ಹೆಟ್ಮರ್ ಭರ್ಜರಿ ಶತಕ: ಬಾಂಗ್ಲಾ ವಿರುದ್ಧ ವಿಂಡೀಸ್ ಗೆ ರೋಚಕ ಜಯ

ಪ್ರಾವಿಡೆನ್ಸ್, ಜುಲೈ 26: ವೆಸ್ಟ್ ಇಂಡೀಸ್ ಮತ್ತು ಅಮೆರಿಕಾ ಪ್ರವಾಸದಲ್ಲಿರುವ ಬಾಂಗ್ಲಾದೇಶ, ರೋಡ್ ಐಲೆಂಡ್ ನ ಪ್ರಾವಿಡೆನ್ಸ್ ನಲ್ಲಿ ನಡೆದ ಎರಡನೇ (ಡೇ ನೈಟ್) ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 3ರನ್ ಸೋಲನುಭವಿಸಿದೆ. ಶಿಮ್ರಾನ್ ಹೆಟ್ಮರ್ ಸಿಡಿಸಿದ ಶತಕದ ನೆರವಿನಿಂದ ವಿಂಡೀಸ್ ರೋಚಕ ಗೆಲುವು ದಾಖಲಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸ್ಲಪಟ್ಟ ವೆಸ್ಟ್ ಇಂಡೀಸ್ 49.3 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದು 271ರನ್ ಪೇರಿಸಿ ಬಾಂಗ್ಲಕ್ಕೆ 272 ರನ್ ಗುರಿ ನೀಡಿತ್ತು. ಚೇಸಿಂಗ್ ಗೆ ಇಳಿದ ಬಾಂಗ್ಲ ಭರ್ಜರಿ ಆಟವಾಡಿತಾದರೂ 50 ಓವರ್ ಗೆ 6 ವಿಕೆಟ್ ಕಳೆದು 268 ರನ್ ಪೇರಿಸಿ ಗೆಲುವಿನಂಚಲಿ ಎಡವಿತು.
ವಿಂಡೀಸ್ ಇನ್ನಿಂಗ್ಸ್ ನಲ್ಲಿ 93 ಎಸೆತಕ್ಕೆ ಭರ್ಜರಿ 125 ರನ್ ಪೇರಿಸಿದ ಶಿಮ್ರಾನ್ ತಂಡದ ಗೆಲುವಿಗೆ ಕಾರಣರಾದರು. ಹೆಟ್ಮರ್ ಬಿಟ್ಟರೆ ಕ್ರಿಸ್ ಗೇಲ್ 29 (38), ಶೈ ಹೋಪ್ 25 (43), ರೋಮನ್ ಪೊವೆಲ್ 44 (67) ರನ್ ಕೊಡುಗೆ ಮಾತ್ರ ಕೊಂಚ ಗಮನಾರ್ಹವೆನಿಸಿದ್ದು. ಉಳಿದವರೆಲ್ಲರೂ 12ರ ಒಳಗೆ ಪೆವಿಲಿಯನ್ ದಾರಿ ಹಿಡಿದರು.
ಗುರಿ ಬೆನ್ನಟ್ಟಿದ ಬಾಂಗ್ಲ ಆರಂಭಿಕ ಉತ್ತಮ ಆಟವನ್ನೇ ಆಡಿತು. ತಂಡದ ಪರ ತಮೀಮ್ ಇಕ್ಬಾಲ್ 54 (85), ಶಕೀಬ್ ಅಲ್ ಹಸನ್ 56 (72), ಮುಷ್ಫಿಕರ್ ರಹೀಮ್ 68 (67), ಮೊಹಮ್ಮದುಲ್ಲ 39 (51) ರನ್ ಬಾಂಗ್ಲವನ್ನು ಗೆಲುವಿನಂಚಿಗೆ ತಂದಿತ್ತು. ಆದರೆ ಪಂದ್ಯದಲ್ಲಿ ಬಹುತೇಕ ಆಟಗಾರರು ಎದುರಿಸಿದ ಎಸೆತಗಳಿಗೆ ತಕ್ಕಂತೆ ರನ್ ತರದಿದ್ದುದು ತಂಡಕ್ಕೆ ದುಬಾರಿಯಾಗಿ ಪರಿಣಮಿಸಿತು.
ವೆಸ್ಟ್ ಇಂಡೀಸ್ ಇನ್ನಿಂಗ್ಸ್ ನಲ್ಲಿ ಬ್ಯಾಟ್ಸ್ಮನ್ ಗಳನ್ನು ಕಟ್ಟಿ ಹಾಕುವಲ್ಲಿ ಬಾಂಗ್ಲಾ ಬೌಲರ್ ಗಳಾದ ರೊಬೆಲ್ ಹೊಸೈನ್ (61ಕ್ಕೆ 3 ವಿಕೆಟ್), ಶಕೀಬ್ (45ಕ್ಕೆ 2) ಮತ್ತು ಮುಷ್ತಫಿಜುರ್ ರಹ್ಮಾನ್ (44ಕ್ಕೆ 2) ಯಶಸ್ವಿಯಾಗಿದ್ದರಾದರೂ ಬ್ಯಾಟ್ಸ್ಮನ್ ಗಳ ನಿರ್ಲಕ್ಷ್ಯದಾಟ ತಂಡ ಸೋಲುವಂತೆ ಮಾಡಿತು. ಪಂದ್ಯದಲ್ಲಿನ ಶತಕ ಹೀರೋ ಹೆಟ್ಮರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications