ಒಮ್ಮೆ ಮಾತ್ರ ಜನಿಸುತ್ತಾರೆ ಮತ್ತು ಇದು ನನ್ನ ಮೊದಲನೆಯದು. ನನ್ನ ವಸ್ತುಗಳು ಇನ್ನೂ ಕೋಣೆಯಲ್ಲಿ ಉಳಿದಿವೆ. ವಿಶೇಷ ತುರ್ತು ಪರಿಸ್ಥಿತಿಯಿಂದಾಗಿ ನಾನು ಹೊರಡುತ್ತಿದ್ದೇನೆ. ನನ್ನನ್ನು ತುಂಬಾ ಮಿಸ್ ಮಾಡಿಕೊಳ್ಳಬೇಡಿ, ಶೀಘ್ರದಲ್ಲೇ ನಿಮ್ಮನ್ನು ಭೇಟಿ ಮಾಡುತ್ತೇನೆ," ಎಂದು ಹೇಳಿದ್ದಾರೆ.
ಐಪಿಎಲ್ 2022ರಲ್ಲಿ ಶಿಮ್ರಾನ್ ಹೆಟ್ಮೆಯರ್ 11 ಪಂದ್ಯಗಳಲ್ಲಿ 72.75 ರ ಸರಾಸರಿಯಲ್ಲಿ 291 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಋತುವಿನಲ್ಲಿ ಅವರ ಗರಿಷ್ಠ ಸ್ಕೋರ್ ಔಟಾಗದೇ 59 ಆಗಿದೆ.
ಶನಿವಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 190 ರನ್ ಬೆನ್ನಟ್ಟಲು ರಾಜಸ್ಥಾನಕ್ಕೆ ಸಹಾಯ ಮಾಡಲು ಶಿಮ್ರಾನ್ ಹೆಟ್ಮೆಯರ್ ಕೇವಲ 16 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ಗೆಲುವಿನ ದಡ ಸೇರಿಸಿದರು.

ರಾಜಸ್ಥಾನ ರಾಯಲ್ಸ್ ಪ್ರಸ್ತುತ 14 ಅಂಕಗಳೊಂದಿಗೆ ಐಪಿಎಲ್ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಬುಧವಾರದಂದು ಡಾ. ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಸೆಣಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications