Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಡೈವ್ ಮಾಡಿ ಸೂಪರ್ ಕ್ಯಾಚ್ ಪಡೆದ ಕನ್ನಡತಿ ಶ್ರೇಯಾಂಕಾ ಪಾಟೀಲ್‌: ಫ್ಯಾನ್ಸ್‌ ಫಿದಾ

ಬರ್ಮಿಂಗ್‌ಹ್ಯಾಮ್‌: ಮಹಿಳಾ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ 64 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ ಅಬ್ಬರಿಸಿತು. ಈ ಮೂಲಕ ಹರ್ಮನ್‌ಪ್ರೀತ್ ಕೌರ್ ಪಡೆ ಟಿ20 ವಿಶ್ವಕಪ್‌ ಅಭಿಯಾನವನ್ನು ಗೆಲುವಿನೊಂದಿಗೆ ಆರಂಭಿಸಿದೆ. ಈ ಪಂದ್ಯದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಅದ್ಭುತ ಕ್ಯಾಚ್‌ ಹಿಡಿದು ಮಿಂಚಿದ್ದಾರೆ. ಇವರು ಹಿಡಿದಿರುವ ಕ್ಯಾಚ್‌ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (68 ರನ್) ಅರ್ಧಶತಕ ಬಾರಿಸಿದರು. ಕೊನೆಯ ಓವರ್‌ಗಳಲ್ಲಿ ರಿಚಾ ಘೋಷ್‌ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಅಂತಿಮವಾಗಿ ಭಾರತ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 170 ರನ್‌ ಸೇರಿಸಿತು. ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡದ ಪರ ಮುನೀಬಾ ಅಲಿ (41) ಅವರನ್ನು ಹೊರತು ಪಡಿಸಿದರೆ ಬೇರೆಯಾವೊಬ್ಬ ಬ್ಯಾಟರ್ ಸ್ಥಿರ ಪ್ರದರ್ಶನ ನೀಡಲಿಲ್ಲ. ದೀಪ್ತಿ ಶರ್ಮಾ 5 ವಿಕೆಟ್‌ ಪಡೆದು ಅಬ್ಬರಿಸಿದರು. ಪಾಕ್‌ 17 ಓವರ್‌ಗಳಲ್ಲಿ 106 ರನ್‌ಗಳಿಗೆ ಆಲೌಟ್ ಆಯಿತು.

Shreyanka Patil

ಈ ಪಂದ್ಯದಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್‌ ಸಹ ಆಡುವ ಅವಕಾಶವನ್ನು ಪಡೆದರು. ಇವರಿಗೆ ವಿಕೆಟ್‌ಗಳು ಸಿಗಲಿಲ್ಲ. ಆದರೆ ಇವರು ಶ್ರೀ ಚರಣಿ ಅವರ ಎಸೆತದಲ್ಲಿ ಹಿಡಿದ ಕ್ಯಾಚ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಏನ್‌ ಕ್ಯಾಚ್‌ ಶ್ರೇಯಾಂಕಾ

ಇನಿಂಗ್ಸ್‌ನ 15ನೇ ಓವರ್‌ ಬೌಲಿಂಗ್‌ ಮಾಡಲು ಶ್ರೀ ಚರಣಿ ಮುಂದಾದರು. ಓವರ್‌ನ ನಾಲ್ಕನೇ ಎಸೆತವನ್ನು ಶ್ರೀ ಚರಣಿ ನಿಧಾನವಾಗಿ ಮಾಡಿದರು. ಇದನ್ನು ರಮೀನ್ ಶಮೀಮ್ ಕವರ್ಸ್‌ ಮೇಲಿನಿಂದ ದೊಡ್ಡ ಹೊಡೆತಕ್ಕೆ ಮುಂದಾದರು. ಆದರೆ ಪಾಯಿಂಟ್‌ ಕ್ಷೇತ್ರದ ಪಕ್ಕದಲ್ಲಿ ಫೀಲ್ಡ್ ಮಾಡುತ್ತಿದ್ದ ಶ್ರೇಯಾಂಕಾ ಪಾಟೀಲ್‌ ತಮ್ಮ ಬಲಗಡೆಗೆ ಡೈವ್ ಮಾಡಿ ಅಮೋಘ ಕ್ಯಾಚ್ ಪಡೆದರು. ಈ ಕ್ಯಾಚ್ ಕಂಡು ಫ್ಯಾನ್ಸ್ ಫುಲ್ ಫಿದಾ ಆದರು.

ಶ್ರೇಯಾಂಕಾ ಪಾಟೀಲ್ ಪಾಕಿಸ್ತಾನ್ ವಿರುದ್ಧ ಸ್ಥಿರ ಬೌಲಿಂಗ್ ಪ್ರದರ್ಶನ ನೀಡಿದರೂ ಸಹ ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಇವರ ಬೌಲಿಂಗ್‌ನಲ್ಲಿ ಕೆಲವು ಕ್ಯಾಚ್‌ಗಳು ಕೈ ಚೆಲ್ಲಿದವು. ಆದರೆ ಶ್ರೇಯಾಂಕಾ ಶ್ರೀ ಚರಣಿಯ ಬೌಲಿಂಗ್‌ನಲ್ಲಿ ಕ್ಲಾಸ್‌ ಕ್ಯಾಚ್‌ ಹಿಡಿದು ಬೇರೆಯವರಿಗೆ ಮಾದರಿಯಾದರು.

Story first published: Monday, June 15, 2026, 0:21 [IST]
Other articles published on Jun 15, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+