ಗುಜರಾತ್ ಟೈಟಾನ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ಅಲ್ಲದೆ ಎರಡನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರುವ ಕನಸು ಕಾಣುತ್ತಿದೆ. ಇದಕ್ಕೆ ಕಾರಣ ಸಂಘಟಿತ ಆಟದ ಪ್ರದರ್ಶನ. ಗುಜರಾತ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಈ ವೇಳೆ ಸ್ಟಾರ್‌ಗಳು ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ಎದುರಾಳಿ ಆಟಗಾರರನ್ನು ಕಾಡಬಲ್ಲರು. ಪ್ರಸಕ್ತ ಋತುವಿನಲ್ಲಿ ಗುಜರಾತ್ 10 ಪಂದ್ಯಗಳಲ್ಲಿ 7 ಗೆಲುವು ದಾಖಲಿಸಿದ್ದು, ಅಗ್ರ ಸ್ಥಾನದ ಪ್ರಭಲ ಆಕಾಂಕ್ಷಿ ಎಂದು ಪರಿಗಣಿಸಲಾಗುತ್ತಿದೆ. ಈ ತಂಡವನ್ನು ಶುಭಮನ್ ಗಿಲ್ ಮುನ್ನಡೆಸುತ್ತಿದ್ದಾರೆ.
ಮುಂಬೈ ವಿರುದ್ಧ ಪಂದ್ಯದಲ್ಲಿ ಗುಜರಾತ್ ನಾಯಕ ಶುಭಮನ್ ಗಿಲ್ ದೊಡ್ಡ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ. ಪ್ರಸಕ್ತ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡ್ತಾ ಇರುವ ಶುಭಮನ್ ಗಿಲ್ ದೊಡ್ಡ ಸಾಧನೆ ಮಾಡುವ ಹಂಬಲದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಮಂಗಳವಾ ವಾಂಖೇಡೆ ಅಂಗಳದಲ್ಲಿ ನಡೆಯುವ ಪಂದ್ಯದಲ್ಲಿ ಗಿಲ್ಲ 54 ರನ್ ಸಿಡಿಸಿದ್ದೇ ಆದಲ್ಲಿ ದೊಡ್ಡ ಸಾಧನೆಯನ್ನು ಮಾಡಬಹುದಾಗಿದೆ.

ಟಿ20 ಫಾರ್ಮೆಟ್‌ನಲ್ಲಿ ಶುಭಮನ್ ಗಿಲ್ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಈ ವರೆಗೆ ಆಡಿದ 155 ಪಂದ್ಯಗಳ 152 ಇನಿಂಗ್ಸ್‌ಗಳಲ್ಲಿ 37ರ ಸರಾಸರಿಯಲ್ಲಿ ಒಟ್ಟು 4936 ರನ್ ಕಲೆ ಹಾಕಿದ್ದಾರೆ. ಈ ವೇಳೆ 6 ಶತಕ ಹಾಗೂ 31 ಅರ್ಧಶತಕಗಳು ಸೇರಿವೆ. ಮುಂಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗಿಲ್ 54 ರನ್ ಬಾರಿಸಿದರೆ 5 ಸಾವಿರ ರನ್‌ಗಳ ಮುಟ್ಟುತ್ತಾರೆ. ಇನ್ನು ಈ ದಾಖಲೆಯನ್ನು ಮಂಗಳವಾರ ಶುಭಮನ್ ಗಿಲ್ ನಿರ್ಮಿಸಿದರೆ, ಟಿ20 ಕ್ರಿಕೆಟ್‌ನಲ್ಲಿ 5 ಸಾವಿರ ರನ್ ಕಲೆ ಹಾಕಿದ ಭಾರತದ 18ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಇನ್ನು ಭಾರತದ ಪರ ಹೆಚ್ಚು ರನ್ ಗಳಿಸಿದವರ ಲೀಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಮುಂಚೂಣಿಯಲ್ಲಿದ್ದಾರೆ. ಇವರು ಆಡಿದ 410 ಪಂದ್ಯಗಳಲ್ಲಿ 13391 ರನ್ ಗಳಿಸಿದ್ದು, ಈ ವೇಳೆ ಇವರ ಸರಾಸರಿ 41.97 ಆಗಿದೆ.
ಶುಭಮನ್ ಗಿಲ್ ಟೀಮ್ ಇಂಡಿಯಾ ಹಾಗೂ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಆಟಗಾರ. ಇವರ ಸ್ಥಿರ ಬ್ಯಾಟಿಂಗ್ ಪ್ರದರ್ಶನದ ಫಲವಾಗಿಯೇ ಗುಜರಾತ್ ತಂಡ ಪ್ಲೇ ಆಫ್ ಪ್ರವೇಶಿಸಲು ಹತ್ತಿರದಲ್ಲಿ ನಿಂತಿದೆ.
18ನೇ ಆವೃತ್ತಿಯಲ್ಲಿ ಶುಭಮನ್ ಗಿಲ್ ಆಡಿದ 10 ಪಂದ್ಯಗಳಲ್ಲಿ 51.66ರ ಸರಾಸರಿಯಲ್ಲಿ 465 ರನ್ ಕಲೆ ಹಾಕಿದ್ದಾರೆ. ಈ ವೇಳೆ 5 ಅರ್ಧಶತಕಗಳು ಸಹ ಮೂಡಿ ಬಂದಿವೆ. ಇವರು ಸಹ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಮುಂಬೈ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನವನ್ನು ನೀಡಿದ್ದೇ ಆದಲ್ಲಿ ಇವರ ತಲೆಗೆ ಮೇಲೆ ಆರೆಂಜ್ ಕ್ಯಾಪ್ ಸಹ ಸೇರಲಿದೆ. ಮುಂಬೈ ವಿರುದ್ಧದ ಪಂದ್ಯ ಇದೇ ಕಾರಣಕ್ಕೆ ಎಲ್ಲರ ಗಮನ ಸೆಳೆದಿದೆ.