Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Shubman Gill: ನಾಯಕನಾಗಿ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಶತಕ ಬಾರಿಸಿದ ಗಿಲ್‌

ಭಾರತ ಹಾಗೂ ಅಫ್ಘಾನಿಸ್ತಾನ ನಡುವಣ ಎರಡನೇ ಏಕದಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಸೋತರೂ ಟೀಮ್ ಇಂಡಿಯಾ ಮೊದಲು ಬ್ಯಾಟ್ ಮಾಡುವ ಅವಕಾಶವನ್ನು ಪಡೆದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಶುಭಮನ್‌ ಗಿಲ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದ್ದಾರೆ. ಬುಧವಾರ ನಡೆದ ಪಂದ್ಯದಲ್ಲಿ ಶುಭಮನ್‌ ಗಿಲ್ ಕ್ಲಾಸ್ ಬ್ಯಾಟಿಂಗ್ ನಡೆಸಿ, ಅಫ್ಘಾನಿಸ್ತಾನ್ ಬೌಲರ್‌ಗಳನ್ನು ಕಾಡಿದರು.

ಬುಧವಾರ ಲಕ್ನೋದಲ್ಲಿ ನಡೆದ ಪಂದ್ಯದಲ್ಲಿ ಶುಭಮನ್‌ ಗಿಲ್, ಮಾಜಿ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್‌ ಆರಂಭಿಸಲು ಬಾರಲಿಲ್ಲ. ಯುವ ಆಟಗಾರ ಯಶಸ್ವಿ ಜೈಸ್ವಾಲ್‌, ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್‌ ಆರಂಭಿಸಿದರು. ಆದರೆ ಇವರು ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಶುಭಮನ್‌ ಗಿಲ್‌, ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಾಡಿ ಅಬ್ಬರಿಸಿದರು.

Shubman Gill

26 ವರ್ಷದ ಶುಭಮನ್‌ ಗಿಲ್‌ ತಮ್ಮ 63ನೇ ಏಕದಿನ ಪಂದ್ಯದಲ್ಲಿ 9ನೇ ಶತಕ ಬಾರಿಸಿ ಅಬ್ಬರಿಸಿದರು. ಧರ್ಮಶಾಲಾದಲ್ಲಿ ಅಜೇಯ 84 ರನ್‌ ಬಾರಿಸಿದ್ದ ಶುಭಮನ್‌ ಗಿಲ್‌, ಅದೇ ಫಾರ್ಮ್‌ನ್ನು ಎರಡನೇ ಪಂದ್ಯದಲ್ಲೂ ಮುಂದುವರೆಸಿದರು. ತಮ್ಮ ಅನುಭವ ಬಳಸಿಕೊಂಡು ಬ್ಯಾಟ್ ಮಡಿದ ಶುಭಮನ್‌ ಗಿಲ್‌ ಕ್ಲಾಸ್ ಪ್ರದರ್ಶನ ನೀಡಿದರು. ಇವರು 33ನೇ ಓವರ್‌ನ 4ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಶತಕ ಬಾರಿಸಿ ಮಿಂಚಿದರು. ಈ ಮೂಲಕ ಶುಭಮನ್‌ ಗಿಲ್‌ 77 ಎಸೆತಗಳಲ್ಲಿ 13 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಶತಕ ಬಾರಿಸಿ ಮಿಂಚಿದರು.

ನಾಯಕನಾಗಿ ಮೊದಲ ಶತಕ

ರೋಹಿತ್ ಶರ್ಮಾ ಅವರಿಂದ ನಾಯಕತ್ವ ಪಡೆದ ಬಳಿಕ ಶುಭಮನ್‌ ಗಿಲ್ ಈ ವರೆಗೆ ಏಕದಿನ ಫಾರ್ಮೆಟ್‌ನಲ್ಲಿ ಶತಕವನ್ನು ಬಾರಿಸಿರಲಿಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಆಟಗಾರನಾಗಿ ಈಗಾಗಲೇ 8 ಶತಕ ಬಾರಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ನಾಯಕನಾಗಿ ಶತಕ ಸಿಡಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡರು. ಗಿಲ್ ಈಗ ಭಾರತೀಯ ನಾಯಕನಾಗಿ ಅತಿ ವೇಗದ ಏಕದಿನ ಶತಕ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಇದಕ್ಕೂ ಮೊದಲು, ರೋಹಿತ್ ಶರ್ಮಾ 2023 ರಲ್ಲಿ ಅಫ್ಘಾನಿಸ್ತಾನ ವಿರುದ್ಧ 63 ಎಸೆತಗಳಲ್ಲಿ ನಾಯಕನಾಗಿ ಈ ಮೈಲಿಗಲ್ಲು ತಲುಪಿದರು.

ವೇಗದ ಏಕದಿನ ಶತಕ ಬಾರಿಸಿದ ಭಾರತೀಯ ನಾಯಕರು

63, ರೋಹಿತ್ ಶರ್ಮಾ , ಅಫ್ಘಾನಿಸ್ತಾನ, ದೆಹಲಿ, 2023
69, ವೀರೇಂದ್ರ ಸೆಹ್ವಾಗ್ , ವೆಸ್ಟ್ ಇಂಡೀಸ್, ಇಂದೋರ್, 2011
76, ವಿರಾಟ್ ಕೊಹ್ಲಿ , ಶ್ರೀಲಂಕಾ, ಕೊಲಂಬೊ, 2017
76, ರೋಹಿತ್ ಶರ್ಮಾ , ಇಂಗ್ಲೆಂಡ್, ಕಟಕ್, 2025
77, ಶುಭಮನ್ ಗಿಲ್ , ಅಫ್ಘಾನಿಸ್ತಾನ, ಲಕ್ನೋ, 2026

Story first published: Wednesday, June 17, 2026, 15:51 [IST]
Other articles published on Jun 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+