Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shubman Gill: ಕೆಕೆಆರ್ ಬೌಲರ್‌ಗಳನ್ನು ದಂಡಿಸಿದ ಶುಭ್‌ಮನ್‌ ಗಿಲ್‌: ಐಪಿಎಲ್‌ನಲ್ಲಿ ದಾಖಲೆ

ಇಂಡಿಯನ್ ಪ್ರೀಮಿಯರ್‌ ಲೀಗ್‌ನಲ್ಲಿ ಗುಜರಾತ್‌ ಟೈಟನ್ಸ್ ಕಮಾಲ್ ಪ್ರದರ್ಶನ ನೀಡುತ್ತಿದೆ. ಈ ತಂಡದಲ್ಲಿ ಭರವಸೆಯ ಆಟಗಾರರ ದಂಡೇ ಇದೆ. ಈ ತಂಡದಲ್ಲಿರುವ ಆಟಗಾರರು ತಮ್ಮ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಅರಿತು ಕೊಂಡಿದ್ದು ತಂಡದ ಗೆಲುವಿನಲ್ಲಿ ಮಿಂಚು ಹರಿಸುತ್ತಿದ್ದಾರೆ. ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ತವರಿನಲ್ಲಿ ಸೋಲಿಸಿದ ಗುಜರಾತ್‌ ಟೈಟನ್ಸ್‌ ಒಂದು ಕಾಲು ಪ್ಲೇ ಆಫ್‌ಗೆ ಇಟ್ಟು ಆಗಿದೆ. ಈ ಗೆಲುವಿನಲ್ಲಿ ತಂಡದ ನಾಯಕ ಶುಭಮನ್‌ ಗಿಲ್‌ ಮಿಂಚಿದ್ದಾರೆ.

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡದ ಆರಂಭ ಸೊಗಸಾಗಿತ್ತು. ಈ ವೇಳೆ ಸಾಯಿ ಸುದರ್ಶನ್ ಹಾಗೂ ನಾಯಕ ಶೂಭಮನ್‌ ಗಿಲ್ ತಂಡಕ್ಕೆ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ ತಂಡಕ್ಕೆ ಶತಕದ ಜೊತೆಯಾಟವನ್ನು ನೀಡಿತು. ಈ ವೇಳೆ ಸಾಯಿ ಸುದರ್ಶನ್‌ ತಮ್ಮ ಅಮೋಘ ಫಾರ್ಮ್‌ ಮುಂದುವರೆಸಿದರು. ಇವರಿಗೆ ನಾಯಕ ಶುಭ್‌ಮನ್‌ ಗಿಲ್ ಉತ್ತಮ ಸಾಥ್ ನೀಡಿದರು.

Shubman Gill s Heroics Put Gujarat Titans a Step Away from Playoffs

ಪ್ರಸಕ್ತ ಐಪಿಎಲ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಶುಭಮನ್‌ ಗಿಲ್‌ ತಮ್ಮ ಕ್ಲಾಸಿಕ್ ಬ್ಯಾಟಿಂಗ್‌ ಕೆಕೆಆರ್‌ ವಿರುದ್ಧವೂ ಮುಂದುವರೆಸಿದರು. ಆರಂಭದಲ್ಲಿ ಕೊಂಚ ತಾಳ್ಮೆಯಿಂದ ಆಡಿದ ಶುಭಮನ್‌ ಗಿಲ್‌ ಸೆಟ್‌ ಆಗುತ್ತಿದ್ದಂತೆ ಗೇರ್ ಶಿಫ್ಟ್ ಮಾಡಿದರು. ಇಲ್ಲಿಂದಲೇ ಗುಜರಾತ್‌ ದೊಡ್ಡ ಮೊತ್ತದ ಕನಸು ಕಾಣಲು ಆರಂಭಿಸಿತು. ಇವರು 10 ರನ್‌ಗಳಿಂದ ಶತಕ ವಂಚಿತರಾದರು. ಆದರೆ ಉತ್ತಮ ಇನಿಂಗ್ಸ್ ಕಟ್ಟಿದರು. ಶುಭಮನ್‌ ಗಿಲ್‌ 55 ಎಸೆತಗಳಲ್ಲಿ 10 ಬೌಂಡರಿ, 3 ಮುಗಿಲೆತ್ತರದ ಸಿಕ್ಸರ್‌ ಸಹಾಯದಿಂದ 90 ರನ್‌ ಸಿಡಿಸಿ ಔಟ್ ಆದರು.

ಕೆಕೆಆರ್‌ ಬೌಲರ್‌ಗಳ ವಿರುದ್ಧ ಗಿಲ್ ಸಾಧನೆ
ವೈಭವ್ ಆರೋರ್‌, 11 ಎಸೆತ, 13 ರನ್‌
ಮೋಯಿನ್ ಅಲಿ, 11 ಎಸೆತ, 20 ರನ್‌
ಹರ್ಷಿತ್ ರಾಣಾ, 06 ಎಸೆತ, 12 ರನ್‌
ವರುಣ್ ಚಕ್ರವರ್ತಿ, 13 ಎಸೆತ, 22 ರನ್‌
ಸುನಿಲ್ ನರೈನ್‌, 13 ಎಸೆತ, 22 ರನ್‌
ಆಂಡ್ರೆ ರಸೆಲ್‌, 1 ಎಸೆತ, 1 ರನ್‌

ಶುಭಮನ್‌ ಗಿಲ್ ದಾಖಲೆ

ಶುಭಮನ್‌ ಗಿಲ್‌ ಈ ಆವೃತ್ತಿಯ ಐಪಿಎಲ್‌ನಲ್ಲೂ 300 ರನ್‌ಗಳ ಗುರಿಯನ್ನು ಮುಟ್ಟಿದರು. ಈ ಮೂಲಕ ಐಪಿಎಲ್‌ನಲ್ಲಿ ಶುಭ್‌ಮನ್‌ ಗಿಲ್‌ 3500 ರನ್‌ಗಳನ್ನು ತಲುಪಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೊದಲು 26 ವರ್ಷ ಆಗುವವರೆಗೆ ಯಾವುದೇ ಆಟಗಾರ ಐಪಿಎಲ್‌ನಲ್ಲಿ 3000 ರನ್‌ ಗುರಿ ಮುಟ್ಟಿರಲಿಲ್ಲ. ಗಿಲ್ 108 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಕೆಎಲ್ ರಾಹುಲ್ (91 ಇನ್ನಿಂಗ್ಸ್) ಬಳಿಕ ಈ ದಾಖಲೆಯನ್ನು ವೇಗವಾಗಿ ತಲುಪಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾದರು.

Story first published: Tuesday, April 22, 2025, 0:46 [IST]
Other articles published on Apr 22, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+