Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೇಯಸ್ ಅಯ್ಯರ್‌ ಮುಂದಿದೆ ಬೃಹತ್ ಸವಾಲು: ಸಾಬಾ ಕರೀಂ

Shreyas iyer

ಟೀಂ ಇಂಡಿಯಾದ ಯುವ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಬಗ್ಗೆ ಟೀಂ ಇಂಡಿಯಾ ಆಟಗಾರರ ಮಾಜಿ ಮುಖ್ಯ ಆಯ್ಕೆಗಾರ ಸಾಬಾ ಕರೀಂ ಕೆಲವು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಇತ್ತೀಚೆಗಷ್ಟೇ ನಡೆದ ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಹ್ಯಾಟ್ರಿಕ್ ಅರ್ಧ ಶತಕ ಸಿಡಿಸಿದ ಯಶಸ್ಸನ್ನು ಶ್ಲಾಘಿಸಿದ ಕರೀಂ, ನಿಜವಾದ ಸವಾಲು ನಿಮ್ಮ ಮುಂದಿದೆ ಎಂದು ಅಯ್ಯರ್‌ಗೆ ಎಚ್ಚರಿಸಿದ್ದಾರೆ.

ದುರ್ಬಲ ಬೌಲಿಂಗ್ ಲೈನ್‌ಅಪ್‌ನೊಂದಿಗೆ ಶ್ರೀಲಂಕಾ ವಿರುದ್ಧ ಆಡುವುದು ಸುಲಭ ಎಂದು ಶ್ರೇಯಸ್ ಹೇಳಿದರು, ಆದರೆ ನಿಜವಾದ ಕಠಿಣ ತಂಡವನ್ನು ಎದುರಿಸಿದಾಗಲೂ ಅಭಿವೃದ್ಧಿ ಹೊಂದಬಹುದು ಎಂದಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ T20 ಸರಣಿಯನ್ನು ಭಾರತ ಗೆಲ್ಲುವಲ್ಲಿ ಶ್ರೇಯಸ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ವಿಚಾರವಾಗಿ ಶ್ರೇಯಸ್ ಅಯ್ಯರ್ ಪ್ರದರ್ಶನವನ್ನ ಸಾಬಾ ಕರೀಂ ಶ್ಲಾಘಿಸಿದ್ದಾರೆ.

'ಶ್ರೇಯಸ್ ಅಯ್ಯರ್ ತಮ್ಮ ಆಟವನ್ನು ಸುಧಾರಿಸಲು ಮರಳಿದ್ದಾರೆ. ಅವರ ಆಟವನ್ನು ಒಮ್ಮೆ ನೋಡಿದರೆ ಈ ವಿಷಯ ಅರ್ಥವಾಗುತ್ತದೆ. ಈಗ ನಾವೆಲ್ಲರೂ ಸೂರ್ಯಕುಮಾರ್ ಯಾದವ್ ಅವರನ್ನು 360 ಡಿಗ್ರಿ ಆಟಗಾರ ಎಂದು ಕರೆಯುತ್ತೇವೆ. ಆದರೆ, ಶ್ರೀಲಂಕಾ ವಿರುದ್ಧದ ಪಂದ್ಯಗಳನ್ನು ವೀಕ್ಷಿಸುವಾಗ ಶ್ರೇಯಸ್ ಅಯ್ಯರ್‌ನಲ್ಲಿ ಕಾಣಿಸಿಕೊಂಡರು. ಎಲ್ಲಿಂದಲಾದರೂ ರನ್ ಗಳಿಸಬಹುದು ಎಂದು ಅಯ್ಯರ್ ತೋರಿಸಿಕೊಟ್ಟರು. ನಿಜವಾದ ಸವಾಲು ಯಾವಾಗಲೂ, ಗುಣಮಟ್ಟದ ಬೌಲಿಂಗ್ ದಾಳಿಯನ್ನು ಎದುರಿಸಿದಾಗ ರನ್ ಮಾಡುವಾಗ ಗೊತ್ತಾಗುತ್ತದೆ. ಶ್ರೀಲಂಕಾ ಈಗ ದುರ್ಬಲ ತಂಡವಾಗಿದೆ. ಆದ್ರೆ ದೊಡ್ಡ ತಂಡಗಳೊಂದಿಗೆ ಆಡುವಾಗ ದೊಡ್ಡ ಸವಾಲುಗಳಿವೆ, "ಎಂದು ಸಾಬಾ ಕರೀಂ ಹೇಳಿದರು.

ಇದೇ ತಿಂಗಳ ಮಾರ್ಚ್‌ 4ರಿಂದ ಪ್ರಾರಂಭಗೊಳ್ಳಲಲಿದ್ದು, ಪಂಜಾಬ್ ಕ್ರಿಕೆಟ್ ಅಸೋಸಿಯೇಶ್ನ್‌ನ ಐಎಸ್‌ ಬಿಂದ್ರಾ ಸ್ಟೇಡಿಯಂ ಮೊಹಾಲಿಯಲ್ಲಿ ನಡೆಯಲದೆ. ಎರಡನೇ ಟೆಸ್ಟ್ ಪಂದ್ಯ ಮಾರ್ಚ್‌ 12ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಮಾಜಿ ನಾಯಕ ವಿರಾಟ್ ಕೊಹ್ಲಿ ತಮ್ಮ ವೃತ್ತಿಜೀವನದ 100 ನೇ ಪಂದ್ಯವಾಗಿರುವುದರಿಂದ ಸಂಭ್ರಮದಲ್ಲಿದ್ದಾರೆ.

Story first published: Thursday, March 3, 2022, 12:14 [IST]
Other articles published on Mar 3, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+