Shubman Gill: ಚಿಕ್ಕ ವಯಸ್ಸಿನಲ್ಲೇ ದೊಡ್ಡ ದೊಡ್ಡ ದಾಖಲೆ ಬರೆದ ಶುಭಮನ್ ಗಿಲ್
ಟೀಮ್ ಇಂಡಿಯಾದ ನ್ಯೂ ಫ್ಯೂಚರ್ ಸೂಪರ್ ಸ್ಟಾರ್ ಯಾರು ಎಂದರೆ ಎಲ್ಲರ ಕಣ್ಣುಗಳು ಶುಭಮನ್ ಗಿಲ್ ಅವರತ್ತ ಹೋಗುತ್ತವೆ. ಈ ಯುವ ಆಟಗಾರ ಆಡಿದ ಧಾಟಿಯೂ ಆದೆ ರೀತಿಯೆ ಇದೆ. ತಂಡ ಸಂಕಷ್ಟದಲ್ಲಿದ್ದ ಸಂಕಟ ಮೋಚಕನಾಗಿ ಮೈದಾನದಲ್ಲಿ ಕಾಣಿಸಿಕೊಳ್ಳುವ ಗಿಲ್, ಒತ್ತಡದ ಸನ್ನಿವೇಶಗಳಲ್ಲಿ ಅಬ್ಬರಿಸುವ ಪ್ಲೇಯರ್. ಇವರು ಆಡುವ ಧಾಟಿಯನ್ನು ಕಂಡು ಇವರ ಮೇಲೆ ಟೀಮ್ ಮ್ಯಾನೇಜ್ಮೆಂಟ್ ಏಕೆ ನಂಬಿಕೆಯನ್ನು ಇಡುತ್ತದೆ ಎಂದು ತಿಳಿಸಿದ್ದಾರೆ. ಟೀಮ್ ಇಂಡಿಯಾದ ಭವಿಷ್ಯದ ಬ್ಯಾಟಿಂಗ್ ಉತ್ತರಾಧಿಕಾರಿ ಎಂದೇ ಇವರನ್ನು ಬಿಂಬಿಸಲಾಗುತ್ತಿದೆ.
25ನೇ ವಯಸ್ಸಿನಲ್ಲಿ ಶುಭಮನ್ ಗಿಲ್ ಆಡುವ ಮ್ಯಾಚ್ಯುರ್ ಇನಿಂಗ್ಸ್ ಕಂಡು ಕ್ರೀಡಾಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ. ಇನ್ನು ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಮುಂದೆ ಮಿಡ್ ವಿಕೆಟ್ ಮೇಲೆ ಬಾರಿಸಿದ ಸಿಕ್ಸರ್ ಕಂಡು, ಸ್ವತಃ ನಾಯಕ ಬೆನ್ನು ತಟ್ಟಿದರು. ಪಂದ್ಯ ಮುಗಿದ ಬಳಿಕ ಅವರಲ್ಲಿ ಸಾಕಷ್ಟು ಕ್ಷಮತೆ ಇರುವುದಾಗಿ ನಾಯಕ ರೋಹಿತ್ ಶರ್ಮಾ ಒಪ್ಪಿಕೊಂಡಿದ್ದಾರೆ. ಶುಭಮನ್ ಗಿಲ್ ಸದ್ಯ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟರ್ ಇದ್ದು, ಇವರು ತಮ್ಮ ಸ್ಥಾನಕ್ಕೆ ಪೂರಕವಾಗಿಯೇ ಬ್ಯಾಟ್ ಮಾಡಿದ್ದಾರೆ.

ಶುಭ ಭವಿಷ್ಯ
ಚಿಕ್ಕ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ ಆಟಗಾರರ ಪಟ್ಟಿಯಲ್ಲಿ ಈಗ ಶುಭಮನ್ ಗಿಲ್ ಅಗ್ರ ಸ್ಥಾನವನ್ನು ಪಡೆದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಇವರು ಒತ್ತಡದ ಸನ್ನಿವೇಶದಲ್ಲಿ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ಬ್ಯಾಟಿಂಗ್‌ಗೆ ಅನುಕೂಲಕರವಲ್ಲದ ಪಿಚ್‌ನಲ್ಲಿ ಹೇಗೆ ಬ್ಯಾಟ್ ಮಾಡಬೇಕು ಎಂಬುದನ್ನು ಗಿಲ್ ತೋರಿಸಿಕೊಟ್ಟರು. ಒಂದು ಕಡೆ ವಿಕೆಟ್‌ಗಳು ಬೀಳ್ತಾ ಇದ್ದರೂ ಶುಭಮನ್ ಗಿಲ್, ತಮ್ಮ ಮೇಲೆ ಇದ್ದ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಿದರು. ಅಲ್ಲದೆ ತಾವು ಆಡಿದ ಮೊದಲ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೂರಂಕಿ ಮುಟ್ಟಿದರು.
ಎಂಟನೇ ಶತಕ
ಶುಭಮನ್ ಗಿಲ್ ದುಬೈನಲ್ಲಿ ಆಡಿದ ಧಾಟಿ, ಅವರ ಆಟಕ್ಕೆ ಕೊಂಚ ಭಿನ್ನವಾಗಿತ್ತು. ಇವರು 129 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 101 ರನ್ ಬಾರಿಸಿ ಮಿಂಚಿದರು. ಈ ಮೂಲಕ ದಾಖಲೆಯ ಪಟುಕ್ಕೆ ಭರ್ಜರಿ ಎಂಟ್ರಿ ನೀಡಿದರು. ಇದು ಅವರ ಏಕದಿನ ಕ್ರಿಕೆಟ್ ವೃತ್ತಿ ಜೀವನದ 8ನೇ ಶತಕವಾಗಿದೆ.

ಶುಭಮನ್ ಗಿಲ್ ಶತಕ ಬಾರಿಸುತ್ತಿದ್ದಂತೆ ಹೊಸ ದಾಖಲೆ ಬರೆದರು. ಕಡಿಮೆ ಪಂದ್ಯಗಳಲ್ಲಿ ಎಂಟು ಶತಕ ಬಾರಿಸಿದ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಈ ದಾಖಲೆ ಟೀಮ್ ಇಂಡಿಯಾದ ಶಿಖರ್ ಧವನ್ ಹೆಸರಿನಲ್ಲಿತ್ತು.
ಭಾರತದ ಪರ ಕಡಿಮೆ ಪಂದ್ಯಗಳಲ್ಲಿ 8 ಶತಕ ಬಾರಿಸಿದ ಪ್ಲೇಯರ್ಸ್
ಶುಭಮನ್ ಗಿಲ್, 51 ಇನ್ನಿಂಗ್ಸ್
ಶಿಖರ್ ಧವನ್, 57 ಇನ್ನಿಂಗ್ಸ್
ವಿರಾಟ್ ಕೊಹ್ಲಿ, 68 ಇನ್ನಿಂಗ್ಸ್
ಗೌತಮ್ ಗಂಭೀರ್, 98 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್, 111 ಇನ್ನಿಂಗ್ಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications