Vinod Kambli: ಸರಿಯಾಗಿ ನಿಲ್ಲಲು ಆಗದ ಸ್ಥಿತಿಯಲ್ಲಿ ವಿನೋದ್ ಕಾಂಬ್ಳೆ; ವಿಡಿಯೋ ವೈರಲ್
ಭಾರತದ ಮಾಜಿ ಆಟಗಾರ ವಿನೋದ್ ಕಾಂಬ್ಳೆ ಅವರ ವಿಡಿಯೋ ಒಂದು ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಒಮ್ಮೆ ನೋಡಿದರೆ ವಿನೋದ್ ಕಾಂಬ್ಳೆ ಅವರ ಇತ್ತೀಚಿನ ಸ್ಥಿತಿ ಹೇಗಿದೆ ಎಂಬುದು ತಿಳಿಯುತ್ತದೆ. ವರದಿಗಳ ಪ್ರಕಾರ ವಿನೋದ್ ಕಾಂಬ್ಳೆ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾರೆ.
52 ವರ್ಷದ ವಿನೋದ್ ಕಾಂಬ್ಳೆ ಆರೋಗ್ಯದಲ್ಲಿ ಏರಿಳಿತಗಳು ಕಂಡು ಬಂದಿದೆ. ತಮ್ಮ ಆರೋಗ್ಯದ ತಪಾಸಣೆ ವಿನೋದ್ ಕಾಂಬ್ಳೆ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು ಎಂದು ಹೇಳಲಾಗುತ್ತಿದೆ. ವಿನೋದ್ ಕಾಂಬ್ಳೆ ಅವರ ಈ ವಿಡಿಯೋ ನೋಡಿದ ಬಳಿಕ ಎಲ್ಲರೂ ಒಂದೊಂದು ರೀತಿಯ ವ್ಯಾಖ್ಯಾನವನ್ನು ನೀಡುತ್ತಿದ್ದಾರೆ.

ನಿಲ್ಲಲು ಆಗದ ಸ್ಥಿತಿ
ಈ ವಿಡಿಯೋದಲ್ಲಿ ವಿನೋದ್ ಕಾಂಬ್ಳೆ ಬೈಕ್ ಸಹಾಯದಿಂದ ನಿಲ್ಲಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಕೊಂಚ ಮುಂದೆ ಹೋದರೆ ವಿಡಿಯೋದಲ್ಲಿ ಕುಂಟುತ್ತಾ ವಿನೋದ್ ಮುಂದೆ ಬರುತ್ತಿರುವುದನ್ನು ಕಾಣಬಹುದು. ಅಲ್ಲದೆ ಸನ್ನೆ ಮಾಡಿ ತಮ್ಮ ಬಳಿ ಬರುವಂತೆ ವಿನೋದ್ ಸಹ ಕೇಳಿಕೊಂಡಿದ್ದಾರೆ. ಅಲ್ಲದೆ ಅಲ್ಲಿಯೇ ಇದ್ದ ಇಬ್ಬರು ಇವರ ಸಹಾಯಕ್ಕೆ ಬಂದಿರುವುದನ್ನು ನೋಡಬಹುದಾಗಿದೆ. ನಂತರ ಅವರ ಸಾರ್ವಜನಿಕರ ಸಹಾಯದಿಂದ ಮುಂದೆ ಹೋಗಿದ್ದಾರೆ.
ವಿಡಿಯೋ ಸಖತ್ ವೈರಲ್
ವಿನೋದ್ ಕಾಂಬ್ಳೆ ಅವರ ವಿಡಿಯೋ ಹಾಕುತ್ತಲೆ ಇದು ಸಖತ್ ವೈರಲ್ ಆಗಿದೆ. ಅಲ್ಲದೆ ಈ ವಿಡಿಯೋಕ್ಕೆ ಹಲವು ರೀತಿಯ ಕಮೆಂಟ್‌ಗಳನ್ನು ಜನ ಮಾಡಿದ್ದಾರೆ. ಕೆಲವರು ಕುಡಿದಿದ್ದಾರೆ ಎಂದು ಬರೆದರೆ, ಇನ್ನು ಹಲವು ಆರೋಗ್ಯದಲ್ಲಿ ಏರು ಪೇರು ಆಗಿದ್ದನ್ನು ಬರೆದಿದ್ದಾರೆ.
ವಿನೋದ್ ಕಾಂಬ್ಳೆ ಕಳೆದ ಕೆಲವು ತಿಂಗಳು ಗಳಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಅಲ್ಲದೆ ಕಳೆದ ಕೆಲವು ದಿನಗಳ ಹಿಂದೆ ಇವರಿಗೆ ಹೃದಾಯಾಘತ ಸಹ ಆಗಿತ್ತು. ಈ ವೇಳೆ ಮುಂಬೈ ಪೊಲೀಸ್ ಪೇದೆ ಒಬ್ಬರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಅವರ ಜೀವ ಉಳಿಸಿದ್ದರು.
ಸಚಿನ್ ಬಾಲ್ಯ ಸ್ನೇಹಿತ
ವಿನೋದ್ ಕಾಂಬ್ಳೆ ಹಾಗೂ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಇಬ್ಬರೂ ಬಾಲ್ಯ ಸ್ನೇಹಿತರು. ಇಬ್ಬರೂ ಒಟ್ಟಿಗೆ ಕ್ರಿಕೆಟ್ ಆಡಲು ಆರಂಭಿಸಿದ್ದಾರೆ. ಅಲ್ಲದೆ ಶಾರದಾ ಶಾಲೆಯ ಪರ ಆಡುವಾಗ ದಾಖಲೆಯ ರನ್‌ಗಳನ್ನು ಕಲೆ ಹಾಕಿ ಇಬ್ಬರು ಸುದ್ದಿಯಾಗಿದ್ದರು. ವಿನೋದ್ ಕಾಂಬ್ಳೆ ಸಹ ಭಾರತದ ಪರ ಆಡಿ ಸೈ ಎನಿಸಿಕೊಂಡಿದ್ದಾರೆ.
ಕಾಂಬ್ಳೆ ವೃತ್ತಿ ಬದುಕು
ವಿನೋದ್ ಕಾಂಬ್ಳೆ ಭಾರತದ ಪರ 17 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ 4 ಶತಕ, 3 ಅರ್ಧಶತಕ ಸೇರಿದಂತೆ 1084 ರನ್ ಸಿಡಿಸಿದ್ದಾರೆ. ಇನ್ನು 104 ಏಕದಿನ ಪಂದ್ಯಗಳಲ್ಲಿ ಮೈದಾನ ಪ್ರವೇಶಿಸಿರುವ ಇವರು 2477 ರನ್ ಬಾರಿಸಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ 14 ಅರ್ಧಶತಕಗಳು ಸೇರಿವೆ. ಇನ್ನು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವಿನೋದ್ ಕಾಂಬ್ಳೆ 9965 ರನ್ ದಾಖಲಿಸಿದ್ದಾರೆ. ಇದರಲ್ಲಿ 35 ಶತಕ ಹಾಗೂ 44 ಅರ್ಧಶತಕಗಳು ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications