Shubman Gill: ಇಂಗ್ಲೆಂಡ್ ವಿರುದ್ಧ ಹೇಗಿದೆ ಶುಭಮನ್ ಗಿಲ್ ಸಾಧನೆ? ಇಲ್ಲಿದೆ ಅಂಕಿ ಅಂಶ
ಐಪಿಎಲ್ ಮುಗಿದ ಬಳಿಕ ಬಹು ನಿರೀಕ್ಷಿತ ಇಂಗ್ಲೆಂಡ್ ಪ್ರವಾಸ ಆರಂಭವಾಗುತ್ತದೆ. 2025-27ನೇ ಋತುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ಗಳು ಸಹ ಇಲ್ಲಿಂದ ಆರಂಭವಾಗುತ್ತವೆ. ಈ ಬಾರಿ ಇಂಗ್ಲೆಂಡ್ ಯಂಗ್ ಇಂಡಿಯಾ ಪ್ರವಾಸವನ್ನು ಬೆಳಸಲಿದೆ. ಅನುಭವಿಗಳು ಇಲ್ಲದ ತಂಡ, ಬೌನ್ಸಿ ಟ್ರ್ಯಾಕ್ ಸವಾಲು ಎದುರಿಸಲಿದೆ. ಈ ವೇಳೆ ತಂಡವನ್ನು ಶುಭಮನ್ ಗಿಲ್ ಮುನ್ನಡೆಸಲಿದ್ದಾರೆ. ಇವರು ತಮ್ಮಲ್ಲಿ ನಾಯಕತ್ವದ ಗುಣಗಳು ಹೆಚ್ಚಿವೆ ಎಂಬುದನ್ನು ಐಪಿಎಲ್ ವೇಳೆ ಸಾಬೀತು ಪಡಿಸಿದ್ದಾರೆ.
ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಆರಂಭಿಸುವ ಮುನ್ನವೇ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದರು. ಇದರಿಂದ ತಂಡದ ಮೇಲೆ ಹೆಚ್ಚಿನ ಒತ್ತಡ ಬೀಳಲಿದೆ. ಈ ಟೀಮ್ ಹೇಗೆ ಪ್ರದರ್ಶನ ನೀಡುತ್ತದೆ ಎಂಬುದನ್ನು ತಿಳಿಯಲು ಎರಡು ಟೆಸ್ಟ್ ಸರಣಿಗಳು ಬೇಕಾಗುತ್ತವೆ. ಇನ್ನು ಪ್ರವಾಸ ಬೆಳೆಸುತ್ತಿರುವ ತಂಡದಲ್ಲಿ ರವೀಂದ್ರ ಜಡೇಜಾ, ಜಸ್ಪ್ರಿತ್ ಬುಮ್ರಾ, ಕೆಎಲ್ ರಾಹುಲ್ ಅನುಭವಿ ಆಟಗಾರರು ಆಗಿದ್ದಾರೆ. ಉಳಿದಂತೆ ಎಲ್ಲ ಆಟಗಾರರು ಯುವಕರೇ ಆಗಿದ್ದಾರೆ.

ಟೀಮ್ ಇಂಡಿಯಾದ ನಾಯಕತ್ವವನ್ನು ಶುಭಮನ್ ಗಿಲ್ ಪಡೆಯುತ್ತಿದ್ದಂತೆ ಸಾಲು ಸಾಲು ಸವಾಲುಗಳು ಅವರ ಮುಂದೆ ನಿಲ್ಲಲಿವೆ. ಶುಭಮನ್ ಗಿಲ್ ಯಾವ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ, ಅನುಭವಿಗಳನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಪ್ರಶ್ನೆಗಳು ಇದ್ದೇ ಇವೆ. ಇವರು ರೋಹಿತ್ ಶರ್ಮಾ ಅವರಿಂದ ತೆರವಾದ ನಾಯಕತ್ವ ಸ್ಥಾನವನ್ನು ತುಂಬುವುದಲ್ಲದೆ, ವಿರಾಟ್ ಅವರಿಂದ ತೆರವಾದ ನಾಲ್ಕನೇ ಸ್ಥಾನವನ್ನು ಸಹ ತುಂಬ ಕನಸಿನಲ್ಲಿದ್ದಾರೆ. ಹೀಗಾಗಿ ಇವರ ಮೇಲೆ ಡಬಲ್ ಜವಾಬ್ದಾರಿ ಬಿದ್ದಿದೆ.
ಇಂಗ್ಲೆಂಡ್ ವಿರುದ್ಧ ಹೇಗಿದೆ ಗಿಲ್ ಪ್ರದರ್ಶನ?
25 ವರ್ಷದ ಯುವ ಆಟಗಾರ ಶುಭಮನ್ ಗಿಲ್ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ 35 ಪಂದ್ಯಗಳನ್ನು ಆಡಿದ್ದು 35ರ ಸರಾಸರಿಯಲ್ಲಿ 1893 ರನ್ ಕಲೆ ಹಾಕಿದ್ದಾರೆ. ಈ ವೇಳೆ 5 ಶತಕ ಹಾಗೂ 7 ಅರ್ಧಶತಕಗಳು ಮೂಡಿಬಂದಿವೆ. ಇಂಗ್ಲೆಂಡ್ ವಿರುದ್ಧ ಗಿಲ್ ಸ್ಥಿರ ಪ್ರದರ್ಶನ ನೀಡಿರುವ ಆಟಗಾರ. ಇವರು ಆಂಗ್ಲರ ವಿರುದ್ಧ 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು 32ರ ಸರಾಸರಿಯಲ್ಲಿ 592 ರನ್ ಸಿಡಿಸಿದ್ದಾರೆ. ಈ ವೇಳೆ 2 ಶತಕ ಹಾಗೂ 3 ಅರ್ಧಶತಕಗಳನ್ನು ಸಹ ಸಿಡಿಸಿದ್ದಾರೆ.

ಗಿಲ್ ಇಂಗ್ಲೆಂಡ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇವರು ಆಡಿರುವ 3 ಪಂದ್ಯಗಳಲ್ಲಿ 14ರ ಸರಾಸರಿಯಲ್ಲಿ 28 ರನ್ ಕಲೆ ಹಾಕಿದ್ದಾರೆ. ಈ ವೇಳೆ ಯಾವುದೇ ಅರ್ಧಶತಕಗಳು ಮೂಡಿಬಂದಿಲ್ಲ. ಗಿಲ್ ಅವರ ಬ್ಯಾಟ್ ಏಷ್ಯಾ ಖಂಡದಲ್ಲಿ ಅಬ್ಬರಿಸಿದರೆ, ಬೌನ್ಸಿ ಪಿಚ್‌ಗಳಲ್ಲಿ ಮೌನವಾಗಿದೆ. ತಮ್ಮ ಅಂಕಿ ಅಂಶಗಳನ್ನು ಸುಧಾರಿಸಿಕೊಳ್ಳಲು ಗಿಲ್ ಅವರಿಗೆ ಈಗ ಉತ್ತಮ ಅವಕಾಶ. ಇಂಗ್ಲೆಂಡ್ ಪ್ರವಾಸದಲ್ಲಿ ಗಿಲ್ ರನ್‌ಗಳನ್ನು ಕಲೆ ಹಾಕಿ ತಂಡದ ಗೆಲುವಿನಲ್ಲಿ ಮಿಂಚಲಿ ಎಂಬುದೇ ಅಭಿಮಾನಿಗಳ ಆಶಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications