For Quick Alerts
ALLOW NOTIFICATIONS  
For Daily Alerts
 

ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾ ಪರ ಹೆಚ್ಚು ಕಾಲ ಆಡ್ಬೇಕಂದ್ರೆ, IPLನಲ್ಲಿ ಆಡೋದನ್ನ ಬಿಡ್ಬೇಕು!

Jasprit bumrah

ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಸೆಂಚುರಿಯನ್ ಅಂಗಳದಲ್ಲಿ ಐತಿಹಾಸಿಕ ಗೆಲುವನ್ನ ಸಾಧಿಸಿತು. ಸೂಪರ್‌ಸ್ಪೋರ್ಟ್‌ ಪಾರ್ಕ್‌ನ ಅಂಗಳದಲ್ಲಿ ಮೊಟ್ಟಮೊದಲ ಟೆಸ್ಟ್ ಪಂದ್ಯವನ್ನ ಭಾರತ ಜಯಿಸಿ ಇತಿಹಾಸ ಸೃಷ್ಟಿಸಿತು. ಭಾರತದ ಈ ಗೆಲುವಿನ ಮೂಲಕ ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಕೋಟೆ ಬೇದಿಸಿತು.

ಸೆಂಚುರಿಯನ್ ಅಷ್ಟೇ ಅಲ್ಲದೆ ಇದೇ ವರ್ಷದಲ್ಲಿ ಆಸೀಸ್‌ನ ಗಬ್ಬಾದಲ್ಲಿ ಕಳೆದ 32 ವರ್ಷಗಳಲ್ಲಿ ಯಾರೂ ಸೋಲಿಸದ ಕಾಂಗರೂಗಳನ್ನ ಟೀಂ ಇಂಡಿಯಾ ಸೋಲಿಸಿತು. ಇದಾದ ಬಳಿಕ ಇಂಗ್ಲೆಂಡ್‌ನ ಲಾರ್ಡ್ಸ್‌ನಲ್ಲಿ ಗೆಲುವು ಸಾಧಿಸಿತು.

ಕೇವಲ ಗಬ್ಬಾದಲ್ಲಿ ಐತಿಹಾಸಿಕ ಗೆಲುವಷ್ಟೇ ಅಲ್ಲದೆ, ಇಂಗ್ಲೆಂಡ್‌ನ ಓವಲ್‌ನಲ್ಲಿ 50 ವರ್ಷಗಳ ನಂತರ ಭಾರತವು ಪಂದ್ಯವನ್ನ ಗೆದ್ದು ಬೀಗಿ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ ತಲುಪಿತು. ಇದಾದ ಬಳಿಕ ಸೆಂಚುರಿಯನ್ ಅಂಗಳದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನ ಮೊಟ್ಟ ಮೊದಲ ಬಾರಿಗೆ ಸೋಲಿಸುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-0 ಮುನ್ನಡೆ ಸಾಧಿಸಿದೆ.

ಪಂದ್ಯದ ಆರನೇ ಓವರ್‌ನಲ್ಲಿ ಗಾಯಗೊಂಡಿದ್ದ ಜಸ್ಪ್ರೀತ್ ಬುಮ್ರಾ

ಪಂದ್ಯದ ಆರನೇ ಓವರ್‌ನಲ್ಲಿ ಗಾಯಗೊಂಡಿದ್ದ ಜಸ್ಪ್ರೀತ್ ಬುಮ್ರಾ

ಟೀಂ ಇಂಡಿಯಾ ಪ್ರಮುಖ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ತನ್ನ ಸ್ಪೆಲ್‌ನ ಆರನೇ ಓವರ್‌ನ ಐದನೇ ಎಸೆತದಲ್ಲಿ ಆಯಂಕಲ್‌ ಟ್ವಿಸ್ಟ್ ಆಗುವ ಮೂಲಕ ಮೈದಾನದಿಂದ ಹೊರನಡೆದ್ರು. ಈ ಸಮಯದಲ್ಲಿ ಇಡೀ ಟೀಮ ಇಂಡಿಯಾ ಅಭಿಮಾನಿಗಳು ಗಾಬರಿಗೊಂಡ್ರು. ಭಾರತದ ಪ್ರಮುಖ ಟ್ರಂಪ್‌ಕಾರ್ಡ್ ಬೌಲರ್ ಹೊರನಡೆದಾಗ ನಾಯಕ ಕೊಹ್ಲಿಗೂ ತಲೆಬಿಸಿಯಾಯ್ತು. ಏಕೆಂದರೆ ಜಸ್ಪ್ರೀತ್ ಬುಮ್ರಾ ಮೇಲೆ ಟೀಮ್ ಇಂಡಿಯಾದ ಬೌಲಿಂಗ್ ಬಳಗದ ಅವಲಂಬನೆ ಅಷ್ಟು ದೊಡ್ಡ ಮಟ್ಟಿಗೆ ಬೆಳೆದಿದೆ.

ಮೂರು ಫಾರ್ಮೆಟ್‌ನಲ್ಲಿ ಭಾರತದ ಬೌಲಿಂಗ್ ಬಲ ಬುಮ್ರಾ

ಮೂರು ಫಾರ್ಮೆಟ್‌ನಲ್ಲಿ ಭಾರತದ ಬೌಲಿಂಗ್ ಬಲ ಬುಮ್ರಾ

ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾಕ್ಕೆ ಯಾವುದಾದ್ರೂ ಲಿಮಿಟೆಡ್ ಫಾರ್ಮೆಟ್‌ನಲ್ಲಿ ಮಾತ್ರ ಸೀಮಿತಗೊಂಡಿಲ್ಲ. ಮೂರು ಫಾರ್ಮೆಟ್‌ನಲ್ಲಿ ಭಾರತದ ಬೌಲಿಂಗ್ ಪಡೆಯನ್ನ ಮುನ್ನಡೆಸಲಿದ್ದಾರೆ. ವಿಕೆಟ್ ಬೇಕಾದ ಸಂದರ್ಭದಲ್ಲಿ ನಾಯಕನ ಮೊದಲ ಆಯ್ಕೆ ಆಗಿ ಜಸ್ಪ್ರೀತ್ ಬುಮ್ರಾ ಕಣಕ್ಕಿಳಿಯುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕ್ರಿಕೆಟ್ ಆಡುವ ಕಾಣರದಿಂದಾಗಿ ಬುಮ್ರಾ ಒಂದಲ್ಲಾ ಒಂದು ಕಾರಣಗಳಿಂದಾಗಿ ಗಾಯಗಳಿಗೆ ಗುರಿಯಾಗುತ್ತಿದ್ದಾರೆ.

ಭಾರತದ ಪರ ಟೆಸ್ಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಾಗಿ ವರ್ಷ ಅಂತ್ಯಗೊಳಿಸಿದ ಅಶ್ವಿನ್, ರೋಹಿತ್

ವಿಭಿನ್ನ ಬೌಲಿಂಗ್ ಶೈಲಿ ಹೊಂದಿರುವ ಬೌಲರ್

ವಿಭಿನ್ನ ಬೌಲಿಂಗ್ ಶೈಲಿ ಹೊಂದಿರುವ ಬೌಲರ್

ಪ್ರತಿ ವರ್ಷ ಆಡಲಾಗುವ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನ ಐದು ಬಾರಿಯ ಚಾಂಪಿಯನ್ ಆಗಿ ಮಾಡಲು ಜಸ್ಪ್ರೀತ್ ಬುಮ್ರಾ ಪಾತ್ರ ನಿರ್ಣಾಯಕವಾಗಿದೆ. ನಿಯಮಿತವಾಗಿ ನಾಲ್ಕು ಓವರ್‌ಗಳಷ್ಟೇ ಬೌಲಿಂಗ್ ಮಾಡಿದ್ರೂ ಸಹ ಅವರ ಬೌಲಿಂಗ್ ಕ್ರಿಯೆಯು ವಿಶಿಷ್ಟ ಮತ್ತು ವಿಭಿನ್ನವಾಗಿದೆ. ಹೀಗಾಗಿ ಇದು ಅವರ ಬೆನ್ನಿನ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ.

ಜಸ್ಪ್ರೀತ್ ಬುಮ್ರಾ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ

ಜಸ್ಪ್ರೀತ್ ಬುಮ್ರಾ ಮೇಲೆ ಕಣ್ಣಿಟ್ಟಿರುವ ಬಿಸಿಸಿಐ

ರಾಷ್ಟ್ರೀಯ ತಂಡದ ಆಡಳಿತ ಮಂಡಳಿಯು ಈಗಾಗಲೇ ಅವರನ್ನು ಬಹಳ ಎಚ್ಚರಿಕೆಯಿಂದ ಬಳಸುತ್ತಿದೆ ಮತ್ತು ಬುಮ್ರಾ ನಿಧಾನವಾಗಿ ಟೆಸ್ಟ್ ಪಂದ್ಯಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ವಿದೇಶಿ ಪಿಚ್‌ಗಳ ಸ್ಪೆಷಲಿಸ್ಟ್ ಆಗುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ತವರಿನಲ್ಲಿ ಕಡಿಮೆ ಟೆಸ್ಟ್ ಪಂದ್ಯಗಳನ್ನ ಆಡಿದ್ದಾರೆ. ಇವರು ತಮ್ಮ ವೃತ್ತಿಜೀವನದ 25 ನೇ ಟೆಸ್ಟ್ ಆಡುತ್ತಿದ್ದಾರೆ ಮತ್ತು ಕೇವಲ ಎರಡು ಪಂದ್ಯಗಳನ್ನು ಮಾತ್ರ ತವರಿನಲ್ಲಿ ಆಡಿದ್ದಾರೆ ಅನ್ನೋದು ವಿಶೇಷ.

ಹೋಟೆಲ್ ಸಿಬ್ಬಂದಿಗಳೊಂದಿಗೆ ಕುಣಿದು ಗೆಲುವನ್ನು ಸಂಭ್ರಮಿಸಿದ ಕೊಹ್ಲಿ, ಪೂಜಾರ, ಮಯಾಂಕ್: ವಿಡಿಯೋ

ಏಕದಿನ, ಟಿ20 ಕ್ರಿಕೆಟ್‌ನಲ್ಲೂ ಬುಮ್ರಾ ಮ್ಯಾಜಿಕ್

ಏಕದಿನ, ಟಿ20 ಕ್ರಿಕೆಟ್‌ನಲ್ಲೂ ಬುಮ್ರಾ ಮ್ಯಾಜಿಕ್

ಅವರು ಕೊನೆಯ ಬಾರಿಗೆ ಜನವರಿ 2020 ರಲ್ಲಿ ಭಾರತದಲ್ಲಿ ವೈಟ್-ಬಾಲ್ ಆಟವನ್ನು ಆಡಿದರು ಮತ್ತು 2019 ರ ವಿಶ್ವಕಪ್‌ನ ನಂತರ ಭಾರತಕ್ಕಾಗಿ ತವರಿನಲ್ಲಿ ಮೂರು ಏಕದಿನ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ಸ್ಪಷ್ಟವಾಗಿ, ಭಾರತದ ಕ್ರಿಕೆಟ್ ಮಂಡಳಿ ಅವರನ್ನು ಫಿಟ್ ಆಗಿ ಇರಿಸಿಕೊಳ್ಳಲು ಸ್ವದೇಶಿ ಪಂದ್ಯಗಳಲ್ಲಿ ಅವರಿಗೆ ವಿಶ್ರಾಂತಿ ನೀಡಿ ಅಂತರರಾಷ್ಟ್ರೀಯ ಪಂದ್ಯಗಳಿಂದ ಅವರಿಗೆ ಸಾಕಷ್ಟು ವಿಶ್ರಾಂತಿ ನೀಡುತ್ತಿದೆ.

ಸತತ ಐಪಿಎಲ್ ಸೀಸನ್‌ ಆಡಿರುವ ಬುಮ್ರಾ

ಸತತ ಐಪಿಎಲ್ ಸೀಸನ್‌ ಆಡಿರುವ ಬುಮ್ರಾ

ಅದೇ ಸಮಯದಲ್ಲಿ, ಬುಮ್ರಾ ಐಪಿಎಲ್‌ನ ಪ್ರತಿಯೊಂದು ಪಂದ್ಯದಲ್ಲೂ ಕಾಣಿಸಿಕೊಂಡಿದ್ದಾರೆ. ಜನವರಿ 2016 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ, ಅವರು IPL 2016 ರಿಂದ 2021 ರವರೆಗಿನ ಸೀಸನ್‌ಗಳಲ್ಲಿ ಕ್ರಮವಾಗಿ 14, 16, 14, 16, 15, 14 ಪಂದ್ಯಗಳನ್ನು ಆಡಿದ್ದಾರೆ. ಟಿ20 ಪಂದ್ಯಾವಳಿಯಲ್ಲಿನ ಸ್ಪರ್ಧೆ ಮತ್ತು ಈ ದಿನಗಳಲ್ಲಿ ಆಡಿದ ಕ್ರಿಕೆಟ್ ಮೊತ್ತವನ್ನು ನೋಡಿದ್ರೆ, ಅಂತರಾಷ್ಟ್ರೀಯ ಪಂದ್ಯಗಳಿಗಿಂತ ಹೆಚ್ಚಾಗಿದೆ.

ಐಪಿಎಲ್ V/S ಅಂತರಾಷ್ಟ್ರೀಯ ಕ್ರಿಕೆಟ್

ಐಪಿಎಲ್ V/S ಅಂತರಾಷ್ಟ್ರೀಯ ಕ್ರಿಕೆಟ್

ಪ್ರತಿ ವರ್ಷ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಭಾಗವಾಗಿರುವ ಜಸ್ಪ್ರೀತ್ ಬುಮ್ರಾ ಹೆಚ್ಚಿನ ಮಟ್ಟಿನ ಕ್ರಿಕೆಟ್ ಆಡುತ್ತಾ ಬಂದಿದ್ದಾರೆ. ಆದ್ರೆ ಅಂತರಾಷ್ಟ್ರೀಯ ಕ್ರಿಕೆಟ್ ಜೊತೆಗೆ ಐಪಿಎಲ್‌ ಅನ್ನು ಸಂಬಾಳಿಸಲು ಅಷ್ಟು ಸುಲಭದ ಮಾತಾಗಿಲ್ಲ. ಫಿಟ್‌ನೆಸ್ ವಿಚಾರದಲ್ಲಿ ಚುಟುಕು ಕ್ರಿಕೆಟ್‌ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್‌ ಟೂರ್ನಮೆಂಟ್ ನಲ್ಲಿ ಭಾಗಿಯಾಗುವುದು ದೊಡ್ಡ ಸವಾಲಾಗಿದೆ. ಹೀಗಾಗಿ ಜಸ್ಪ್ರೀತ್ ಬುಮ್ರಾ ಹೆಚ್ಚಿನ ಕಾಲ ಟೀಂ ಇಂಡಿಯಾ ಪರ ಆಡಬೇಕು, ಹೆಚ್ಚು ಗಾಯಾಳುವಾಗಿ ಫಿಟ್ನೆಸ್‌ ಕಳೆದುಕೊಳ್ಳಬಾರದು ಎಂದಾದ್ರೆ ಐಪಿಎಲ್‌ನಿಂದ ಹೊರಗುಳಿಯಬೇಕು ಎಂಬುದು ಕ್ರಿಕೆಟ್ ಪಂಡಿತರ ಚರ್ಚೆಯಾಗಿದೆ.

ರಾಷ್ಟ್ರೀ ಕ್ರಿಕೆಟ್ ಆಡಳಿತ ಮಂಡಳಿ ಕೂಡ ಟೀಂ ಇಂಡಿಯಾದ ಸೂಪರ್‌ಸ್ಟಾರ್ ಜಸ್ಪ್ರೀತ್ ಬುಮ್ರಾಗೆ ಹೆಚ್ಚಿನ ವಿಶ್ರಾಂತಿ ನೀಡಿ ಪ್ರಮುಖ ಟೂರ್ನಿಗಳಲ್ಲಿ, ವಿದೇಶಿ ಟೂರ್ನಿಗಳಲ್ಲಿ ಅವಕಾಶ ಹೆಚ್ಚಿಸಬೇಕಿದೆ.

Story first published: Friday, December 31, 2021, 18:08 [IST]
Other articles published on Dec 31, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+