ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ 10 ವರ್ಷಗಳ ದಾಖಲೆ ಮುರಿದ ಶುಬ್‌ಮಾನ್ ಗಿಲ್

ರಾಂಚಿ, ನವೆಂಬರ್ 4: ರಾಂಚಿಯ ಜೆಎಸ್‌ಸಿಎ ಇಂಟರ್ ನ್ಯಾಷನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ಸೋಮವಾರ (ನವೆಂಬರ್ 4) ನಡೆದ 47ನೇ ದೇವಧರ್ ಟ್ರೋಫಿ, ಭಾರತ 'ಸಿ' ಮತ್ತು ಭಾರತ 'ಬಿ' ನಡುವಿನ ಪಂದ್ಯದಲ್ಲಿ ಯುವ ಬ್ಯಾಟ್ಸ್‌ಮನ್ ಶುಬ್‌ಮಾನ್ ಗಿಲ್ ದಾಖಲೆ ನಿರ್ಮಿಸಿದ್ದಾರೆ.
ಭಾರತ 'ಸಿ' vs ಭಾರತ 'ಬಿ' ನಡುವಿನ ಫೈನಲ್ ಪಂದ್ಯದಲ್ಲಿ ಗಿಲ್ ಮೈದಾನಕ್ಕೆ ಕಾಲಿರಿಸುತ್ತಲೇ ಅವರ ಹೆಸರು ದಾಖಲೆ ಪುಸ್ತಕದ ಪುಟ ಸೇರಿದೆ. ಅಂದ್ಹಾಗೆ ಈ ಪಂದ್ಯದಲ್ಲಿ ಗಿಲ್, ಟೀಮ್ ಇಂಡಿಯಾದ ಈಗಿನ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.
ದೇವಧರ್ ಟ್ರೋಫಿ ಫೈನಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಭಾರತದ ಅತೀ ಕಿರಿಯ ಆಟಗಾರನಾಗಿ ಗಿಲ್ ಇತಿಹಾಸ ನಿರ್ಮಿಸಿದ್ದಾರೆ.

10 ವರ್ಷಗಳ ದಾಖಲೆ ಬದಿಗೆ
ದೇವಧರ್ ಟ್ರೋಫಿ ಫೈನಲ್‌ನಲ್ಲಿ ತಂಡದ ನಾಯಕತ್ವ ವಹಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. 2009-10ರಲ್ಲಿ ಕೊಹ್ಲಿ, ನಾರ್ತ್ ಝೋನ್ ತಂಡವನ್ನು ಮುನ್ನಡೆಸಿದ್ದರು. ಆಗ ಅವರಿಗೆ 21 ವರ್ಷ, 124 ದಿನ ವಯಸ್ಸಾಗಿತ್ತು. ಆದರೆ ಭಾರತ 'ಸಿ' ತಂಡವನ್ನು ಮುನ್ನಡೆಸಿದ ಗಿಲ್‌ಗೀಗ ಕೇವಲ 20 ವರ್ಷ, 57 ದಿನ ವಯಸ್ಸು.

ಪಟ್ಟಿಯಲ್ಲಿ ಉನ್ಮುಕ್ತ್ ಚಂದ್
ದೇವಧರ್ ಟ್ರೋಫಿ ಫೈನಲ್ ನಲ್ಲಿ ತಂಡ ಮುನ್ನಡೆಸಿದ ಭಾರತದ ಕಿರಿಯ ಆಟಗಾರರ ಸಾಲಿನಲ್ಲಿ ಉನ್ಮುಕ್ತ್ ಚಂದ್-ಭಾರತ ಬಿ (22 ವರ್ಷ, 310 ದಿನ), ಶ್ರೇಯಸ್ ಐಯ್ಯರ್-ಭಾರತ ಬಿ (23 ವರ್ಷ, 92 ದಿನ), ಮನೋಜ್ ತಿವಾರಿ-ಈಸ್ಟ್ ಝೋನ್ (23 ವರ್ಷ, 124 ದಿನ), ಕಪಿಲ್ ದೇವ್-ನಾರ್ತ್ ಝೋನ್ (23 ವರ್ಷ, 305 ದಿನ) ಇದ್ದಾರೆ.

ಭಾರತ 'ಬಿ'ಗೆ ಜಯ
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಬಿ ತಂಡ, ಯಶಸ್ವಿ ಜೈಸ್ವಾಲ್ 54, ಕೇದಾರ್ ಜಾಧವ್ 86, ನಿತೀಶ್ ರಾಣಾ 20, ವಿಜಯ್ ಶಂಕರ್ 45, ಕೃಷ್ಣಪ್ಪ ಗೌತಮ್ 35 ರನ್ ಸೇರ್ಪಡೆಯೊಂದಿಗೆ 50 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 283 ರನ್ ಬಾರಿಸಿತ್ತು.

ಕೇವಲ 1 ರನ್
ಗಿಲ್ ನಾಯಕತ್ವ ವಹಿಸಿ ದಾಖಲೆ ನಿರ್ಮಿಸಿದರಾದರೂ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಸಾಧನೆಯೇನೂ ತೋರರಿಲ್ಲ. ಕೇವಲ 1 ರನ್ ಗಳಿಸಿ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಭಾರತ ಸಿ ತಂಡ, ಪ್ರಿಯಮ್ ಗರ್ಗ್ 74, ಮಯಾಂಕ್ ಅಗರ್ವಾಲ್ 28, ಅಕ್ಸರ್ ಪಟೇಲ್ 38, ಜಲಜ್ ಸಕ್ಸೇನ್ 37, ಮಯಾಂಕ್ ಮಾರ್ಕಂಡೆ 27 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ಕಳೆದು 232 ರನ್ ಮಾಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications