For Quick Alerts
ALLOW NOTIFICATIONS  
For Daily Alerts
 

Shubman Gill: ಟಾಸ್‌ ಸೋತು ಕಪಿಲ್‌ ದೇವ್ ದಾಖಲೆ ಅಳಿಸಿದ ಶುಭಮನ್‌ ಗಿಲ್‌

ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಣ ಮೊದಲ ಟೆಸ್ಟ್‌ ಪಂದ್ಯ ಅಹಮದಾಬಾದ್‌ನಲ್ಲಿ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ವಿಂಡೀಸ್‌ ಮೊದಲು ಬ್ಯಾಟಿಂಗ್ ಮಾಡಲು ಮುಂದಾಗಿದೆ. ಇದೇ ಮೊದಲ ಬಾರಿಗೆ ಭಾರತ ತಂಡವನ್ನು ಶುಭಮನ್‌ ಗಿಲ್‌ ತವರಿನಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ ಇವರ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ. ಇನ್ನು ಈ ಪಂದ್ಯದಲ್ಲಿ ಟಾಸ್‌ ಸೋಲುವ ಮೂಲಕ ಶುಭಮನ್‌ ಗಿಲ್‌ ವಿಶೇಷ ದಾಖಲೆ ಬರೆದಿದ್ದಾರೆ.

ನಾಯಕನಾಗಿ ಶುಭಮನ್‌ ಗಿಲ್‌ ಇದು ಎರಡನೇ ಸರಣಿ. ಇದಕ್ಕೂ ಮೊದಲ ಇವರು ಇಂಗ್ಲೆಂಡ್‌ ಪ್ರವಾಸದಲ್ಲಿ ನಡೆದಿದ್ದ ಆಂಡರ್ಸನ್‌, ತೆಂಡೂಲ್ಕರ್ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಈ ಸರಣಿಯಲ್ಲಿ ನಡೆದ 5 ಟೆಸ್ಟ್‌ ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 2-2 ರಿಂದ ಸಮಬಲ ಸಾಧಿಸಿತ್ತು. ಈ ಸರಣಿಯಲ್ಲೂ ಗಿಲ್‌ ಒಂದೇ ಒಂದು ಟಾಸ್ ಗೆಲ್ಲದೇ ನಿರಾಸೆ ಅನುಭವಿಸಿದ್ದರು. ಈಗ ತಮ್ಮ ಹಳೆಯ ಚಾಳಿಯನ್ನು ಭಾರತದಲ್ಲೂ ಮುಂದುವರೆಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಗಿಲ್‌ ಟಾಸ್‌ ಸೋಲುತ್ತಿದ್ದಂತೆ ಬೇಡವಾದ ದಾಖಲೆಗೆ ತಮ್ಮ ಹೆಸರನ್ನು ನಮೂದಿಸಿದರು.

Shubman Gill Sets Unwanted Record First Indian Captain to Lose 6 Consecutive Test Tosses

ಶುಭಮನ್‌ ಗಿಲ್‌ ನಾಯಕನಾಗಿ ತಂಡವನ್ನು ಮುನ್ನಡೆಸಿದ ಮೊದಲ ಆರು ಪಂದ್ಯಗಳಲ್ಲಿ ಟಾಸ್‌ ಸೋತ ಬೇಡವಾದ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ಈ ದಾಖಲೆ ಟೀಮ್ ಇಂಡಿಯಾ ದಿಗ್ಗಜ ನಾಯಕ ಕಪಿಲ್ ದೇವ್ ಹೊಂದಿದ್ದರು. ಇವರು 1983ರ ತಮ್ಮ ನಾಯಕತ್ವದ ಆರಂಭದಲ್ಲಿ ಸತತ ಐದು ಟೆಸ್ಟ್‌ ಪಂದ್ಯಗಳಲ್ಲಿ ಟಾಸ್‌ ಸೋತು ನಿರಾಸೆ ಅನುಭವಿಸಿದ್ದರು. ಈಗ ಈ ದಾಖಲೆಯನ್ನು ಶುಭಮನ್‌ ಗಿಲ್‌ ಮುರಿದಿದ್ದಾರೆ. ಸದ್ಯ ಇವರು ನ್ಯೂಜಿಲೆಂಡ್ ತಂಡದ ನಾಯಕ ಟಾಮ್‌ ಲಾಥಮ್‌ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಲಾಥಮ್‌ ಸಹ ತಾವು ಮುನ್ನಡೆಸಿದ 6 ಟೆಸ್ಟ್‌ ಪಂದ್ಯಗಳಲ್ಲಿ ಟಾಸ್‌ ಸೋತಿದ್ದರು.

ಇನ್ನು 2 ಪಂದ್ಯ...

ಶುಭಮನ್‌ ಗಿಲ್‌ ಅವರು ಈ ಸರಣಿಯಲ್ಲಿ ಇನ್ನು ಒಂದು ಟೆಸ್ಟ್ ಪಂದ್ಯವನ್ನು ಆಡಲಿದ್ದಾರೆ. ಈ ಟೆಸ್ಟ್ ಸೇರಿದಂತೆ ಇನ್ನು ಎರಡು ಪಂದ್ಯಗಳಲ್ಲಿ ಗಿಲ್‌ ಟಾಸ್‌ ಸೋತಿದ್ದೇ ಆದಲ್ಲಿ ಮತ್ತೊಂದು ದಾಖಲೆಯನ್ನು ನಿರ್ಮಿಸಲಿದ್ದಾರೆ. ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳಲ್ಲಿ ಟಾಸ್ ಸೋತರೆ ಮೊದಲ ನಾಯಕ ಎಂಬ ಬೇಡವಾದ ದಾಖಲೆ ಶುಭಮನ್‌ ಪಾಲಾಗುತ್ತದೆ.

ಟೀಮ್ ಇಂಡಿಯಾ ಮೊದಲ ಟೆಸ್ಟ್‌ ಪಂದ್ಯಕ್ಕೆ ಇಬ್ಬರು ವೇಗಿಗಳು ಹಾಗೂ ಮೂವರು ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕೆ ಇಳಿದಿದ್ದಾರೆ. ಕರ್ನಾಟಕದಿಂದ ಕೆಎಲ್ ರಾಹುಲ್ ಅವರನ್ನು ಬಿಟ್ಟರೆ ಬೇರೆ ಯಾರಿಗೂ ಅವಕಾಶ ಇಲ್ಲ. ಪ್ರಸಿದ್ಧ ಕೃಷ್ಣಾ ಹಾಗೂ ದೇವದತ್ ಪಡಿಕ್ಕಲ್ ಬೆಂಚ್ ಕಾಯುತ್ತಿದ್ದಾರೆ.

ಮೊದಲ ಟೆಸ್ಟ್‌ಗೆ ಭಾರತ ತಂಡ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

Story first published: Thursday, October 2, 2025, 12:32 [IST]
Other articles published on Oct 2, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+