KKR vs GT IPL 2025: ಸಾಯಿ ಸುದರ್ಶನ್, ಗಿಲ್ ಅರ್ಧಶತಕ: ಕೆಕೆಆರ್ ಗೆಲುವಿಗೆ 199 ರನ್ ಗುರಿ ನೀಡಿದ ಗುಜರಾತ್
ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್ ನಡುವಣ ಪಂದ್ಯದಲ್ಲಿ ಟಾಸ್ ಆತಿಥೇಯ ತಂಡದ ಪಾಲಾಯಿತು. ಅಜಿಂಕ್ಯ ರಹಾನೆ ಫೀಲ್ಡಿಂಗ್ ಮಾಡಲು ಮುಂದಾದರು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಶುಭ್‌ಮನ್ ಗಿಲ್ ಹಾಗೂ ಬಿ ಸಾಯಿ ಸುದರ್ಶನ್ ಜೋಡಿ ಕೆಕೆಆರ್ ತಂಡದ ಬೌಲರ್‌ಗಳನ್ನು ಕಾಡಿತು. ಈ ಮೂಲಕ ಅಜಿಂಕ್ಯ ಅವರ ನಿರ್ಧಾರವನ್ನು ತಪ್ಪು ಎಂದು ಸಾಬೀತು ಪಡಿಸಿದರು. ಈ ಜೋಡಿಯನ್ನು ಆರಂಭದಲ್ಲಿ ಕಟ್ಟಿ ಹಾಕುವಲ್ಲಿ ಕೆಕೆಆರ್ ವಿಫಲವಾಯಿತು.
ಪವರ್ ಪ್ಲೇನಲ್ಲಿ ಎಚ್ಚರಿಕೆಯಿಂದ ಆಡಿದ ಗುಜರಾತ್ 7.50ರ ಸರಾಸರಿಯಲ್ಲಿ ಮೊದಲ 6 ಓವರ್‌ಗಳಲ್ಲಿ 45 ರನ್ ಸೇರಿಸಿತು. ಈ ಬಳಿಕ ಟೈಟನ್ಸ್ ತಂಡದ ಆರಂಭಿಕರು ತಮ್ಮ ನೈಜ್ಯ ಆಟವನ್ನು ಮುಂದುವರೆಸಿದರು. ಸಾಯಿ ಸುದರ್ಶನ್ ಅಮೋಘ ಬ್ಯಾಟಿಂಗ್ ನಡೆಸಿದರು. ಇವರು 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಸಾಯಿ ಸುದರ್ಶನ ಸ್ಥಿರ ಬ್ಯಾಟಿಂಗ್ ನಡೆಸುತ್ತಿದ್ದಾಗ ರಸೆಲ್ ತೋಡಿದ ಖೆಡ್ಡಾಗೆ ಬಲಿಯಾದರು. ಸಾಯಿ ಸುದರ್ಶನ್ ಔಟ್ ಆಗುವ ಮುನ್ನ 36 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 52 ರನ್ ಬಾರಿಸಿ ಔಟ್ ಆದರು.

ಗಿಲ್ ಅಮೋಘ ಬ್ಯಾಟಿಂಗ್
ಕೆಕೆಆರ್ 12.2 ಓವರ್‌ಗಳಲ್ಲಿ 114 ರನ್ ನೀಡಿದಾಗ ಮೊದಲ ಯಶಸ್ಸು ಲಭಿಸಿತು. ಈ ವೇಳೆ ಸುದರ್ಶನ್ ಅವರ ಸ್ಥಾನದಲ್ಲಿ ಜೋಸ್ ಬಟ್ಲರ್, ಗಿಲ್ ಅವರನ್ನು ಸೇರಿಕೊಂಡರು. ಈ ಜೋಡಿ ಸಹ ಕೆಕೆಆರ್ ಬೌಲರ್‌ಗಳನ್ನು ಕಾಡುತ್ತಾ ಸಾಗೀತು. ಈ ಜೋಡಿ ರನ್ ವೇಗಕ್ಕೆ ಚುರುಕು ಮುಟ್ಟಿಸುವ ಕೆಲಸವನ್ನು ಮುಂದುವರೆಸಿದರು. ಬಟ್ಲರ್ ಹಾಗೂ ಶುಭಮನ್ ಗಿಲ್ ಜೋಡಿ ಸಹ ಎರಡನೇ ವಿಕೆಟ್‌ಗೆ 33 ಎಸೆತಗಳಲ್ಲಿ 58 ರನ್ ಸಿಡಿಸಿ ತಂಡಕ್ಕೆ ಆಧಾರವಾಯಿತು. ಈ ವೇಳೆ ಅಮೋಘ ಲಯದಲ್ಲಿದ್ದ ಶುಭ್‌ಮನ್ ಗಿಲ್ ಇಲ್ಲದ ಶಾಟ್‌ಗೆ ಮುಂದಾಗಿ ಔಟ್ ಆದರು.
ಶುಭ್‌ಮನ್ ಗಿಲ್ ತಮ್ಮ ಕ್ಲಾಸಿಕ್ ಬ್ಯಾಟಿಂಗ್ ಮುಂದುವರಿಸಿದರು. ಇವರು 55 ಎಸೆತಗಳಲ್ಲಿ 10 ಬೌಂಡರಿ 3 ಸಿಕ್ಸರ್ ಸಹಾಯದಿಂದ 90 ರನ್ ಬಾರಿಸಿದ್ದಾಗ ವೈಭವ್ ಆರೋರ್ ತೋಡಿದ ಖೆಡ್ಡಾಗೆ ಬಲಿಯಾದರು.

ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ರಾಹುಲ್ ತೆವಟಿಯಾ ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು. ಕೊನೆಯಲ್ಲಿ ಜೋಸ್ ಬಟ್ಲರ್ ಹಾಗೂ ಶಾರುಖ್ ಖಾನ್ ಜೋಡಿ ಉತ್ತಮ ಜೊತೆಯಾದ ಕಾಣಿಕೆ ನೀಡಿ ತಂಡ 198 ರನ್‌ಗಳನ್ನು ಕಲೆ ಹಾಕುವಲ್ಲಿ ಸಫಲವಾಯಿತು. ಜೋಸ್ ಬಟ್ಲರ್ 23 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ ಅಜೇಯ 41 ರನ್ ಸಿಡಿಸಿತು. ಶಾರುಖ್ ಖಾನ್ 1 ಸಿಕ್ಸರ್ ಸಹಾಯದಿಂದ ಅಜೇಯ 11 ರನ್ ಸಿಡಿಸಿ ತಂಡಕ್ಕೆ ಆಧಾರವಾದರು.
ಕೆಕೆಆರ್ ತಂಡದ ಪರ ವೈಭವ್ ಆರೋರ್, ಹರ್ಷಿತ್ ರಾಣಾ, ಆಂಡ್ರಿ ರಸೆಲ್ ತಲಾ ಒಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications