ಭಾರತ ಹಾಗೂ ಪಾಕಿಸ್ತಾನ ನಡುವಣ ಮತ್ತೊಂದು ಪಂದ್ಯಕ್ಕೆ ದುಬೈ ಅಂಗಳ ಸಜ್ಜಾಗಲಿದೆ. ಏಷ್ಯಾ ಕಪ್ ಟಿ20 ಟೂರ್ನಿಯ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಟೀಮ್ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳು ಫೈಟ್ ನಡೆಸಲಿವೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿ, ಇತಿಹಾಸ ಬರೆಯುವ ಕನಸಿನಲ್ಲಿ ಟೀಮ್ ಇಂಡಿಯಾ ಇದೆ. ಇನ್ನು ಪಾಕಿಸ್ತಾನ ತಂಡ ಸೂರ್ಯ ಪಡೆಯನ್ನು ಸೋಲಿಸುವುದು ಹೇಗೆ ಎಂಬ ಬಗ್ಗೆ ಪಾಕಿಸ್ತಾನದ ಮಾಜಿ ಆಟಗಾರು ಟಿಪ್ಸ್ ನೀಡಿದ್ದಾರೆ.
ಟೀಮ್ ಇಂಡಿಯಾ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದೆ. ಈ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಭಾರತ, ಅಜೇಯವಾಗಿ ಮುನ್ನುಗುತ್ತಿದೆ. ಈ ಟೂರ್ನಿಯ ಲೀಗ್ ಹಂತ ಹಾಗೂ ಸೂಪರ್ 4 ಹಂತದಲ್ಲಿ ಪಾಕ್ ತಂಡವನ್ನು ಮಣಿಸಿರುವ ಭಾರತ ಅಬ್ಬರಿಸಿದೆ. ಬಿಡಿಸಲಾಗದ ಕಗ್ಗಂಟಾಗಿರುವ ಭಾರತದ ಆಟಕ್ಕೆ ಬ್ರೇಕ್ ಹಾಕುವುದು ಹೇಗೆ ಎಂಬ ಬಗ್ಗೆ ಪಾಕ್ ಮಾಜಿ ಆಟಗಾರ ಶೋಯೆಬ್ ಅಖ್ತರ್ ಸಲಹೆ ನೀಡಿದ್ದಾರೆ.

ಈ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸುವ ನೆಚ್ಚಿನ ತಂಡಗಳಲ್ಲಿ ಭಾರತಕ್ಕೆ ಅಗ್ರ ಸ್ಥಾನ. ಪಾಕಿಸ್ತಾನ ಸಿಕ್ಕ ಅವಕಾಶವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಶೋಯೆಬ್ ತಿಳಿಸಿದ್ದಾರೆ. ಆಟಗಾರಹರು ಫೈನಲ್ ಪಂದ್ಯಕ್ಕೂ ಮುನ್ನ ತಮ್ಮ ಮನಸ್ಥಿತಿಯನ್ನು ಬದಲಿಸಿಕೊಳ್ಳುವ ಅವಶ್ಯಕತೆ ಇದೆ. ಹಾಗದಲ್ಲಿ ಬಲಿಷ್ಠ ಸೂರ್ಯಪಡೆಯ ಸದ್ದಡಗಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಬಾಂಗ್ಲಾ ವಿರುದ್ಧ ಆಡಿದ ಮನಸ್ಥಿತಿಯಿಂದ ಆಡಿ ಗೆಲುವು ದಕ್ಕಲಿದೆ. ನೀವು 20 ಓವರ್‌ಗಳನ್ನು ಮಾಡುವ ಅವಶ್ಯಕತೆ ಇಲ್ಲ. ನೀವು ವಿಕೆಟ್ ಕಬಳಿಸಿದರೆ ಸಾಕು ಎಂದು ಶೋಯೆಬ್ ಅಖ್ತರ್ ಕಾರ್ಯಕ್ರಮವೊಂದರಲ್ಲಿ ಶೋಯೆಬ್ ಮಾತನಾಡಿದ್ದಾರೆ. ಪಾಕ್ ತಂಡವು ಸ್ಟಾರ್ ಆಟಗಾರ ಅಭಿಷೇಕ್ ಶರ್ಮಾ ಅವರ ಆಟಕ್ಕೆ ಬೆಗನೆ ಬ್ರೇಕ್ ಹಾಕಬೇಕು. ಅಭಿಷೇಕ್ ಟೂರ್ನಿಯುದಕ್ಕೂ ಅಮೋಘವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇವರನ್ನು ಕಟ್ಟಿ ಹಾಕಿದರೆ ಅರ್ಧ ಕೆಲಸ ಆದಹಾಗೆ ಎಂಬ ರೀತಿ ಶೋಯೆಬ್ ತಿಳಿಸಿದ್ದಾರೆ.

ಅಭಿಷೇಕ್ ಅವರನ್ನು ಬೇಗನೆ ಔಟ್ ಮಾಡಿದರೆ, ಭಾರತದ ಬ್ಯಾಟಿಂಗ್ ಲೈನ್‌ಅಪ್ ಕುಸಿಯುತ್ತದೆ. ಅಭಿಷೇಕ್ ಎಲ್ಲ ಶಾಟ್‌ಗಳನ್ನು ಪರ್ಫೆಕ್ಟ್ ಆಗಿ ಆಡುತ್ತಾರೆ ಎಂದು ಏನು ಇಲ್ಲ. ಅವರಲ್ಲೂ ನ್ಯೂನತೆಗಳು ಇವೆ. ಅವುಗಳನ್ನು ಗುರುತಿಸಿಕೊಂಡು ಅವರಿಗೆ ಖೆಡ್ಡಾ ತೊಡಬೇಕಿದೆ ಎಂದಿದ್ದಾರೆ. ಇನ್ನು ಅಂಕಿ ಅಂಶಗಳಿಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳದೆ ಪ್ರಸ್ತುತವಾಗಿ ತಮ್ಮ ಫಾರ್ಮ್ ಬಗ್ಗೆ ಗಮನ ಹರಿಸಿ ಗೆಲುವು ಸಾಧಿಸಬೇಕಾಗುತ್ತದೆ ಎಂದು ಪಾಕ್ ಮಾಜಿ ಆಟಗಾರ ತಂಡಕ್ಕೆ ಕಿವಿ ಮಾತು ನೀಡಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ತಂಡಗಳು ಸೂಪರ್ 4 ಹಂತದಲ್ಲಿ ತಲಾ 2 ಪಂದ್ಯಗಳಲ್ಲಿ ಜಯ ಸಾಧಿಸಿ ಏಷ್ಯಾ ಕಪ್ ಟಿ20 ಟೂರ್ನಿಯ ಫೈನಲ್‌ಗೆ ಪ್ರವೇಶಿಸಿವೆ. ಸೆ.28 ರಂದು ಉಭಯ ತಂಡಗಳು ದುಬೈನಲ್ಲಿ ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ.