Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಮ್ ಇಂಡಿಯಾ ಸತತ ಸರಣಿ ಸೋಲಿಗೆ ಕಾರಣವಾದ ಟಾಪ್‌ 5 ಕಾರಣಗಳು

ಬಹು ನಿರೀಕ್ಷಿತ ಇಂಗ್ಲೆಂಡ್ ಟಿ20 ಸರಣಿ ಕೊನೆಗೊಂಡಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಗೆಲ್ಲದೇ ನಿರಾಸೆಯನ್ನು ಅನುಭವಿಸಿದೆ. ಐದು ಟಿ20 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಫಲಿತಾಂಶ ರಹಿತವಾಗಿತ್ತು. ಉಳಿದ ನಾಲ್ಕು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಈ ಮೂಲಕ ಶ್ರೇಯಸ್ ಅಯ್ಯರ್ ತಮ್ಮ ನಾಯಕತ್ವದಲ್ಲಿ ಮೊದಲ ಗೆಲುವಿನ ನಗೆ ಬೀರುವ ಕನಸು ಮುಂದಕ್ಕೆ ಹೋಗಿದೆ. ಅಲ್ಲದೆ ಬಹು ದಿನಗಳಿಂದ ಕಾಯ್ದುಕೊಂಡು ಬಂದಿದ್ದ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನವನ್ನು ಸಹ ಕೈ ಚೆಲ್ಲಿದೆ.

ಇಂಗ್ಲೆಂಡ್‌ ಪ್ರವಾಸಕ್ಕೂ ಮುನ್ನ ಟೀಮ್ ಇಂಡಿಯಾ ಐರ್ಲೆಂಡ್‌ ವಿರುದ್ದವೂ ಟಿ20 ಸರಣಿಯನ್ನು ಆಡಿತು. ಈ ಸರಣಿಯಲ್ಲೂ ಶ್ರೇಯಸ್‌ ಅಯ್ಯರ್‌ ಪಡೆ ಐತಿಹಾಸಿಕ ಸೋಲನ್ನು ಕಾಣಬೇಕಾಯಿತು. ಇಂಗ್ಲೆಂಡ್‌ ಪ್ರವಾಸದಲ್ಲಾದ್ರೂ ಪುಟಿದೇಳುವ ಆಸೆಯನ್ನು ಹೊಂದಿದ್ದ ಭಾರತ ತಂಡಕ್ಕೆ, ನಿರಾಸೆ ಬಹುವಾಗಿ ಕಾಡಿದೆ. ಕಳೆದ ಎರಡು ವಾರದಲ್ಲಿ ಟೀಮ್ ಇಂಡಿಯಾ ಸತತ ಸೋಲನ್ನು ಕಂಡಿದೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

Team India Suffers Series Defeat

ಅಂದಹಾಗೆ ಟೀಮ್ ಇಂಡಿಯಾ ಇಂಗ್ಲೆಂಡ್‌ನಲ್ಲಿ ಟಾಸ್‌ ಗೆದ್ದರೂ ಪಂದ್ಯವನ್ನು ಕೈ ಚೆಲ್ಲಿದ್ದು, ನಿಶ್ಚಿತವಾಗಿ ಪ್ರಶ್ನೆಗಳು ಏಳುವಂತೆ ಮಾಡಿದೆ. ಅಲ್ಲದೆ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಆಡುವಲ್ಲಿ ಎಡವಿದ್ದು, ಶ್ರೇಯಸ್ ಅಯ್ಯರ್ ಪಡೆಯ ವೈಫಲ್ಯವನ್ನು ಎತ್ತಿ ತೋರಿಸುತ್ತದೆ.

ಅನುಭವಿಗಳ ಕೊರತೆ

ಟೀಮ್ ಇಂಡಿಯಾಕ್ಕೆ ಈ ಸರಣಿಯಲ್ಲಿ ನಿಶ್ಚಿತವಾಗಿ ಅನುಭವಿ ಆಟಗಾರರ ಕೊರತೆ ಎದ್ದು ಕಂಡಿದೆ. ಬ್ಯಾಟಿಂಗ್ ವಿಭಾಗದಲ್ಲಿ ಸೂರ್ಯಕುಮಾರ್, ಬೌಲಿಂಗ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ಎದ್ದು ಕಂಡಿದೆ. ಅಲ್ಲದೆ ಟೀಮ್ ಮ್ಯಾನೇಜ್‌ಮೆಂಟ್‌ ಯುವ ಆಟಗಾರರಿಗೆ ಮಣೆ ಹಾಕುವ ತಂತ್ರವನ್ನು ಪ್ರಶ್ನಿಸುವಂತೆ ಮಾಡಿದೆ.

ಬ್ಯಾಟರ್‌ಗಳ ವೈಫಲ್ಯ

ಟೀಮ್ ಇಂಡಿಯಾ ಇಂಗ್ಲೆಂಡ್‌ ಸರಣಿಯಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದೆ. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್‌ಗಳು ರನ್‌ ಕಲೆ ಹಾಕುವಲ್ಲಿ ಎಡವಿದ್ದಾರೆ. ಈ ಸರಣಿಯಲ್ಲಿ ಐದೂ ಪಂದ್ಯಗಳಲ್ಲಿ ಭಾರತದ ಬ್ಯಾಟರ್‌ಗಳಿಗೆ ಬ್ಯಾಟ್ ಮಾಡುವ ಅವಕಾಶ ಸಿಕ್ಕಿತ್ತು. ಆದರೆ ಶ್ರೇಯಸ್ ಅಯ್ಯರ್ ಅವರನ್ನು ಹೊರತು ಪಡಿಸಿದರೆ ಬೇರೆ ಯಾವೊಬ್ಬ ಬ್ಯಾಟರ್‌ 200ಕ್ಕೂ ಹೆಚ್ಚು ರನ್‌ ಕಲೆ ಹಾಕಲಿಲ್ಲ.

ಇಂಗ್ಲೆಂಡ್‌ನಲ್ಲಿ ವಿರಾಟ್‌ ಕೊಹ್ಲಿ ಯಶಸ್ಸು ಕಂಡಿದ್ದು ಹೇಗೆ? ಸಿಕ್ರೇಟ್‌ ರಿವೀಲ್ ಮಾಡಿದ ಸಂಜಯ್ ಬಂಗಾರ್

ಇಂಗ್ಲೆಂಡ್‌ನಲ್ಲಿ ವಿರಾಟ್‌ ಕೊಹ್ಲಿ ಯಶಸ್ಸು ಕಂಡಿದ್ದು ಹೇಗೆ? ಸಿಕ್ರೇಟ್‌ ರಿವೀಲ್ ಮಾಡಿದ ಸಂಜಯ್ ಬಂಗಾರ್

ವಿಶ್ವದ ನಂಬರ್ 1 ಬ್ಯಾಟರ್‌ ಇಶಾನ್‌ ಕಿಶನ್‌ (122), ಎರಡನೇ ಶ್ರೇಯಾಂಕಿತ ಬ್ಯಾಟರ್‌ ಅಭಿಷೇಕ್‌ ಶರ್ಮಾ (131), ತಿಲಕ್ ವರ್ಮಾ (104) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾದರು. ಪರಿಣಾಮ ಟೀಮ್ ಇಂಡಿಯಾ ಸರಣಿ ಸೋಲನ್ನು ಕಂಡಿತು. ಇನ್ನು ಒಟ್ಟಾರೆ ಸರಣಿಯಲ್ಲಿ ಶ್ರೇಯಸ್ ಅಯ್ಯರ್‌ ಅವರನ್ನು ಹೊರತು ಪಡಿಸಿದರೆ ಉಳಿದ ಯಾವೊಬ್ಬ ಬ್ಯಾಟರ್‌ 100ಕ್ಕೂ ಹೆಚ್ಚು ಎಸೆತಗಳನ್ನೇ ಎದುರಿಸಿಲ್ಲ.

ಸರಣಿಯಲ್ಲಿ ಟಾಪ್‌ ಆರ್ಡರ್ ಬ್ಯಾಟರ್‌ಗಳು ಎದುರಿಸಿದ ಎಸೆತಗಳು

  • ಶ್ರೇಯಸ್‌ ಅಯ್ಯರ್‌, 5 ಪಂದ್ಯ, 138 ಎಸೆತ
  • ಅಭಿಷೇಕ್‌ ಶರ್ಮಾ, 5 ಪಂದ್ಯ, 74 ಎಸೆತ
  • ಇಶಾನ್ ಕಿಶನ್‌, 5 ಪಂದ್ಯ, 92 ಎಸೆತ
  • ಸಂಜು ಸ್ಯಾಮ್ಸನ್‌, 2 ಪಂದ್ಯ, 28 ಎಸೆತ
  • ವೈಭವ್ ಸೂರ್ಯವಂಶಿ, 3 ಪಂದ್ಯ, 25 ಎಸೆತ

ಕೈ ಹಿಡಿಯದ ಅನುಭವಿ ಬೌಲರ್ಸ್‌

ಟೀಮ್ ಇಂಡಿಯಾದ ಬೌಲರ್‌ಗಳು ಈ ಸರಣಿಯಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ಹಿಂದೆ ಬಿದ್ದಿದ್ದಾರೆ. ಅರ್ಷದೀಪ್‌ ಸಿಂಗ್ ಐದು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರೂ ಸಹ ಕೇವಲ ನಾಲ್ಕು ವಿಕೆಟ್‌ ಪಡೆದಿದ್ದು, ತಂಡಕ್ಕೆ ಹಿನ್ನಡೆಯಾಗಿದೆ. ಅಲ್ಲದೆ ಹರ್ಷಿತ್ ರಾಣಾ (10.00 ಸರಾಸರಿ), ಪ್ರಿನ್ಸ್‌ ಯಾದವ್ (10.72), ವರುಣ್‌ ಚಕ್ರವರ್ತಿ (10.28) ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದಾರೆ. ಟೀಮ್ ಇಂಡಿಯಾದ 7 ಬೌಲರ್‌ಗಳು ಒಟ್ಟಾರೆಯಾಗಿ 15 ವಿಕೆಟ್‌ ಪಡೆದಿದ್ದಾರೆ.

IND vs ENG 5Th T20: ಶ್ರೇಯಸ್‌ ಪಡೆ ಬೆಂಬಿಡದ ಸೋಲು: ಸರಣಿ ಗೆದ್ದ ಇಂಗ್ಲೆಂಡ್‌ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ

IND vs ENG 5Th T20: ಶ್ರೇಯಸ್‌ ಪಡೆ ಬೆಂಬಿಡದ ಸೋಲು: ಸರಣಿ ಗೆದ್ದ ಇಂಗ್ಲೆಂಡ್‌ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನ

ದುಬಾರಿಯಾದ ಆಲ್‌ರೌಂಡರ್ಸ್‌

ಟೀಮ್ ಇಂಡಿಯಾ ಅತಿ ಹೆಚ್ಚು ಆಲ್‌ರೌಂಡರ್‌ಗಳಿಗೆ ಮಣೆ ಹಾಕಿತು. ಆದರೆ ಇಂಗ್ಲೆಂಡ್‌ ಸರಣಿಯಲ್ಲಿ ಈ ಆಟಗಾರರು ತಮ್ಮ ಘನತೆಗೆ ತಕ್ಕ ಆಟವನ್ನುಆಡಲು ವಿಫಲರಾಗಿದ್ದಾರೆ.

ಇಂಗ್ಲೆಂಡ್‌ ಸರಣಿಯಲ್ಲಿ ಆಡಿದ ಆಲ್‌ರೌಂಡರ್ಸ್‌

  • ಶಿವಂ ದುಬೆ, 5 ಪಂದ್ಯ, 85 ರನ್, 2 ವಿಕೆಟ್‌
  • ಅಕ್ಷರ್ ಪಟೇಲ್, 5 ಪಂದ್ಯ, 17 ರನ್‌, 2 ವಿಕೆಟ್‌
  • ವಾಷಿಂಗ್ಟನ್ ಸುಂದರ್‌, 1 ಪಂದ್ಯ, 8 ರನ್, 0 ವಿಕೆಟ್‌
  • ಸುರ್ಯಾಂಶ್‌ ಶೆಡ್ಗೆ, 1 ಪಂದ್ಯ, 7 ರನ್‌, 0 ವಿಕೆಟ್‌

ಇಂಗ್ಲೆಂಡ್‌ನಲ್ಲಿ ನಡೆಯದ ಸ್ಪಿನ್ ಬೌಲರ್ಸ್‌ ಅಬ್ಬರ

ಇಂಗ್ಲೆಂಡ್‌ನಲ್ಲಿ ಸ್ಪಿನ್ ಬೌಲರ್‌ಗಳು ಕಮಾಲ್‌ ಮಾಡುವಲ್ಲಿ ವಿಫಲರಾಗಿದ್ದಾರೆ. ಒಟ್ಟಾರೆ ಸರಣಿಯಲ್ಲಿ ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯಿ, ವಾಷಿಂಗ್ಟನ್‌ ಸುಂದರ್‌, ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದಾರೆ. ಒಟ್ಟಾರೆ ಸರಣಿಯಲ್ಲಿ ಈ ಸ್ಪಿನ್ ಬೌಲರ್‌ಗಳು ಕೇವಲ 26 ಓವರ್‌ಗಳನ್ನು ಮಾತ್ರ ಮಾಡಿದ್ದು, ಕೇವಲ ಮೂರು ವಿಕೆಟ್‌ ಪಡೆದಿದ್ದಾರೆ. ಇದು ಸಹ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

ಟೀಮ್ ಇಂಡಿಯಾ ಈ ಎಲ್ಲ ನ್ಯೂನತೆಗಳನ್ನು ಮೆಟ್ಟಿನಿಂತಾಗ ಮಾತ್ರ ಗೆಲುವಿನ ನಗೆ ಬೀರಲು ಸಾಧ್ಯ.

Story first published: Sunday, July 12, 2026, 5:35 [IST]
Other articles published on Jul 12, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+