For Quick Alerts
ALLOW NOTIFICATIONS  
For Daily Alerts
 

Shubman Gill: 50 ರನ್‌ ಬಾರಿಸಿದರೂ ದಾಖಲೆ ಪುಟಕ್ಕೆ ಎಂಟ್ರಿ ಪಡೆದ ಗಿಲ್‌

ಭಾರತ ತಂಡದ ನಾಯಕ ಶುಭಮನ್‌ ಗಿಲ್ ಅವರ ಭರ್ಜರಿ ಫಾರ್ಮ್‌ ತವರಿನಲ್ಲೂ ಮುಂದುವರೆದಿದೆ. ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಥಿರ ಪ್ರದರ್ಶನ ನೀಡಿದ್ದ ಮುನ್ನಡೆಯನ್ನು ಹಿಗ್ಗಿಸಿಕೊಂಡಿದೆ. ಈ ವೇಳೆ ಟೀಮ್ ಇಂಡಿಯಾ ಪರ ಒಟ್ಟು 3 ಬ್ಯಾಟರ್‌ಗಳು ಶತಕ ಸಾಧನೆಯನ್ನು ಮಾಡಿದ್ದಾರೆ. ನಾಯಕ ಶುಭಮನ್ ಗಿಲ್‌ ಸಹ ಅರ್ಧಶತಕ ಬಾರಿಸಿ ಅಬ್ಬರಿಸಿದ್ದಾರೆ. ಶುಭಮನ್ ಗಿಲ್‌ ಈ ಚಿಕ್ಕ ಇನಿಂಗ್ಸ್‌ ಮೂಲಕ ದಾಖಲೆಯ ಪುಟಕ್ಕ ಎಂಟ್ರಿ ನೀಡಿದ್ದಾರೆ.

ಶುಭಮನ್‌ ಗಿಲ್‌ ತಂಡದ ನಾಯಕತ್ವವನ್ನು ವಹಿಸಿಕೊಂಡ ಬಳಿಕ ಅವರ ಬ್ಯಾಟಿಂಗ್ ಧಾಟಿ ಬದಲಾಗಿದೆ. ಇಂಗ್ಲೆಂಡ್‌ ಪವಾಸದಲ್ಲೂ ಇದರ ಛಾಯೆ ಕಂಡು ಬಂದಿತು. ಇಂಗ್ಲೆಂಡ್‌ ನೆಲದಲ್ಲಿ ಅಬ್ಬರಿಸಿದ್ದ ಗಿಲ್‌ 5 ಟೆಸ್ಟ್ ಪಂದ್ಯಗಳಲ್ಲಿ 754 ರನ್‌ ಸಿಡಿಸಿದ್ದರು. ಇವರ ಈ ಅಮೋಘ ಲಯವನ್ನು ವಿಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಮುಂದುವರೆಸಿದ್ದಾರೆ. ಭಾರತದಲ್ಲಿ ನಾಯಕನಾಗಿ ಮೊದಲ ಟೆಸ್ಟ್‌ ಪಂದ್ಯವನ್ನು ಆಡುತ್ತಿರುವ ಗಿಲ್‌ ಮೊದಲ ಅರ್ಧಶತಕ ಬಾರಿಸಿ ಮಿಂಚಿದರು.

Shubman Gill Blazes to 300 Test Fours Showcases Class in New No 4 Role

ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ 161 ರನ್‌ ಮಾಡಿದ್ದಾಗ ಶುಭಮನ್‌ ಗಿಲ್ ಬ್ಯಾಟ್‌ನಿಂದ ಒಂದು ಬೌಂಡರಿ ಮೂಡಿ ಬಂದಿತು. ಈ ಬೌಂಡರಿ ಸಹಾಯದಿಂದ ಗಿಲ್‌ ಟೆಸ್ಟ್‌ ಕ್ರಿಕೆಟ್‌ನಲ್ಲಿ 300 ಬೌಂಡರಿ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಇವರ ಬ್ಯಾಟಿಂಗ್ ಧಾಟಿಯನ್ನು ಕಂಡ ಅಭಿಮಾನಿಗಳು ಐದನೇ ಟೆಸ್ಟ್‌ ಶತಕ ಶುಕ್ರವಾರ ಬರುವ ಸಾಧ್ಯತೆ ಇದೆ ಎಂದೇ ನಂಬಿದ್ದರು. ಆದರೆ ವಿಂಡೀಸ್ ಬೌಲರ್ ರೋಸ್ಟನ್‌ ಚೇಸ್‌ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಸ್ಲಿಪ್‌ಗೆ ಕ್ಯಾಚ್ ನೀಡಿದರು. ನಾಯಕನಾಗಿ 6ನೇ ಪಂದ್ಯ ಆಡುತ್ತಿರುವ ಗಿಲ್ 804 ರನ್‌ ಬಾರಿಸಿದರು. ನಾಯಕನಾಗಿ ಗಿಲ್‌ ಇದೇ ಮೊದಲ ಬಾರಿಗೆ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸುವಲ್ಲಿ ವಿಫಲರಾದರು.

ನಾಲ್ಕನೇ ಸ್ಥಾನಕ್ಕೆ ನ್ಯಾಯ

ವಿರಾಟ್‌ ಕೊಹ್ಲಿ ಅವರಿಂದ ತೆರವಾದ ನಾಲ್ಕನೇ ಕ್ರಮಾಂಕದಲ್ಲಿ ಆಡುವುದು ಯಾರು ಎಂಬ ಪ್ರಶ್ನೆಗಳು ಉದ್ಭವಿಸಿದ್ದವು. ಆಗ ಗಿಲ್ ತಮ್ಮ ಮೂರನೇ ಸ್ಥಾನದಿಂದ ಒಂದು ಸ್ಥಾನ ಹಿಂದೆ ಬಂದು ಬ್ಯಾಟ್ ಮಾಡಿದರು. ಈ ಮೂಲಕ ವಿರಾಟ್ ಕೊಹ್ಲಿ ಅವರ ಸ್ಥಾನ ತುಂಬ ಕ್ಷಮತೆ ತಮ್ಮಲ್ಲಿ ಇದೆ ಎಂಬುದನ್ನು ಸಾಬೀತು ಪಡಿಸಿದರು. ವಿರಾಟ್‌ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಇದೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಸೈ ಎನಿಸಿಕೊಂಡಿದ್ದಾರೆ.

Shubman Gill Blazes to 300 Test Fours Showcases Class in New No 4 Role

ಪ್ರಸಕ್ತ ವರ್ಷ ಶುಭಮನ್‌ ಗಿಲ್ ಅವರಿಗೆ ವಿಶೇಷವಾಗದೆ. ಇವರು ಈ ವರ್ಷದಲ್ಲಿ ಒಟ್ಟಾರೆ 837 ರನ್‌ ಸಿಡಿಸಿದ್ದಾರೆ. ಅಲ್ಲದೆ ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ ಸೈಕಲ್‌ನ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎಂಬ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಗಿಲ್‌ ಮತ್ತೆ ಯಾವಾ ಯಾವ ದಾಖಲೆಯನ್ನು ಬರೆಯುತ್ತಾರೋ ಕಾದು ನೋಡಬೇಕಿದೆ.

Story first published: Friday, October 3, 2025, 20:00 [IST]
Other articles published on Oct 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+