ಶ್ರೇಯಸ್ ಐಯ್ಯರ್ ಜೊತೆ ಹೆಜ್ಜೆ ಹಾಕಿದ ಚಾಹಲ್ ಪತ್ನಿ ಧನಶ್ರೀ: ವಿಡಿಯೋ

ನವದೆಹಲಿ: ಟೀಮ್ ಇಂಡಿಯಾದ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಅವರ ಪತ್ನಿ ಧನಶ್ರೀ ವರ್ಮಾ ಜೊತೆ ಭಾರತದ ಯುವ ಬ್ಯಾಟ್ಸ್‌ಮನ್, ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ಇತ್ತೀಚೆಗೆ ಯುಜುವೇಂದ್ರ ಚಾಹಲ್ ವರಿಸಿರುವ ಧನಶ್ರೀ ವರ್ಮಾ ಪ್ರತಿಭಾನ್ವಿತ ನೃತ್ಯಗಾರ್ತಿ. ಅವರ ಡಾನ್ಸ್ ವಿಡಿಯೋಗಳು ಯೂಟ್ಯೂಬ್, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿವೆ. ಧನಶ್ರೀ ಜೊತೆ ಹೆಜ್ಜೆ ಹಾಕಿರುವ ವಿಡಿಯೋವನ್ನು ಶ್ರೇಯಸ್ ತನ್ನ ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿದ್ದಾರೆ.
ಜಿಮ್ ನಲ್ಲಿ ಧನಶ್ರೀ ಜೊತೆಗೆ ಡ್ಯಾನ್ಸ್ ಮಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿಕೊಂಡಿರುವ ಶ್ರೇಯಸ್ 'ಥಿಂಕಿಂಗ್ ಆನ್ ಅವರ್ ಫೀಟ್' (ನಮ್ಮ ಕಾಲಿನ ಮೇಲೆ ನಾವು ಯೋಚಿಸುತ್ತಿದ್ದೇವೆ) ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಭಾರತದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ 'ಟು ಕೂಲ್ ಬ್ರೋ' ಎಂದು ಕಾಮೆಂಟ್ ಮಾಡಿದ್ದಾರೆ.
ಸದ್ಯ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ನಡೆಯುತ್ತಿದ್ದು, ಟೆಸ್ಟ್ ಸರಣಿಯಲ್ಲಿ ಚಾಹಲ್, ಶ್ರೇಯಸ್ ಮತ್ತು ಹಾರ್ದಿಕ್ ಪಾಂಡ್ಯ ಆಡುತ್ತಿಲ್ಲ. ಆದ್ರೆ ಮುಂಬರಲಿರುವ ಲಿಮಿಟೆಡ್ ಓವರ್ ಗಳ ಸರಣಿಯಲ್ಲಿ ಮೂವರು ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಭುಜದ ಗಾಯಕ್ಕೀಡಾಗಿದ್ದ ಶ್ರೇಯಸ್ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಹೊರ ಬಿದ್ದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications