ಕೆಕೆಆರ್ ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಲಿದೆ: ಶುಭ್‌ಮನ್ ಗಿಲ್ ವಿಶ್ವಾಸ

ಸೋಮವಾರ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸೋತ ಬಳಿಕ ಕೊಲ್ಕತ್ತಾ ನೈಟ್ ರೈಡರ್ಸ್ ಪ್ಲೇ ಆಫ್ ಹಂತಕ್ಕೇರುವ ಹಾದಿ ಸ್ವಲ್ಪ ದುರ್ಗಮಗೊಂಡಿದೆ. ಆದರೆ ಪಂಜಾಬ್ ವಿರುದ್ಧ ಸೋತರೂ ತಾವು ಪ್ಲೇ ಆಫ್‌ಗೆ ತಲುಪುತ್ತೇವೆ ಎಂದು ಕೆಕೆಆರ್ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮೊದಲು ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಕೆಕೆಆರ್, ಸೋಲಿನ ಬಳಿಕ ಐದನೇ ಸ್ಥಾನಕ್ಕೆ ಜಾರಿದೆ. ಸಮನಾದ 12 ಅಂಕಗಳನ್ನು ಹೊಂದಿದ್ದರೂ ಕಿಂಗ್ಸ್ ಇಲೆವೆನ್ ಪಂಜಾಬ್ ನೆಟ್ ರನ್‌ರೇಟ್ ಆಧಾರದಲ್ಲಿ ನಾಲ್ಕನೇ ಸ್ಥಾನಕ್ಕೆ ತಲುಪಿದೆ.
ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧ ಶುಭ್‌ಮನ್ ಗಿಲ್ 45 ಎಸೆತಗಳಲ್ಲಿ 57 ರನ್ ಗಳಿಸಿದರೆ, ನಾಯಕ ಇಯಾನ್ ಮಾರ್ಗನ್ 25 ಎಸೆತಗಳಲ್ಲಿ 40 ಮತ್ತು ಲ್ಯುಕಿ ಫರ್ಗುಸನ್ 13 ಎಸೆತಗಳಲ್ಲಿ ಔಟಾಗದೆ 24 ರನ್ ಗಳಿಸಿದರು. ಆದರೆ ಈ ಮೂವರನ್ನು ಹೊರತುಪಡಿಸಿ, ಉಳಿದ ಬ್ಯಾಟ್ಸ್‌ಮನ್‌ಗಳು ಎರಡು ಅಂಕಿಗಳನ್ನು ಗಳಿಸುವಲ್ಲಿ ವಿಫಲರಾಗಿದ್ದಾರೆ.
"ನಾವು ಇನ್ನೂ ಎರಡು ಪಂದ್ಯಗಳನ್ನು ಹೊಂದಿದ್ದೇವೆ ಮತ್ತು ನಾವು ಪ್ಲೇಆಫ್‌ಗಳಿಗೆ ಅರ್ಹತೆ ಪಡೆಯುತ್ತೇವೆ ಎಂದು ನಮಗೆ ಸಾಕಷ್ಟು ವಿಶ್ವಾಸವಿದೆ" ಎಂದು ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಗಿಲ್ ಹೇಳಿದರು.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯದ ನಂತರ ಕೆಕೆಆರ್ ಮುಂದಿನ ಅಕ್ಟೋಬರ್ 29 ರಂದು ಸಿಎಸ್‌ಕೆ ಮತ್ತು ನವೆಂಬರ್ 1 ರಂದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications