For Quick Alerts
ALLOW NOTIFICATIONS  
For Daily Alerts
 

ಭಾರತದ ಆ ಒಂದು ನಿರ್ಧಾರದಿಂದ ಪಾಕ್‌ಗೆ 100 ಮಿಲಿಯನ್‌ ಡಾಲರ್‌ ನಷ್ಟ

ಸದ್ಯ ಕ್ರಿಕೆಟ್‌ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿರುವ ಎರಡು ಅಂಶಗಳು ಅಂದರೆ ಬಾರ್ಡರ್‌ ಗವಾಸ್ಕರ್ ಟ್ರೋಫಿಯನ್ನು ಯಾರು ಗೆಲ್ಲುತ್ತಾರೆ? ಇನ್ನೊಂದು ಭಾರತ, ಪಾಕಿಸ್ತಾನಕ್ಕೆ ಚಾಂಪಿಯನ್ಸ್‌ ಟ್ರೋಫಿ ಆಡಲು ಪ್ರವಾಸ ಬೆಳೆಸುತ್ತದಾ ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಭಾರತ ತಂಡ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸ ಬೇಕೋ ಬೇಡವೋ ಎಂಬ ವಿಚಾರ ಈಗ ಸರ್ಕಾರದ ಮುಂದಿದೆ. ಒಂದು ಮೂಲದ ಪ್ರಕಾರ ಸರ್ಕಾರ ಇದಕ್ಕೆ ಒಪ್ಪಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.

ವಿಶ್ವ ಕ್ರಿಕೆಟ್‌ನಲ್ಲಿ ಭಾರತ ಈಗ ತನ್ನದೇ ಆಧ ಛಾಪು ಹೊಂದಿರುವ ತಂಡ. ಈ ತಂಡದಲ್ಲಿ ವಿಶ್ವದಲ್ಲೇಡೆ ಅಪಾರ ಅಭಿಮಾನಿಗಳ ಬಳಗವಿದೆ. ಭಾರತೀಯ ಆಟಗಾರರಿಗೆ ಪಾಕ್‌ನಲ್ಲೂ ಅಭಿಮಾನಿಗಳು, ಇದ್ದಾರೆ. ಇವರನ್ನು ನೋಡಲು ಅಲ್ಲಿನ ಅಭಿಮಾನಿಗಳು ಕಾತುರರಾಗಿದ್ದಾರೆ. ಆದರೆ, ಭಾರತ ಮಾತ್ರ ಪಾಕ್‌ಗೆ ತೆರೆಳುವ ಬಗ್ಗೆ ಮನಸ್ಸು ಮಾಡುತ್ತಿಲ್ಲ. ಈ ನಡುವೆ ಬಿಸಿಸಿಐ ಹಲವು ಬಾರಿ ಚಾಂಪಿಯನ್ಸ್‌ ಟ್ರೋಫಿಯನ್ನು ತಟಸ್ಥ ಸ್ಥಳಕ್ಕೆ ವರ್ಗಾಯಿಸುವಂತೆ ಬೇಡಿಕೆ ಇಡುತ್ತಲೆ ಬಂದಿದೆ. ಆದರೆ ಇದಕ್ಕೆ ಪಾಕ್‌ ಕ್ರಿಕೆಟ್‌ ಮಂಡಳಿ ಸೊಪ್ಪು ಹಾಕುತ್ತಿಲ್ಲ.

Shoaib Akhtar BJP Holds Key to India s 100M Champions Trophy Decision

ಬಿಸಿಸಿಐ ಬೇಡಿಕೆ ಏನು?

ಕಳೆದ ವರ್ಷ ಏಷ್ಯಾ ಕಪ್‌ ಸಹ ಪಾಕ್ ಆಯೋಜಿಸಿತ್ತು. ಆಗ ಭಾರತ ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಿತ್ತು. ಇದೇ ಮಾರ್ಗವನ್ನು ಅನುಸರಿಸುವಂತೆ, ಬಿಸಿಸಿಐ ಪಿಸಿಬಿ ಮೇಲೆ ಒತ್ತಡವನ್ನು ಹೇರುತ್ತದೆ. ಆದರೆ ಪಿಸಿಬಿ ಒಪ್ಪುತ್ತಿಲ್ಲ. ಆದರೆ ಬಿಸಿಸಿಐ ಒಂದು ನಿರ್ಧಾರದಿಂದ ಪಾಕಿಸ್ತಾನ ಕ್ರಿಕೆಟ್‌ ಸಂಸ್ಥೆಯ ಬೊಕ್ಕಸದ ಮೇಲೆ ನೇರ ಪರಿಣಾಮ ಬೀರುತ್ತದೆ. ಅದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಅಖ್ತರ್‌ ಹೇಳಿದ್ದೇನು?

ಈ ಟ್ರೋಫಿಗೆ ಸಂಬಂಧಿಸಿದಂತೆ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಪಾಕ್‌ ತಂಡದ ಸ್ಟಾರ್‌ ವೇಗಿ ಶೋಯಿಬ್ ಅಖ್ತರ್‌ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ಭಾರತ, ಪಾಕ್‌ಗೆ ಪ್ರವಾಸ ಬೆಳೆಸುತ್ತದೋ ಇಲ್ಲವೋ ಎಂಬುದು, ಬಿಸಿಸಿಐಗೆ ಸಂಬಂಧಿಸಿದ ವಿಷಯ ಅಲ್ಲ. ಇದು ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ನಿರ್ಧರಿಸಲಿದೆ. ಇಷ್ಟಂತು ಸತ್ಯ ಪಾಕ್‌ನಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆದರೆ ಅದಕ್ಕೆ 95-98 ಪ್ರತಿಷತ ಪ್ರಾಯೋಜಕತ್ವ ಭಾರತದಿಂದಲೇ ಬರುತ್ತದೆ ಎಂದು ತಿಳಿಸಿದ್ದಾರೆ.

Shoaib Akhtar BJP Holds Key to India s 100M Champions Trophy Decision

ಒಂದು ವೇಳೆ ಭಾರತ, ಪಾಕ್‌ ಪ್ರವಾಸ ಬೆಳೆಸಲು ಮನಸ್ಸು ಮಾಡದೇ ಇದ್ದಲ್ಲಿ ಎರಡು ವಿಷಯಗಳು ಸಂಭವಿಸುತ್ತವೆ. 100 ಮಿಲಿಯರ್ ಡಾಲರ್‌ ಪ್ರಾಯೋಜಕತ್ವ ನಮ್ಮ ಕೈಯಿಂದ ಜಾರಿ ಹೋಗುತ್ತದೆ. ಈ ಹಣ ಐಸಿಸಿ ಹಾಗೂ ಆಯೋಜಿತ ದೇಶಕ್ಕೆ ಸೇರುತ್ತದೆ. ಭಾರತ ಪಾಕ್‌ ಪ್ರವಾಸ ಬೆಳಿಸಿದರೆ ಒಳ್ಳೆಯದು. ಆದರೆ ಈ ಬಗ್ಗೆ ಅಲ್ಲಿನ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನವು ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯಂತಹ ದೊಡ್ಡ ಪಂದ್ಯಾವಳಿಗಳನ್ನು ಆಯೋಜಿಸಲು ಸಾಧ್ಯವಿಲ್ಲ ಎಂಬ ಟ್ಯಾಗ್ ಅನ್ನು ಹೊಂದಿದೆ. ನಾವು ದೊಡ್ಡ ಟೂರ್ನಿಗಳನ್ನು ನಡೆಸುವ ಭರವಸೆ ಇಟ್ಟುಕೊಂಡಿದ್ದೇವೆ. ಕೊನೆಯ ಕ್ಷಣದವರೆಗೂ ಕಾಯೋಣ. ನೀವು ಈಗ ನನ್ನನ್ನು ಕೇಳಿದರೆ, ನಾನು ಭಾರತ, ಪಾಕಿಸ್ತಾನಕ್ಕೆ ಬರಲಿದೆ ಎಂದು ಹೇಳುತ್ತೇನೆ. ಎಂದು ಹೇಳಿದ್ದಾರೆ.

Story first published: Wednesday, November 20, 2024, 13:15 [IST]
Other articles published on Nov 20, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+