
ಕಳೆಗುಂದಿದೆ ಕೊಹ್ಲಿ ಬ್ಯಾಟಿಂಗ್
ಕಳೆದ ಎರಡು ವರ್ಷಗಳಿಂದ ವಿರಾಟ್ ಕೊಹ್ಲಿ ಅಭಿಮಾನಿಗಳು ಶತಕಕ್ಕಾಗಿ ಕಾಯುತ್ತಿದ್ದಾರೆ. ವಿರಾಟ್‌ನ ವೇಗದ ಬ್ಯಾಟಿಂಗ್ ನೋಡಲು ಕಾತರರಾಗಿದ್ದಾರೆ. ಆದ್ರೆ ವಿರಾಟ್ ಮೊದಲಿನಂತೆ ಬ್ಯಾಟ್ ಬೀಸುತ್ತಿಲ್ಲ. ಮೊದಲಿನಂತೆ ವೇಗವಾಗಿ ಆಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಟಿ20 ವಿಶ್ವಕಪ್ ನಲ್ಲಿ ಕೊಹ್ಲಿ ಸ್ಥಾನಕ್ಕೆ ಕಂಟಕ ಎದುರಾಗಿದೆ.
ವಿರಾಟ್ ಕೊಹ್ಲಿ ವಿಶ್ವಕಪ್‌ಗೂ ಮುನ್ನ ಉಳಿದ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುವ ಅನಿವಾರ್ಯತೆ ಸೃಷ್ಟಿಸಿದ್ದಾರೆ. ಇಲ್ಲವಾದಲ್ಲಿ ಟೀಮ್ ಮ್ಯಾನೇಜ್ ಮೆಂಟ್ ಈ ಹಿರಿಯ ಕ್ರಿಕೆಟಿಗನನ್ನು ನಿರ್ದಾಕ್ಷಿಣ್ಯವಾಗಿ ಹೊರಗಿಡುವ ಸಾಧ್ಯತೆ ಇದೆ. ಸದ್ಯಕ್ಕೆ ಸದ್ಯದಲ್ಲಿ ಯಾವುದೇ ಟಿ20 ಟೂರ್ನಿಗಳಿಲ್ಲದಿದ್ದರೂ, ಮಾರ್ಚ್ 26ರಿಂದ ನಡೆಯಲಿರುವ ಐಪಿಎಲ್ ಅವರ ವೃತ್ತಿಜೀವನಕ್ಕೆ ನಿರ್ಣಾಯಕವಾಗಲಿದೆ.

ಸೂರ್ಯಕುಮಾರ್, ಶ್ರೇಯಸ್ ಅಯ್ಯರ್‌ನಿಂದ ತೀವ್ರ ಪೈಪೋಟಿ
ಇದುವರೆಗೂ ವಿರಾಟ್ ಕೊಹ್ಲಿ ಟೀಂ ಇಂಡಿಯಾದಲ್ಲಿ ಖಾಯಂ ನಂ.3 ಆಟಗಾರರಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಟಿ20 ಸ್ವರೂಪದಲ್ಲಿ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಬ್ಯಾಟ್ ನಿಂದ ಅಬ್ಬರಿಸುತ್ತಿದ್ದಾರೆ. ಅದರಲ್ಲೂ ಸೂರ್ಯ ಹೆಚ್ಚು ಆಕ್ರಮಣಕಾರಿ ಆಟದ ಶೈಲಿಗೆ ಇಳಿಯುತ್ತಿದ್ದಾರೆ. ಕಳೆದ ವರ್ಷ ಶ್ರೇಯಸ್ ಅಯ್ಯರ್ ಗಾಯಗೊಂಡ ನಂತರ ಅವಕಾಶ ಪಡೆದ ಸೂರ್ಯಕುಮಾರ್ ತಮ್ಮದೇ ಶೈಲಿಯಲ್ಲಿ ಮಿಂಚಿದ್ದರು. ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು.
ಐಪಿಎಲ್: ನೂತನ ನಾಯಕ ಯಾರೆಂದು ಘೋಷಿಸುವಲ್ಲಿ ಆರ್‌ಸಿಬಿ ತಡ ಮಾಡುತ್ತಿರುವುದು ಈ ಮೂವರಿಂದ!

ಲಂಕಾ ವಿರುದ್ಧ ಅಬ್ಬರಿಸಿದ ಶ್ರೇಯಸ್ ಅಯ್ಯರ್
ಶ್ರೇಯಸ್ ಕೂಡ ಇತ್ತೀಚೆಗೆ ತಾನೆಷ್ಟು ಅಪಾಯಕಾರಿ ಬ್ಯಾಟ್ಸ್‌ಮನ್ ಅನ್ನೋದನ್ನ ಸಾಭೀತುಪಡಿಸಿದ್ರು. ಶ್ರೀಲಂಕಾ ವಿರುದ್ಧದ ಇತ್ತೀಚಿನ ಟಿ20 ಸರಣಿಯೇ ಅದಕ್ಕೆ ಸಾಕ್ಷಿ. ಅವರು ಎಲ್ಲಾ ಮೂರು ಪಂದ್ಯಗಳಲ್ಲಿ ಕೊಹ್ಲಿಯ ಜಾಗದಲ್ಲಿ ಅಬ್ಬರಿಸಿದ್ದಷ್ಟೇ ಅಲ್ಲದೆ ಮೂರು ಪಂದ್ಯಶ್ರೇಷ್ಠ ಇನ್ನಿಂಗ್ಸ್‌ಗಳನ್ನು ಆಡಿದರು. ಕೊನೆಯ ಕ್ಷಣದಲ್ಲಿ ಸೂರ್ಯ ಕುಮಾರ್ ಟಿ20 ಸರಣಿಯಿಂದ ಹೊರಗುಳಿದಿದ್ದು, ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಇದರೊಂದಿಗೆ ಶ್ರೇಯಸ್ ಅಯ್ಯರ್ (57, 74, 73) ಫಸ್ಟ್ ಡೌನ್ ನಲ್ಲಿ ಬ್ಯಾಟಿಂಗ್ ಗೆ ಬಂದು ಧೂಳೆಬ್ಬಿಸಿದರು.
ಅಜೇಯ ಹ್ಯಾಟ್ರಿಕ್ ಅರ್ಧಶತಕಗಳೊಂದಿಗೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಅಯ್ಯರ್ , ಈ ಸರಣಿಯಲ್ಲಿ ಒಟ್ಟು 174 ಸ್ಟ್ರೈಕ್ ರೇಟ್‌ನೊಂದಿಗೆ 204 ರನ್ ಗಳಿಸಿ 'ಮ್ಯಾನ್ ಆಫ್ ದಿ ಸೀರೀಸ್ ಪ್ರಶಸ್ತಿ' ಪಡೆದರು. ಮುಂಬರುವ ಐಪಿಎಲ್‌ನಲ್ಲಿ ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ವಿಧ್ವಂಸಕ ಬ್ಯಾಟಿಂಗ್ ಮುಂದುವರಿಸಿ, ವಿರಾಟ್ ಕೊಹ್ಲಿ ವಿಫಲವಾದ್ರೆ ಈ ಇಬ್ಬರು ಅಂತಿಮ ತಂಡದಲ್ಲಿ ಸ್ಥಾನ ಪಡೆಯಬಹುದು.

ನಂಬರ್ 3ನಲ್ಲಿ ಆಡೋದ್ರಲ್ಲಿ ಹೆಚ್ಚಿನ ಖುಷಿ: ಅಯ್ಯರ್
ಶ್ರೇಯಸ್ ಅಯ್ಯರ್ ಕೂಡ ಇತ್ತೀಚೆಗಷ್ಟೇ ನಂ.3ರಲ್ಲಿ ಆಡುವುದನ್ನು ಇಷ್ಟಪಡುವುದಾಗಿ ಬಹಿರಂಗಪಡಿಸಿದ್ದಾರೆ. ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಕೂಡ ಯುವ ಆಟಗಾರರಿಗೆ ಅವಕಾಶ ನೀಡುವ ಭರವಸೆ ಇದೆ. ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಇದು ಸ್ಪಷ್ಟವಾಗಿದೆ. ಈಗ ಎಷ್ಟೇ ಟ್ರಯಲ್ಸ್ ಮಾಡಿದರೂ, ಹಿಂದಿನಂತೆ ಐಪಿಎಲ್ ಪ್ರದರ್ಶನವನ್ನು ಪರಿಗಣಿಸಿ ವಿಶ್ವಕಪ್ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಈ ಎರಡು ಸರಣಿಗಳಲ್ಲಿ ಮಿಂಚಿದ ವೆಂಕಟೇಶ್ ಅಯ್ಯರ್, ರವಿ ಬಿಷ್ಣೋಯ್ ಮತ್ತು ಅವೇಶ್ ಖಾನ್ ಐಪಿಎಲ್ನಲ್ಲಿ ಮಿಂಚಿದ್ರೆ, ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ.


Click it and Unblock the Notifications
