ಶಿಸ್ತಿನಿಂದ ಕ್ರೀಡೆಯತ್ತ ಗಮನ ನೀಡು: ಪಾಕ್ ಕ್ರಿಕೆಟಿಗನಿಗೆ ಮಿಸ್ಬಾ ಎಚ್ಚರಿಕೆಯ ಪಾಠ

ಪಾಕಿಸ್ತಾನ ಕ್ರಿಕೆಟ್ ತಂಡ ಸಾಕಷ್ಟು ಪ್ರತಿಭಾವಂತ ಯುವ ಆಟಗಾರರನ್ನು ಹೊಂದಿರುವ ಕ್ರಿಕೆಟ್ ತಂಡ ಎಂಬುದರಲ್ಲಿ ಅನುಮಾನವಿಲ್ಲ. ಹಾಗಿದ್ದರೂ ಪಾಕಿಸ್ತಾನ ಕ್ರಿಕೆಟ್ ತಂಡ ವಿಶ್ವ ಕ್ರಿಕ್ರೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ ಎಂಬುದು ಪಾಕಿಸ್ತಾನ ಮಾಜಿ ಕ್ರಿಕೆಟಿಗರ ಆರೋಪವಾಗಿದೆ. ಪಾಕಿಸ್ತಾನ ಕ್ರಕೆಟಿಗರಲ್ಲಿನ ಅಶಿಸ್ತಿನ ಸ್ವಭಾವವೇ ಈ ಪರಿಸ್ಥಿತಿಗೆ ಕಾರಣ.
ಇದೇ ಕಾರಣಕ್ಕೆ ಪಾಕಿಸ್ತಾನ ಕ್ರಿಕೆಟ್‌ನ ಪ್ರತಿಭಾವಂತ ಕ್ರಿಕೆಟಿಗನೋರ್ವ ಅಮಾನತು ಶಿಕ್ಷೆಗೆ ಒಳಗಾಗಿದ್ದಾರೆ. 29ವರ್ಷದ ಉಮರ್ ಅಕ್ಮಲ್ ತನಗೆ ಬಂದ ಮ್ಯಾಚ್ ಫಿಕ್ಸಿಂಗ್ ವಿಚಾರವನ್ನು ಮಂಡಳಿಗೆ ವರದಿ ಮಾಡಿಲ್ಲ ಎಂಬ ಕಾರಣಕ್ಕೆ ಅಮಾನತು ಶಿಕ್ಷೆಗೆ ಒಳಪಡಿಸಲಾಗಿದೆ.
ಈ ಬಗ್ಗೆ ಮಾಕಿಸ್ತಾನ ಕ್ರಿಕೆಟ್‌ನ ಕೋಚ್ ಮಿಸ್ಬಾ ಉಲ್ ಹಕ್ ಹೇಳಿಕೆಯನ್ನು ನೀಡಿದ್ದಾರೆ. ಮುಂದೆ ಓದಿ

ಉಮರ್ ಅಕ್ಮಲ್ ಬಗ್ಗೆ ಕೋಚ್ ಅಸಮಾಧಾನ
ಪಾಕಿಸ್ತಾನ ಕ್ರಿಕೆಟ್‌ನ ಪ್ರತಿಭಾವಂತ ಬ್ಯಾಟ್ಸ್‌ಮನ್‌ನನ್ನು ಹೇಗಾದರೂ ಸರಿದಾರಿಗೆ ತರುವ ಪ್ರಯತ್ನವನ್ನು ಪಾಕ್ ನಡೆಸುತ್ತಿದೆ .ಉಮರ್ ಅಕ್ಮಲ್ ತಮ್ಮನ್ನು ತಾವು ಶಿಸ್ತುಬದ್ಧಗೊಳಿಸಿಕೊಳ್ಳಬೇಕು ಮತ್ತು ಅವರ ಹಳಿ ತಪ್ಪಿದ ವೃತ್ತಿಜೀವನವನ್ನು ಪುನರುಜ್ಜೀವನಗೊಳಿಸಲು ಬಯಸಿದರೆ ತಮ್ಮ ಕ್ರಿಕೆಟ್‌ನತ್ತ ಗಮನ ಹರಿಸಬೇಕೆಂದು ಪಾಕಿಸ್ತಾನದ ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಮಂಗಳವಾರ ಒತ್ತಾಯಿಸಿದ್ದಾರೆ.

ಉಮರ್ ತನ್ನ ಭವಿಷ್ಯ ನಿರ್ಧರಿಸಬೇಕು
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯಡಿ ಆತನ ಮೇಲೆ ಆರೋಪ ಹೊರಿಸಲಾಗಿತ್ತು. ಇದಕ್ಕೆ ಉತ್ತರಿಸಲು ಅವರ 14 ದಿನಗಳ ಗಡುವು ಮಂಗಳವಾರ ಕೊನೆಗೊಳ್ಳುತ್ತದೆ. ಮುಖ್ಯ ಕೋಚ್ ಮಿಸ್ಬಾ ಮಾತನಾಡಿ, ಉಮರ್ ತನ್ನ ಭವಿಷ್ಯವನ್ನು ಸ್ವತಃ ಅವರೇ ನಿರ್ಧರಿಸಬೇಕಾಗುತ್ತದೆ. ನೀವು ಮತ್ತು ನಾನು ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಮಿಸ್ಬಾ ಮಾಧ್ಯಮಗಳಿಗೆ ತಿಳಿಸಿದರು, "ಒಮರ್ ಸ್ವತಃ ನಿರ್ಧರಿಸಬೇಕು, ಶಿಸ್ತು ತೋರಿಸಬೇಕು ಮತ್ತು ಅವರ ಕ್ರಿಕೆಟ್ ಬಗ್ಗೆ ಗಮನಹರಿಸಬೇಕು.

ಮಿಸ್ಬಾ ಪ್ರಕಾರ ಉಮರ್ ಮಾಡಬೇಕಾಗಿರುವುದು
"ತಾನು ಯಾವ ರೀತಿ ಭವಿಷ್ಉದಲ್ಲಿ ಮುಂದುವರಿಯಬೇಕು ಎಂದು ಸ್ವತಃ ಉಮರ್ ಅಕ್ಮಲ್ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಫಿಟ್ನೆಸ್, ಆಟದಲ್ಲಿ ಶಿಸ್ತು ಮತ್ತು ಬದ್ಧತೆಯಲ್ಲಿ ದೊಡ್ಡ ಸುಧಾರಣೆಯನ್ನು ಕಂಡುಕೊಳ್ಳಬೇಕಿದೆ ಎಂದು ಮಿಸ್ಬಾ ಉಲ್ ಹಕ್ ಹೇಳಿಕೊಂಡಿದ್ದಾರೆ.

ಆರಂಭದಲ್ಲಿ ಅಬ್ಬರಿಸಿದ್ದ ಅಕ್ಮಲ್
ಉಮರ್ ತಮ್ಮ ವೃತ್ತಿಜೀವನವನ್ನು ಅಬ್ಬರದಿಂದಲೇ ಪ್ರಾರಂಭಿಸಿದರು. 2009 ರಲ್ಲಿ ನ್ಯೂಜಿಲೆಂಡ್‌ಗೆ ಪದಾರ್ಪಣೆ ಮಾಡುವಾಗ ಶತಕ ಗಳಿಸಿ ಮಿಂಚಿದ್ದರು. ಆದರೆ ನಿರಂತರ ಅಶಿಸ್ತಿನ ವರ್ತನೆ ಆತನ ಕ್ರಿಕೆಟ್ ಬದುಕಿನಲ್ಲಿ ವ್ಯತಿರಿಕ್ತ ಪರಿಣಾಮ ಬೀರಲು ಪ್ರಾರಂಭಿಸಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications