ಆ ರೀತಿಯ ಕಾಮೆಂಟ್‌ಗಳನ್ನು ದಯವಿಟ್ಟು ಮಾಡಬೇಡಿ: ಸೆಹ್ವಾಗ್‌ಗೆ ಶೋಯೆಬ್ ಅಖ್ತರ್ ಮನವಿ!

ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಮುಖಾಮುಖಿಯೆಂದರೆ ಅದು ಯಾವಾಗಲೂ ಅಭಿಮಾನಿಗಳಿಗೆ ರೋಚಕ ಅನುಭವ. ಆದರೆ ಈ ಎರಡು ತಂಡಗಳು ದ್ವಿಪಕ್ಷೀಯ ಸರಣಿಯಲ್ಲಿ ಮುಖಾಮುಖಿಯಾಗದೆ ಬಹುತೇಕ ಒಂದು ದಶಕವೇ ಆಗುತ್ತಾ ಬಂದಿದೆ. ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಈ ಎರಡು ತಂಡಗಳ ಮುಖಾಮುಖಿ ನಡೆಯುತ್ತಿದೆ. ಆದರೆ ಅಭಿಮಾನಿಗಳು ಈ ಎರಡು ತಂಡಗಳ ನಡುವಿನ ಮುಖಾಮುಖೀಯ ಸಂದರ್ಭದಲ್ಲಿ ನಡೆಯುತ್ತಿದ್ದ ಕೆಲ ಘರ್ಷಣೆಯ ವಾತಾವರಣದ ಅನುಭವವನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಆದರೆ ಪ್ರಸ್ತುತ ಈ ಎರಡು ಕ್ರಿಕೆಟ್ ತಂಡಗಳ ಮಾಜಿ ಆಟಗಾರರಿಬ್ಬರ ನಡುವಿನ ವಾದಗಳು ಕ್ರಿಕೆಟ್ ಅಭಿಮಾನಿಗಳಿಗೆ ಮತ್ತೊಮ್ಮೆ ಅಂದಿನ ಮೈದಾನದ ಕ್ಷಣಗಳನ್ನು ನೆನಪಿಸುವಂತಿದೆ.
ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಹಾಗೂ ಪಾಕಿಸ್ತಾನ ತಂಡದ ವೇಗಿ ಶೋಯೆಬ್ ಅಖ್ತರ್ ನಡುವಿನ ಮುಖಾಮುಖಿ ಯಾವಾಗಲೂ ಅಭಿಮಾನಿಗಳಿಗೆ ರಸದೌತಣವನ್ನು ನೀಡಿದೆ ಎಂಬುದರಲ್ಲಿ ಅನುಮಾನವಿಲ್ಲ. ಇಬ್ಬರು ಶ್ರೇಷ್ಠ ಆಟಗಾರರ ಮಧ್ಯೆ ಸಾಕಷ್ಟು ಜಿದ್ದಾಜಿದ್ದಿನ ಕ್ಷಣಗಳು ಮೈದಾನದಲ್ಲಿ ನಡೆದಿದೆ.
ಆದರೆ ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ಮಾತನಾಡಿದ ವೀರೇಂದ್ರ ಸೆಹ್ವಾಗ್ ಮತ್ತೊಮ್ಮೆ ಈ ಇಬ್ಬರು ಮಾಜಿ ಕ್ರಿಕೆಟಿಗರ ಮಾತಿನ ಚಕಮಕಿಗೆ ಕಿಡಿ ಹೊತ್ತಿಸಿದೆ.

ಶೋಯೆಬ್ ಅಖ್ತರ್ ಬೌಲಿಂಗ್ ಶೈಲಿಯ ಬಗ್ಗೆ ಸೆಹ್ವಾಗ್ ಪ್ರಶ್ನೆ
ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಪಾಕ್ ವೇಗಿ ಶೋಯೆಬ್ ಅಖ್ತರ್ ಬೌಲಿಂಗ್ ಶೈಲಿಯ ಬಗ್ಗೆ ಪ್ರಶ್ನೆ ಮಾಡಿದ್ದರು. ಅದು ನ್ಯಾಯಯುತವಾಗಿ ಶೈಲಿಯಾಗಿರಲಿಲ್ಲ ಎಂದಿದ್ದರು ಸೆಹ್ವಾಗ್. "ಬೌಲಿಂಗ್ ಸಂದರ್ಭದಲ್ಲಿ ಶೋಯೆಬ್ ಮೊಣಕೈಯನ್ನು ಜರ್ಕ್ ಮಾಡುತ್ತಿದ್ದರು. ಅವರು ಚಕ್ಕಿಂಗ್ ಮಾಡುತ್ತಿದ್ದರು ಎಂಬುದು ಸ್ವತಃ ಶೋಯೆಬ್ ಅಖ್ತರ್‌ಗೂ ತಿಳಿದಿತ್ತು. ಇಲ್ಲದಿದ್ದರೆ ಅವರನ್ನು ಐಸಿಸಿ ಯಾಕೆ ಬ್ಯಾನ್ ಮಾಡುತ್ತಿತ್ತು" ಎಂಬ ಹೇಳಿಕೆ ನೀಡಿದ್ದರು ವೀರೇಂದ್ರ ಸೆಹ್ವಾಗ್.

ಬ್ರೆಟ್ ಲೀ ಕೈ ನೇರವಾಗಿ ಬರುತ್ತಿತ್ತು
ಮುಂದುವರಿದು ಮಾತನಾಡಿದ ವಿರೇಂದ್ರ ಸೆಹ್ವಾಗ್ ಮಾಜಿ ಕ್ರಿಕೆಟಿಗ ಬ್ರೇಟ್ ಲೀ ಬೌಲಿಂಗ್ ಹಾಗೂ ಶೋಯೆಬ್ ಅಖ್ತರ್ ಬೌಲಿಂಗ್‌ಅನ್ನು ಹೋಲಿಕೆ ಮಾಡಿದ್ದಾರೆ. "ಬ್ರೆಟ್ ಲೀ ವೇಗವಾಗಿ ಬೌಲಿಂಗ್ ಮಾಡುತ್ತಿದ್ದರೂ ಅವರ ಕೈ ನೇರವಾಗಿ ಬರುತ್ತಿತ್ತು ಆದರೆ ಅಖ್ತರ್ ಬೌಲಿಂಗ್ ಮಾಡುವಾಗ ಅವರ ಕೈ ಎಲ್ಲಿದೆ ಎಂಬುದನ್ನು ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ" ಎಂದಿದ್ದಾರೆ ವಿರೇಂದ್ರ ಸೆಹ್ವಾಗ್.

ಸೆಹ್ವಾಗ್ ಅವರಲ್ಲಿ ನಾನು ಮನವಿ ಮಾಡುತ್ತಿದ್ದೇನೆ: ಅಖ್ತರ್
ಇನ್ನು ವೀರೇಂದ್ರ ಸೆಹ್ವಾಗ್ ನೀಡಿರುವ ಈ ಹೇಳಿಕೆಗೆ ಶೋಯೆಬ್ ಅಖ್ತರ್ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಸೆಹ್ವಾಗ್ ಅವರಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ಸೆಹ್ವಾಗ್ ಅವರಿಗೆ ಐಸಿಸಿಗಿಂತಲೂ ಈ ಬಗ್ಗೆ ಚೆನ್ನಾಗಿ ತಿಳಿದಿದ್ದರೆ ಅವರು ಈ ರೀತಿಯ ಹೇಳಿಕೆ ನೀಡಲು ಅರ್ಹರಾಗಿದ್ದಾರೆ. ಆದರೆ ಸೆಹ್ವಾಗ್ ಹೇಳಿಕೆಗೆ ನನ್ನ ಪ್ರತಿಕ್ರಿಯೆ ಸ್ವಲ್ಪ ಭಿನ್ನವಾಗಿರುತ್ತದೆ. ನನ್ನ ಪ್ರಕಾರ ಅವರು ಭಾರತ ಕಂಡ ಶ್ರೇಷ್ಠ ಮ್ಯಾಚ್‌ವಿನ್ನರ್‌ಗಳಲ್ಲಿ ಒಬ್ಬರು. ಆತನೋರ್ವ ತಂಡದ ಆಟಗಾರ ಹಾಗೂ ಭಾರತ ಕಂಡ ಶ್ರೇಷ್ಠ ಆರಂಭಿಕ ಆಟಗಾರ" ಎಂದಿದ್ದಾರೆ ಶೋಯೆನ್ ಅಖ್ತರ್.

ನನ್ನ ಹೇಳಿಕೆ ಬಗ್ಗೆ ಎಚ್ಚರಿಕೆ ವಹಿಸುತ್ತೇನೆ
ಸ್ಪೋರ್ಟ್ಸ್ ಕೀಡಾಗೆ ಶೋಯೆನ್ ಅಖ್ತರ್ ಪ್ರತಿಕ್ರಿಯೆ ನೀಡುತ್ತಾ ಈ ಹೇಳಿಕೆ ನೀಡಿದ್ದಾರೆ. ಮುಂದುವರಿಸು ಮಾತನಾಡಿದ ಅಖ್ತರ್ "ಈಗ ನಾನು ಅತ್ಯಂತ ಜವಾಬ್ಧಾರಿಯುತವಾಗಿ ಹೇಳಿಕೆ ನೀಡುವಂತಾ ಹಂತದಲ್ಲಿ ಹಾಗೂ ವಯಸ್ಸಿನಲ್ಲಿದ್ದೇನೆ. ತಮ್ಮ ದೇಶದ ಪರವಾಗಿ ಆಡಿರುವ ಯಾವುದೇ ಆಟಗಾರನನ್ನು ನಾನು ಅಪಮಾನ ಗೊಳಿಸಲು ಇಷ್ಟಪಡುವುದಿಲ್ಲ"ಎಂದಿದ್ದಾರೆ ಶೋಯೆಬ್ ಅಖ್ತರ್.

ಅಖ್ತರ್, ಸೆಹ್ವಾಗ್ ಸಾಧನೆ
ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಶೋಯೆಬ್ ಅಖ್ತರ್ ಪಾಕಿಸ್ತಾನದ ಪರವಾಗಿ 46 ಟೆಸ್ಟ್ ಪಂದ್ಯಗಳನ್ನು ಆಡಿದ್ದು 178 ವಿಕೆಟ್ ಸಂಪಾದಿಸಿದ್ದಾರೆ. ಏಕದಿನ ಮಾದರಿಯಲ್ಲಿ 163 ಪಂದ್ಯಗಳನ್ನು ಆಡಿರುವ ಅಖ್ತರ್ 247 ವಿಕೆಟ್ ಸಂಪಾದಿಸಿದ್ದಾರೆ. ಮತ್ತೊಂದೆಡೆ ಸೆಹ್ವಾಗ್ ಟೆಸ್ಟ್ ಕ್ರಿಕೆಟ್‌ನಲ್ಲಿ 49.34 ಸರಾಸರಿಯಲ್ಲಿ 8586 ರನ್‌ಗಳನ್ನು ಗಳಿಸಿದ್ದು ಏಕದಿನ ಮಾದರಿಯಲ್ಲಿ 8273 ರನ್‌ಗಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications