Shreyas Iyer: ವಿರಾಟ್ ಕೊಹ್ಲಿ ದಾಖಲೆ ಅಳಿಸಿದ ಶ್ರೇಯಸ್ ಅಯ್ಯರ್
ಕೇವಲ ನಾಲ್ಕು ದಿನಗಳ ಹಿಂದೆ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್ ಏಕದಿನ ಕ್ರಿಕೆಟ್‌ನಲ್ಲಿ 3000 ರನ್ ದಾಖಲಿಸಿದ ಸಾಧನೆಯನ್ನು ಮಾಡಿದರು. ಉಪನಾಯಕ ಶ್ರೇಯಸ್ ಅಯ್ಯರ್ ಇದೇ ಸಾಧನೆಯನ್ನು ಮಾಡಲು ಲಕ್ನೋ ಮೈದಾನವನ್ನು ಆಯ್ಕೆ ಮಾಡಿಕೊಂಡರು. ಶ್ರೇಯಸ್ ಅಯ್ಯರ್ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 26 ರನ್‌ಗಳ ಚಿಕ್ಕ ಇನಿಂಗ್ಸ್ ಕಟ್ಟಿದರೂ ಸಹ ವೃತ್ತಿ ಜೀವನದ ದೊಡ್ಡ ಮೈಲಿಗಲ್ಲು ತಲುಪಿದ್ದಾರೆ. ಈ ಮೂಲಕ ಶ್ರೇಯಸ್ ವಿರಾಟ್ ಕೊಹ್ಲಿ ದಾಖಲೆಯನ್ನು ಮೀರಿ ನಿಂತರು.
ಬುಧವಾರ ನಡೆದ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ನಾಯಕ ಶುಭಮನ್ ಗಿಲ್, ಇಶಾನ್ ಕಿಶನ್ ಶತಕ ಬಾರಿಸಿ ಅಬ್ಬರಿಸಿದರು. ಐದನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಶ್ರೇಯಸ್ ಅಯ್ಯರ್ 26 ರನ್ ಬಾರಿಸಿ ಔಟ್ ಆದರು. ಇವರು ಈ ಚಿಕ್ಕ ಇನಿಂಗ್ಸ್ ಮೂಲಕ ದಾಖಲೆಯನ್ನು ನಿರ್ಮಿಸಿದರು.

ಶ್ರೇಯಸ್ ಅಯ್ಯರ್ ಏಕದಿನ ಕ್ರಿಕೆಟ್‌ನಲ್ಲಿ 3000 ರನ್ ದಾಖಲಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಇವರು ಈ ಮೂಲಕ ದೊಡ್ಡ ಸಾಧನೆ ಮಾಡಿದರು. ಮುಂಬೈ ಬ್ಯಾಟರ್ ಕೇವಲ 72 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡುವ ಮೂಲಕ ಶಿಖರ್ ಧವನ್ ಅವರೊಂದಿಗೆ ಜಂಟಿ ಎರಡನೇ ಸ್ಥಾನ ತಮ್ಮದಾಗಿಸಿಕೊಂಡರು.
ಕಡಿಮೆ ಇನಿಂಗ್ಸ್‌ನಲ್ಲಿ 3000 ರನ್ ಗಡಿ ದಾಟಿದ ಭಾರತೀಯ ಬ್ಯಾಟರ್ಸ್
- ಶುಭಮನ್ ಗಿಲ್, 62 ಇನಿಂಗ್ಸ್
- ಶಿಖರ್ ಧವನ್, 72 ಇನಿಂಗ್ಸ್
- ಶ್ರೇಯಸ್ ಅಯ್ಯರ್, 72 ಇನಿಂಗ್ಸ್
- ವಿರಾಟ್ ಕೊಹ್ಲಿ, 75 ಇನಿಂಗ್ಸ್
- ಕೆಎಲ್ ರಾಹುಲ್, 78 ಇನಿಂಗ್ಸ್
ಎಸೆತಗಳ ಲೆಕ್ಕಾಚಾರದಲ್ಲಿ 3000 ರನ್ ವೇಗವಾಗಿ ಬಾರಿಸಿದ್ದು ಯಾರು?
ಟೀಮ್ ಇಂಡಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಕಡಿಮೆ ಎಸೆತಗಳಲ್ಲಿ 3000 ರನ್ ಗಳಿಸಿದ ದಾಖಲೆ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಅವರಿಗೆ ಸಲ್ಲುತ್ತದೆ. ಇವರು 2995 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದರು. ಇದೇ ಸಾಧನೆಯನ್ನು ಮಾಡಲು ಶುಭಮನ್ ಗಿಲ್ 3016 ರನ್ ಕಲೆ ಹಾಕಿದ್ದರು. ಶ್ರೇಯಸ್ ಅಯ್ಯರ್ ಈ ಸಾಧನೆ ಮಾಡಲು 3049 ರನ್ ಸಿಡಿಸಿದ್ದರು. ಈ ಮೂಲಕ ಶ್ರೇಯಸ್ ಅಯ್ಯರ್ ವೀರೇಂದ್ರ ಸೆಹ್ವಾಗ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ಸೆಹ್ವಾಗ್ 3000 ರನ್ ಪೂರ್ಣಗೊಳಿಸಲು 3164 ಎಸೆತಗಳನ್ನು ತೆಗೆದುಕೊಂಡಿದ್ದರು.
ಶ್ರೇಯಸ್ ಅಯ್ಯರ್ ಸಾಧನೆ
31 ವರ್ಷದ ಶ್ರೇಯಸ್ ಅಯ್ಯರ್ ಈಗಾಗಲೇ ಟೀಮ್ ಇಂಡಿಯಾದ ಪರ ಮೂರು ಫಾರ್ಮೆಟ್ ಆಡಿದ ಅನುಭವ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಪ್ರದರ್ಶಿಸಿದ ಉತ್ತಮ ನಾಯಕತ್ವದ ಫಲವಾಗಿ ಇವರಿಗೆ ಈಗ ಟೀಮ್ ಇಂಡಿಯಾದ ಚುಕ್ಕಾಣಿಯನ್ನು ನೀಡಲಾಗಿದೆ. ಇವರು ಇಂಗ್ಲೆಂಡ್, ಐರ್ಲೆಂಡ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications