IND VS AFG: ಶಿವಂ ದುಬೆ, ಅಕ್ಷರ್ ಪಟೇಲ್ ಮಿಂಚು: ಸರಣಿ ವಶಕ್ಕೆ ಪಡೆದ ಭಾರತ
ಸಂಘಟಿತ ಆಟದ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ಇಂದೋರ್‌ನಲ್ಲಿ ನಡೆದ ಎಡನೇ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವನ್ನು ಆರು ವಿಕೆಟ್‌ಗಳಿಂದ ಮಣಿಸಿದೆ.
ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಇದು ಕೊನೆಯ ವೇದಿಕೆ ಎಂದು ತಿಳಿಯುತ್ತಿದ್ದಂತೆ ಟೀಮ್ ಇಂಡಿಯಾ ಯಂಗ್ ಪ್ಲೇಯರ್ ಮಿಂಚಿದ್ದಾರೆ. ಭರ್ಜರಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾಮ ಮೂರು ಟಿ20 ಪಂದ್ಯಗಳ ಸರಣಿಯನ್ನು 2-0ಯಿಂದ ಗೆದ್ದು ಕೊಂಡಿದೆ.

14 ತಿಂಗಳ ಬಳಿಕ ಕಮ್‌ಬ್ಯಾಕ್
2022ರ ಟಿ20 ವಿಶ್ವಕಪ್ ಸೆಮಿಫೈನಲ್ ಬಳಿಕ ವಿರಾಟ್ ಕೊಹ್ಲಿ ಸುಮಾರು 14 ತಿಂಗಳ ಬಳಿಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರು. ತಮ್ಮ ನೈಜ ಆಟವನ್ನು ಆಡಿದ ವಿರಾಟ್ 16 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 29 ರನ್ ಸಿಡಿಸಿ ಔಟ್ ಆದರು.
ಟೀಮ್ಇಂಡಿಯಾ ಈ ಗೆಲುವಿನಲ್ಲಿ ಯಂಗ್ ಪ್ಲೇಯರ್‌ಗಳು ಮಿಂಚಿದ್ದು ವಿಶೇಷವಾಗಿತ್ತು. ಬ್ಯಾಟಿಂಗ್‌ನಲ್ಲಿ ಯಶಸ್ವಿ ಜೈಸ್ವಾಲ್ ಧಮಾಕೆದಾರ್ ಬ್ಯಾಟಿಂಗ್ ನಡೆಸಿದರು. ಇವರು 34 ಎಸೆತಗಳಲ್ಲಿ 5 ಬೌಂಡರಿ 6 ಸಿಕ್ಸರ್ ಸಹಾಯದಿಂದ 68 ರನ್ ಬಾರಿಸಿ ತಂಡಕ್ಕೆ ನೆರವಾದರು.
ಮೊದಲ ಪಂದ್ಯದಲ್ಲಿ ಮಿಂಚಿದ್ದ ಶಿವಂ ದುಬೆ ಎರಡನೇ ಟಿ20 ಪಂದ್ಯದಲ್ಲಿ ಮನಮೋಹಕ ಬ್ಯಾಟಿಂಗ್ ನಡೆಸಿದರು. ಇವರು 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 63 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಟೀಮ್ ಇಂಡಿಯಾ ಇನ್ನು 26 ಎಸೆತಗಳು ಬಾಕಿ ಇರುವಂತೆ ಪಂದ್ಯ ಗೆದ್ದಿತು.

ಅರ್ಷದೀಪ್ ಸಿಂಗ್ ಮೂರು ವಿಕೆಟ್
ಟೀಮ್ ಇಂಡಿಯಾದ ಪರ ಯುವ ವೇಗದ ಬೌಲರ್ ಅರ್ಷದೀಪ್ ಸಿಂಗ್ 32 ರನ್ ನೀಡಿ ಮೂರು ವಿಕೆಟ್ ಕಬಳಿಸಿದರು. ಇನ್ನು ಸ್ಪಿನ್ ಬೌಲರ್ ರಣಿ ಬಿಷ್ಣೋಯಿ ಹಾಗೂ ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಪಡೆದರು.
ಬಾರದ ಜೊತೆಯಾಟ
ಅಫ್ಘಾನಿಸ್ತಾನ ಮೊದಲು ಬ್ಯಾಟಿಂಗ್ ನಡೆಸಿತು. ತಂಡದ ಪರ ಸ್ಟಾರ್ ಆಟಗಾರರು ತಂಡಕ್ಕೆ ಜೊತೆಯಾಟದ ಕಾಣಿಕೆ ನೀಡುವಲ್ಲಿ ವಿಫಲರಾದರು. ಪ್ರವಾಸಿ ತಂಡದ ಪರ ಗುಲ್ಬದೀನ್ ನೈಬ್ 35 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್ ಸಹಾಯದಿಂದ 57 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು.
ಉಳಿದಂತೆ ಮೊಹಮ್ಮದ್ ನಬಿ 14, ನಜಿಬುಲ್ಲಾ ಜರ್ದಾನ್ 23, ಕರಿಮ್ ಜನತ್ 20, ಮುಜೀಬ್ ಉರ್ ರೆಹಮಾನ್ 21 ರನ್ ಬಾರಿಸಿ ತಂಡದ ಸೋಲಿನಲ್ಲಿ ಮಿಂಚಿದರು.

ವೈಡ್ ದಾಖಲೆ
ಅರ್ಶದೀಪ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಡ್ ಬಾಲ್ ಬೌಲ್ ಮಾಡಿದ ಬೌಲರ್ ಎನಿಸಿಕೊಂಡಿದ್ದಾರೆ. ವೈಡ್ ಎಸೆತಗಳನ್ನು ಬೌಲಿಂಗ್ ಮಾಡುವ ವಿಚಾರದಲ್ಲಿ ಇವರು ಅರ್ಧಶತಕದ ಗಡಿ ದಾಟಿದ್ದಾರೆ. ಈ ವಿಚಾರದಲ್ಲಿ ಅರ್ಷದೀಪ್ ಐರ್ಲೆಂಡ್‌ನ ಮಾರ್ಕ್ ಅದೈರ್ ಅವರನ್ನು ಹಿಂದಿಕ್ಕಿದ್ದಾರೆ. ಅಡೈರ್ 50 ವೈಡ್ ಎಸೆತಗಳನ್ನು ಎಸೆದಿದ್ದರು, ಆದರೆ ಅರ್ಷದೀಪ್ ಅವರಿಗಿಂತ ಮುಂದೆ ಹೋಗಿ 51 ವೈಡ್ ಎಸೆತಗಳನ್ನು ಎಸೆದರು. ವೆಸ್ಟ್ ಇಂಡೀಸ್‌ನ ಜೇಸನ್ ಹೋಲ್ಡರ್ 39 ವೈಡ್ ಬಾಲ್‌ಗಳನ್ನು ಎಸೆದಿರುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ರೊಮಾರಿಯೊ ಶೆಫರ್ಡ್ 34 ವೈಡ್ ಬಾಲ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ ಮತ್ತು ಭಾರತದ ರವಿ ಬಿಷ್ಣೋಯ್ 29 ವೈಡ್ ಬಾಲ್‌ಗಳೊಂದಿಗೆ ಐದನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications